ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಳು ವರ್ಷ ಹಳೆಯ ಪ್ರಕರಣ ಸಂಬಂಧ ಈಶ್ವರಪ್ಪ ವಿರುದ್ಧ ವಾರೆಂಟ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಉಪಚುನಾವಣೆ ಭರಾಟೆಯಲ್ಲಿರುವ ರಾಜ್ಯ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ಸಂಕಷ್ಟವೊಂದು ಎದುರಾಗಿದೆ.

ಮೋದಿ ಭಾರತ ಕಟ್ಟಿದರೆ, ಮಹಾಘಟಬಂಧನ ಕೆಡವುತ್ತಿದೆ: ಶಾಮೋದಿ ಭಾರತ ಕಟ್ಟಿದರೆ, ಮಹಾಘಟಬಂಧನ ಕೆಡವುತ್ತಿದೆ: ಶಾ

2011ರ ಪ್ರಕರಣವೊಂದಕ್ಕೆ ಸಬಂಧಿಸಿದಂತೆ ಈಶ್ವರಪ್ಪ ಅವರ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಅವರೇ ಖುದ್ದಾಗಿ ಮತ್ತು ಕಡ್ಡಾಯವಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ವಾರೆಂಟ್‌ಗೆ ಉತ್ತರ ನೀಡಬೇಕಾಗುವ ಸಾಧ್ಯತೆ ಇದೆ.

ಸಿದ್ದರಾಮಯ್ಯನವರಿಗೆ ರಾಹು, ಕೇತು, ಶನಿ ಯಾರೆಂಬುದನ್ನು ಸ್ಪಷ್ಟಪಡಿಸಿದ ಈಶ್ವರಪ್ಪಸಿದ್ದರಾಮಯ್ಯನವರಿಗೆ ರಾಹು, ಕೇತು, ಶನಿ ಯಾರೆಂಬುದನ್ನು ಸ್ಪಷ್ಟಪಡಿಸಿದ ಈಶ್ವರಪ್ಪ

2011 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಈಶ್ವರಪ್ಪ ಅವರು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು ಅದನ್ನು ಪ್ರಶ್ನಿಸಿ ವಕೀಲ ಧರ್ಮಪಾಲ ಎಂಬುವರು ನಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

City civil court issued warrant against BJP leader KS Eshwarappa

ಈ ವರ್ಷಗಳ ಸಮಯದಲ್ಲಿ ಹಲವಾರು ಬಾರಿ ಈಶ್ವರಪ್ಪ ಅವರಿಗೆ ನೊಟೀಸ್ ಕಳಿಸಿದ್ದರೂ ಸಹ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಹಾಗಾಗಿ ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯ ಈಗ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಸಿದ್ದರಾಮಯ್ಯರ ಹೀನಾಯ ಸ್ಥಿತಿ ಯಾವ ರಾಜಕಾರಣಿಗೂ ಬೇಡ: ಈಶ್ವರಪ್ಪ ಸಿದ್ದರಾಮಯ್ಯರ ಹೀನಾಯ ಸ್ಥಿತಿ ಯಾವ ರಾಜಕಾರಣಿಗೂ ಬೇಡ: ಈಶ್ವರಪ್ಪ

ವಾರೆಂಟ್ ಹೊರಡಿಸಿರುವ ಕಾರಣ ಈಶ್ವರಪ್ಪ ಅವರು ವಾರೆಂಟ್‌ನಲ್ಲಿ ಉಲ್ಲೇಖಿತ ದಿನದಲ್ಲಿ ತಾವೇ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಬೇಕಿದೆ. ವಾರೆಂಟ್‌ಗೂ ಉತ್ತರ ನೀಡದಿದ್ದಲ್ಲಿ ಬಂಧಿಸುವ ಅವಕಾಶವೂ ಇದೆ ಎನ್ನಲಾಗಿದೆ.

English summary
City civil court issued non bailable warrant against BJP leader KS Eshwarappa. a lawyer filed application in 2011 that Eshwarappa called for bandh that is against constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X