ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರು ಕ್ಲೀನ್ ಮಾಡಿದ್ರು, ಬಿಬಿಎಂಪಿಯೇ ಕಸ ತಂದು ಸುರೀತು

|
Google Oneindia Kannada News

ಬೆಂಗಳೂರು,ಜನವರಿ 27:ಕಸ್ತೂರಿ ನಗರದ ಜನತೆಯು ಬಿಬಿಎಂಪಿ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಕಸ್ತೂರಿ ನಗರದ ಬೆನ್ನಿಗಾನಹಳ್ಳಿ ಫ್ಲೈಓವರ್ ಕೆಳಗಡೆ ನಿತ್ಯ ತ್ಯಾಜ್ಯ ತಂದು ಸುರಿಯಲಾಗುತ್ತಿತ್ತು. ಸ್ಥಳೀಯರು ಬಿಬಿಎಂಪಿಗೆ ಎಷ್ಟೇ ದೂರು ಹೇಳಿದರು ಪ್ರಯೋಜನವಾಗಲಿಲ್ಲ.

ನಿತ್ಯ ತ್ಯಾಜ್ಯದಿಂದ ದುರ್ನಾಥ ಬರುತ್ತಿತ್ತು. ಹೀಗಾಗಿ ಸ್ಥಳೀಯರೇ ಲಕ್ಷಾಂತರ ರೂ ಖರ್ಚು ಮಾಡಿ 2017 ರಲ್ಲಿ ಅದನ್ನು ಸ್ವಚ್ಛಗೊಳಿಸಿದ್ದರು.ಅದಾದ ಬಳಿಕ ಅಲ್ಲಿ ತ್ಯಾಜ್ಯ ಸುರಿಯುವ ಯಾವುದೇ ಕೆಲಸ ನಡೆದಿರಲಿಲ್ಲ.

ಕೊರೊನಾ ಲಸಿಕೆ ಅಭಿಯಾನ: ಬಿಬಿಎಂಪಿ ಹೊರವಲಯದಲ್ಲಿ ಕಳಪೆ ಸಾಧನೆಕೊರೊನಾ ಲಸಿಕೆ ಅಭಿಯಾನ: ಬಿಬಿಎಂಪಿ ಹೊರವಲಯದಲ್ಲಿ ಕಳಪೆ ಸಾಧನೆ

ಆದರೆ ಇದೀಗ ಬಿಬಿಎಂಪಿಯು ಅದೇ ಜಾಗದಲ್ಲಿ ಬಿಬಿಎಂಪಿಯು ಇದೀಗ ತ್ಯಾಜ್ಯ ಸುರಿಯಲು ಮುಂದಾಗಿದೆ.ಫ್ಲೈಓವರ್ ಕೆಳಗಡೆ ತ್ಯಾಜ್ಯವನ್ನು ಸುರಿಯುವ ಘಟಕದಂತೆ ಅದನ್ನು ಬಳಸಿಕೊಳ್ಳುತ್ತಿದೆ, ವಿಜಯನಗರ, ಕಸ್ತೂರಿನಗರ, ಬೆನ್ನಿಗಾನಹಳ್ಳಿ, ಸಿವಿ ರಾಮನ್ ನಗರದಿಂದ ಒಟ್ಟುಗೂಡಿಸಿದ ಒಣ ತ್ಯಾಜ್ಯವನ್ನು ಫ್ಲೈಓವರ್ ಕೆಳಗೆ ಸುರಿಯಲಾಗುತ್ತಿದೆ.

Citizens Cleaned, BBMP Dumped Garbage Below Flyover

ಇದನ್ನು 'ಬೆಂಗಳೂರು ಮಿರರ್' ವರದಿ ಮಾಡಿದೆ. ನಾವು ಇಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ತೆಗೆಯಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಹಾಗೆಯೇ ಅದಾದ ಬಳಿಕ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಕಸವನ್ನು ಹಾಕದಂತೆ ನೋಡಿಕೊಂಡಿದ್ದೇವೆ.ಈಗ ಬಿಬಿಎಂಪಿ ಅದ್ಹೇಗೆ ತ್ಯಾಜ್ಯ ಘಟಕವನ್ನಾಗಿ ನಿರ್ಮಿಸುತ್ತದೆ ಎಂದು ಕಸ್ತೂರಿನಗರ ವೆಲ್‌ಫೇರ್ ಅಸೋಸಿಯೇಷನ್ ಪ್ರಶ್ನಿಸಿದೆ.

Recommended Video

ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ-ಇಲ್ಲದಿದ್ರೆ Trade License Cancel ! | Oneindia Kannada

ಬಿಬಿಎಂಪಿಯು ಅಲ್ಲೇ ರೈಲ್ವೆ ಹಳಿ ಮೇಲೆ ಸುರಿಯುವ ಚಿಕನ್ ವೇಸ್ಟ್,ತ್ಯಾಜ್ಯದ ಬಗ್ಗೆ ಗಮನಹರಿಸಿಲ್ಲ, ಆದರೆ ಸ್ವಚ್ಛವಾಗಿರುವ ಪ್ರದೇಶದಲ್ಲಿ ಕಸವನ್ನು ತಂದು ಸುರಿಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಆ ಜಾಗದಲ್ಲಿ ಕಸ ಹಾಕಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

English summary
Kasturinagar Residents unhappy with BBMP's plan to set up waste collection centre at spot below flyover they cleaned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X