ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಐಟಿಯು ಸದಸ್ಯರಿಂದ ವಿಧಾನಸೌಧದೆದುರು ಪ್ರತಿಭಟನೆ: ಬೇಡಿಕೆಯೇನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಕೊವಿಡ್ ಪರಿಹಾರ ಕಿಟ್ ವಿತರಿಸಬೇಕು, ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಮಾಡಬೇಕು, ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಬಿಡುಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಿಐಟಿಯು ಸದಸ್ಯರು ವಿಧಾನಸೌಧದೆದುರು ಪ್ರತಿಭಟನೆ ನಡೆಸಿದರು.

ಕಾರ್ಮಿಕರು, ಶ್ರಮಜೀವಿ ಹಾಗೂ ಹಕ್ಕುಗಳ ರಕ್ಷಣೆಗಾಗಿ ವಿಧಾನಸೌಧ ಚಲೋ ಹಮ್ಮಿಕೊಂಡಿತ್ತು, ಕಾರ್ಮಿಕರು ಸಚಿವರು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಹೋರಾಟ ಮುದುವರೆಸಲಾಗುವುದು ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.

ಏನಕ್ಕೂ ಸಾಲದ ಎಂಎಸ್‌ಪಿ: ಕೇಂದ್ರದ ವಿರುದ್ಧ ರೈತರ ಆಕ್ರೋಶಏನಕ್ಕೂ ಸಾಲದ ಎಂಎಸ್‌ಪಿ: ಕೇಂದ್ರದ ವಿರುದ್ಧ ರೈತರ ಆಕ್ರೋಶ

ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ನೂರಾರು ಕಾರ್ಮಿಕರು, ಸಿಐಟಿಯು ಸದಸ್ಯರು ಸೇರಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

CITU Members Staged A Protest Near Vidhana Soudha In Bengaluru Today

ಬೇಡಿಕೆಗಳೇನು?: ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸದ ಮಿತಿ ಹೆಚ್ಚಳ, ಕಾರ್ಮಿಕ ಕಾಯ್ದೆಯ ಪರಿಭಾಷೆಗೆ ತಿದ್ದುಪಡಿ, ಕೈಗಾರಿಕಾ ಕಾಯ್ದೆ ಅಧ್ಯಾಯ 5ಬಿಗೆ ತಿದ್ದುಪಡಿ ಹಾಗೂ ಕಾರ್ಮಿಕರ ನೇಮಕಾತಿಗೆ ಪರವಾನಗಿ ಮಿತಿ 20 ರಿಂದ 50 ವರ್ಷಕ್ಕೆ ಹೆಚ್ಚಳ ತಿದ್ದುಪಡಿಗಳ ಸುಗ್ರೀವಾಜ್ಞೆ ಕೈಬಿಡಬೇಕೆಂದು ಆಗ್ರಹಿಸಿದರು.

Recommended Video

KG halli , DJ halli ಪ್ರಕರಣದ ಆರೋಪಿ Naveenಗೆ Bail ನಿರಾಕರಣೆ | Oneindia Kannada

ಸರ್ಕಾರಗಳು ಬಂಡವಾಳಗಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡುತ್ತಿದೆ. ಕೈಗಾರಿಕಾ ವ್ಯಾಜ್ಯ ಮತ್ತು ಇತರೆ ಕಾಯ್ದೆ ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ಕೈಗಾರಿಕ ವಿವಾದ ಕಾಯ್ದೆಯ ತಿದ್ದುಪಡಿ ಮಾಡಿ ಲೇ ಆಫ್ , ರಿಟ್ರಿಚ್‌ಮೆಂಟ್, ಕ್ಲೋಸರ್ ಮಾಡಲು ಸರ್ಕಾರ ಅನುಮತಿಗೆ ಇರುವ 100 ಮಂದಿ ಕಾರ್ಮಿಕರ ಮಿತಿಯನ್ನು 300 ಕ್ಕೆ ಹೆಚ್ಚಿಸಲಾಗಿದೆ ಎಂದು ದೂರಿದ್ದಾರೆ.

English summary
Members of Centre of Indian Trade Unions (CITU) staged a protest near Vidhana Soudha in Bengaluru today against the labourbills in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X