ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಹದಿ ಪ್ರಕರಣ: ಟ್ವಿಟ್ಟರ್ ಇಂಡಿಯಾಗೆ ನೋಟಿಸ್

By Kiran B Hegde
|
Google Oneindia Kannada News

ಬೆಂಗಳೂರು, ಡಿ. 15: ಶಂಕಿತ ಟ್ವಿಟ್ಟರ್ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್‌ನ @ShamiWitness ಖಾತೆಯ ಟ್ವೀಟ್‌ಗಳಿಗೆ ಸಂಬಂಧಿಸಿದ ವಿವರಗಳೊಂದಿಗೆ ಖುದ್ದು ಹಾಜರಾಗಬೇಕೆಂದು ಟ್ವಿಟ್ಟರ್ ಭಾರತ ಮುಖ್ಯಸ್ಥರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಟ್ವಿಟ್ಟರ್ ಕಂಪನಿ ಭಾರತ ಮುಖ್ಯಸ್ಥರಿಗೆ Criminal Procedure Code ನ 91ನೇ ಪರಿಚ್ಛೇದದಡಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಉಪ ಆಯುಕ್ತ ಅಭಿಷೇಕ ಗೋಯಲ್ ನೋಟಿಸ್ ಜಾರಿ ಮಾಡಿದ್ದಾರೆ. [ಮೆಹದಿ ಬಂಧನ : ಟಾಪ್ ಟೆನ್ ಬೆಳವಣಿಗೆ]

biswas

"ಪ್ರಕರಣ ಕುರಿತು ವಿವರ ನೀಡುವಂತೆ ಟ್ವಿಟ್ಟರ್ ಇಂಡಿಯಾಕ್ಕೆ ಐದು ದಿನಗಳ ಹಿಂದೆಯೇ ಸೂಚಿಸಲಾಗಿತ್ತು. ಆದರೆ, ಅವರು ಸೂಕ್ತವಾಗಿ ಸ್ಪಂದಿಸಿಲ್ಲ. ಆದ್ದರಿಂದ ನೋಟಿಸ್ ನೀಡುವುದು ಅನಿವಾರ್ಯವಾಯಿತು" ಎಂದು ಅಭಿಷೇಕ ಗೋಯಲ್ ತಿಳಿಸಿದ್ದಾರೆ. [ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?]

ಆದರೆ, ಟ್ವಿಟ್ಟರ್ ಇಂಡಿಯಾದಿಂದ ಎಂತಹ ಮಾಹಿತಿಗಳನ್ನು ಪಡೆಯಲಾಗುತ್ತದೆ ಎಂಬುದರ ಕುರಿತು ವಿವರ ನೀಡಲು ಅವರು ನಿರಾಕರಿಸಿದ್ದಾರೆ. [ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]

English summary
The city police gave noticed to the head of Twitter India to present himself before them with all the details they had requisitioned from the company about the pro-IS twitter handle @ShamiWitness. Crime branch DCP Abhishek Goyal told they are not happy with twitter india response to police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X