ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರಿಂದ ಪಬ್, ರೆಸ್ಟೋರೆಂಟ್ ಮಾಲಿಕರಿಗೆ ನೋಟಿಸ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 30 : ಹೊಸ ವರ್ಷ ಸಂಭ್ರಮಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪಬ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಹೊಸ ವರ್ಷಾಚರಣೆ: ಬೆಂಗಳೂರು ಪೊಲೀಸ್ ಕಮಿಷನರ್ ಸಂದರ್ಶನಹೊಸ ವರ್ಷಾಚರಣೆ: ಬೆಂಗಳೂರು ಪೊಲೀಸ್ ಕಮಿಷನರ್ ಸಂದರ್ಶನ

ಡಿಸೆಂಬರ್ 31 ರ ರಾತ್ರಿ 2 ಗಂಟೆಯವರೆಗೆ ವಹಿವಾಟು ನಡೆಸಲು ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಈಗಾಗಲೇ ಆದೇಶ ಹೊರಡಿಸಿದ್ದಾಋಎ. ಅದೇ ವೇಳೆ ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಿರಲಿದೆ. ಅಲ್ಲಿ ಸಣ್ಣ ಪುಟ್ಟ ಗೊಂದಲಗಳಿಂದ ದೊಡ್ಡ ಗಲಾಟೆ ನಡೆಯುವ ಸಾದ್ಯತೆ ಇದೆ. ಅಂಥಹ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಮಾಲೀಕರಿಗೆ ಸೂಚನೆ ನೀಡಲಾಗಿದೆ.

ವರ್ಷಾಂತ್ಯದ ಪಾರ್ಟಿ ಹಾಳುಗೆಡವಲು ಪೊಲೀಸ್ ಸಿದ್ಧ!ವರ್ಷಾಂತ್ಯದ ಪಾರ್ಟಿ ಹಾಳುಗೆಡವಲು ಪೊಲೀಸ್ ಸಿದ್ಧ!

City police commissioner issued notice to all pub and restaurants

ನೋಟಿಸ್ ನಲ್ಲಿ ಏನಿದೆ: ಕ್ಯಾಮರಾಗಳ ಡಿವಿಆರ್ ಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಬೇಕು. ಯಾವುದಾದರೂ ಅಹಿತಕರ ಘಟನೆಗಳು ನಡೆದರೆ ಆ ಸಮಯದಲ್ಲಿ ಡಿವಿಆರ್ ಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆಯಲಿದ್ದಾರೆ. ಒಂದೊಮ್ಮೆ ಡಿವಿಆರ್ ಇಲ್ಲವೆಂದು ಕಾರಣ ನೀಡಿದರೆ, ಸಾಕ್ಷ್ಯ ನಾಶ ದ ಆರೋಪದಡಿ ಕ್ರಮ ಜರುಗಿಸಲಾಗುತ್ತದೆ.

ಹೊಸ ವರ್ಷದ ಪಾರ್ಟಿಗಳು ಇಂದಿರಾನಗರ, ಕೋರಮಂಗಲಕ್ಕೆ ಶಿಫ್ಟ್ಹೊಸ ವರ್ಷದ ಪಾರ್ಟಿಗಳು ಇಂದಿರಾನಗರ, ಕೋರಮಂಗಲಕ್ಕೆ ಶಿಫ್ಟ್

ಪ್ರತಿಯೊಂದು ಪಬ್ , ಬಾರ್‌ ಹಾಗೂ ರೆಸ್ಟೊರೆಂಟ್ ಗಳ ಮುಂಭಾಗ ಮತ್ತು ಒಳಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಗಳನ್ನು ವೀಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಮಹಿಳೆಯರು ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕುಡಿದ ಅಮಲಿನಲ್ಲಿ ಕೆಲವರು ಒತ್ತಾಯದಿಂದ ಹೊಸ ವರ್ಷದ ಶುಭಾಶಯ ಕೋರುವ ಸಾಧ್ಯತೆ ಹೆಚ್ಚಿದೆ. ಯಾರಾದರೂ ಆ ರೀತಿ ವರ್ತಿಸಿದರೆ, ತಕ್ಷಣ ಪೊಲೀಸರಿಗೆ ತಿಳಿಸಬೇಕು. ಒಂದೊಮ್ಮೆ, ಅಂಥ ಘಟನೆ ಬಗ್ಗೆ ಮೂರನೇ ವ್ಯಕ್ತಿಯಿಂದ ಮಾಹಿತಿ ಬಂದರೆ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದೇವೆ ಎಂಬುದು ನೋಟಿಸ್ ನಲ್ಲಿದೆ.

ಮದ್ಯ ಮಾರಾಟ ನಿಷೇಧದ ಕುರಿತು ಕಮಿಷನ್ ಸ್ಪಷ್ಟನೆ: ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಡಿ.31ಹಾಗೂ ಜನವರಿ1 ರಂದು ಮದ್ಯಪಾನ ಮಾರಾಟ ನಿಷೀಧಿಸಿ ಇನ್‌ಸ್ಪೆಕ್ಟರ್ ಆದೇಶ ಹೊರಡಿಸಿದ್ದು, ಅದರ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ಬಗ್ಗೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಸೀಮಂತ್ ಕುಮಾರ್‌ ಸಿಂಗ್‌, ಅದು ಸುಳ್ಳು. ಆದೇಶ ಹೊರಡಿಸುವ ಅಧಿಕಾರ ಕಮಿಷನರ್‌ ಅವರಿಗೆ ಇದೆ. ಇನ್‌ಸ್ಪೆಕ್ಟರ್ ಗೆ ಇಲ್ಲ ಅಂತಹ ಯಾವುದೇ ಸೂಚನೆಯನ್ನು ನಾವು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದಿರಾನಗರದಲ್ಲಿ ಸ್ಥಳೀಯರೊಂದಿಗೆ ಪೊಲೀಸರ ಮಾತುಕತೆ: ಶಿವಾಜಿನಗರ, ಕಬ್ಬನ್ ಪಾರ್ಕ್‌ ಹಾಗೂ ಅಶೋಕ ನಗರ ಠಾಣೆ ವ್ಯಾಪ್ತಿಯ ಪಬ್, ಬಾರ್‌ ಹಾಗೂ ರೆಸ್ಟೊರೆಂಟ್ ಗಳಲ್ಲಿ ಮದ್ಯಪಾನ ಮಾರಾಟ ನಿಷೇಧಿಸಿರುವ ಮಾಹಿತಿ ಇದೆ. ಇದರಿಂದಾಗಿ ಮದ್ಯ ಕುಡಿಯಲು ಹಲವರು ಇಂದಿರಾನಗರಕ್ಕೆ ಬರಲಿದ್ದು, ಸ್ಥಳೀಯರು ಸಮಸ್ಯೆ ಅನುಭವಿಸಲಿದ್ದಾರೆ ಎಂದು ಇಂದಿರಾನಗರ ನಿವಾಸಿಗಳು ದೂರಿದ್ದಾರೆ.

ಸೀಮಂತ್ ಕುಮಾರ್‌ ಸಿಂಗ್‌ ಅವರನ್ನು ಭೇಟಿಯಾದ ನಿವಾಸಿಗಳು, ಅಳಲು ತೋಡಿಕೊಂಡರು. ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸೀಮಂತ್ ಕುಮಾರ್‌ ಹೇಳಿದ್ದರಿಂದ ನಿವಾಸಿಗಳು ವಾಪಸ್‌ ಹೋದರು.

English summary
The city police commissioner issued notice to all pub and restaurants owners for new year celebrations, They should install CCTV and can open pub and restaurants till 2am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X