ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಲಭೆ ತನಿಖೆಗೆ ಸತ್ಯ ಶೋಧನಾ ಸಮಿತಿ

|
Google Oneindia Kannada News

ಬೆಂಗಳೂರು, ಆ. 14: ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಪ್ರದೇಶಗಳಲ್ಲಿ ನಡೆದ ಗಲಭೆ ಕುರಿತು ಪ್ರಜಾಪ್ರಭುತ್ವಕ್ಕಾಗಿ ನಾಗರಿಕರು (ಸಿಟಿಜನ್ಸ್ ಫಾರ್ ಡೆಮಾಕ್ರೆಸಿ) ವೇದಿಕೆ ನಿಷ್ಟಕ್ಷಪಾತದ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಕೊಡಲು ತೀರ್ಮಾನಿಸಿದೆ. ಇದೇ ಹಿನ್ನೆಲೆಯಲ್ಲಿ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಲಾಗಿದೆ.

Recommended Video

ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ 74 ನೇ ಸ್ವಾತಂತ್ರ್ಯ ದಿನದಂದು ಸಶಸ್ತ್ರ ಪಡೆಗಳಿಗೆ ಗೌರವ. | Oneindia Kannada

ಬೆಂಗಳೂರಿನ ಪುಲಕೇಶಿನ ನಗರ ವ್ಯಾಪ್ತಿಯಲ್ಲಿ ಗಲಭೆ ಸಂಭವಿಸಿದೆ. ಜನ ಸಾಮಾನ್ಯರ ಆಸ್ತಿಪಾಸ್ತಿ ನಷ್ಠವಾಗಿದೆ. ಜೊತೆಗೆ ಪರಿಶಿಷ್ಟ ಜಾತಿಗೆ ಸೇರಿರುವ ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆ ದಾಳಿಯಾಗಿದೆ. ಜೊತೆಗೆ ಪೊಲೀಸ್ ಠಾಣೆಯ ಮೇಲೆಯೂ ಕಲ್ಲು ತೂರಾಟ ನಡೆದಿದೆ. ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಿಂದೂಗಳ ಮನೆಗಳನ್ನು ಲೂಟಿ ಮಾಡಲಾಗಿದೆ ಎಂಬ ಮಾಹಿತಿಯಿದೆ. ಈ ರೀತಿಯ ಘಟನೆಗಳು ಬೆಂಗಳೂರು ನಾಗರಿಕರ ಒಗ್ಗಟ್ಟಿಗೆ ಭಂಗ ತರುವಂತಿವೆ.

ದೊಂಬಿ ಎಬ್ಬಿಸಿದವರ ಬೆಚ್ಚಿ ಬೀಳಿಸುವ ಬೇಡಿಕೆ ಏನಿತ್ತು ಗೊತ್ತಾ?ದೊಂಬಿ ಎಬ್ಬಿಸಿದವರ ಬೆಚ್ಚಿ ಬೀಳಿಸುವ ಬೇಡಿಕೆ ಏನಿತ್ತು ಗೊತ್ತಾ?

ನಿಷ್ಪಕ್ಷಪಾತದ, ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳಿಲ್ಲದೆ ತಟಸ್ಥವಾಗಿದ್ದುಕೊಂಡು ಇಡೀ ಘಟನೆಯ ತನಿಖೆ ಮಾಡುವುದು ಸಂಸ್ಥೆಯ ಉದ್ದೇಶ. ಹೀಗಾಗಿ ಇಡೀ ಘಟನೆಯನ್ನು ವಿಸ್ತಾರವಾಗಿ ನೋಡುವ ಅವಶ್ಯಕತೆಯಿದೆ. ಹೀಗಾಗಿ ಸತ್ಯ ಶೋಧನಾ ಸಮಿತಿ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ವಿವರಗಳನ್ನು ಸಂಗ್ರಹಿಸಲಿದೆ. ಜೊತೆಗೆ ಘಟನೆ ಸಂತ್ರಸ್ತರನ್ನು ಭೇಟಿ ಮಾಡಿ ಹೇಳಿಕೆ ಪಡೆಯಲಿದೆ.

Citizens For Democracy Fact-finding Committee Will Submit Report To Govt On Bengaluru Riot

ನಿವೃತ್ತ ನ್ಯಾಯಾಧೀಶ ಸಮಿತಿಯ ಅಧ್ಯಕ್ಷರಾಗಿದ್ದು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ವಕೀಲರು, ಪ್ರಾಧ್ಯಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಸಮಿತಿ ಒಳಗೊಂಡಿದೆ. ನಿವೃತ್ತ ನ್ಯಾಯಾಧೀಶ ಶ್ರೀಕಾಂತ್ ಬಬಲಾದಿ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿರಚನೆ ಮಾಡಲಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಫ್ಎಸ್ ಅಧಿಕಾರಿ ಡಾ. ಆರ್. ರಾಜು, ನಿವೃತ್ತ ಐಆರ್ಎಸ್ ಅಧಿಕಾರಿ ಡಾ. ಪ್ರಕಾಶ್, ನಿವೃತ್ತ ಡಿಜಿಪಿ ಎಂ.ಎನ್. ಕೃಷ್ಣಮೂರ್ತಿ, ಪತ್ರಕರ್ತರಾದ ಆರ್.ಕೆ. ಮ್ಯಾಟೂ, ಸಂತೋಷ್ ತಮ್ಮಯ್ಯ, ಪ್ರಾಧ್ಯಾಪಕ ಡಾ.ಎಂ. ಜಯಪ್ಪ, ಪ್ರೊಫೆಸರ್ ಡಾ. ಎಚ್. ಅರವಿಂದ, ಸಮಾಜ ಸೇವಕರಾದ ಮುನಿರಾಜು,ಜೆರೋಮ್ ಆಂಟೊ ಹಾಗೂ ನ್ಯಾಯವಾದಿ ಕ್ಷಮಾ ನರಗುಂದ ಸಮಿತಿ ಸದಸ್ಯರಾಗಿದ್ದಾರೆಂದು ಪ್ರಜಾಪ್ರಭುತ್ವಕ್ಕಾಗಿ ನಾಗರಿಕರು ವೇದಿಕೆ ಸಂಚಾಲಕ ಜೆರೋಮ್ ಆಂಟೊ ತಿಳಿಸಿದ್ದಾರೆ.

English summary
Citizens for Democracy formed a FACT FINDING COMMITTEE consisting of prominent representatives of the society. This FACT FINDING COMMITTEE will visit the affected areas, hear from the victims, access available evidence and submit a report to the Government for needful action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X