ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಪಾದಚಾರಿಗಳ ಹಕ್ಕುಗಳಿಗಾಗಿ 'ನಡೆಯಲು ಬಿಡಿ' ಅಭಿಯಾನ

|
Google Oneindia Kannada News

ಬೆಂಗಳೂರು, ಜನವರಿ 17: ಸಿಟಿಜನ್ಸ್ ಫಾರ್ ಬೆಂಗಳೂರು ಆಶ್ರಯದಲ್ಲಿ ಕಾಲ್ನಡಿಗೆಯವರ ಹಕ್ಕುಗಳ ರಕ್ಷಣೆಗಾಗಿ 'ನಡೆಯಲು ಬಿಡಿ' ಎಂಬ ಅಭಿಯಾನವನ್ನು ಜ.20 ರಂದು ಮಧ್ಯಾಹ್ನ3.30ಕ್ಕೆ ರಿಚ್ಮಂಡ್ ವೃತ್ತದಲ್ಲಿ ನಡೆಯಲಿದೆ.

ಮಿತಿಮೀರಿದ ವಾಹನಗಳ ಭರಾಟೆಯಲ್ಲಿ ನಲುಗಿ ಹೋಗುತ್ತಿರುವ ಬೆಂಗಳೂರು ನಗರದ ರಸ್ತೆಗಳಲ್ಲಿ ನಡೆದುಕೊಂಡು ಹೋಗುವ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಸಿಟಿಜನ್ಸ್ ಫಾರ್ ಬೆಂಗಳೂರು ನಡೆಯಲು ಬಿಡಿ ಅಭಿಯಾನ ಹಮ್ಮಿಕೊಂಡಿದೆ.

ಬೆಂಗಳೂರು ನಗರದ ರಸ್ತೆಗಳಲ್ಲಿ ಒಂದು ಕಡೆಯಿಂದ ಮತ್ತೊಂದುಕಡೆ ದಾಟುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕಾಲ್ನಡಿಗೆಯಲ್ಲಿ ಹೋಗುವವರ ಮೇಲೆ ಕಾನೂನು ಪ್ರಹಾರ ನಡೆಯುತ್ತಿದೆ. ರಸ್ತೆ ಕ್ರಾಸಿಂಗ್ ವೇಳೆ ನುಗ್ಗಿ ಬರುವ ಕಾರ್ ಗಳು ದೊಡ್ಡ ವಾಹನಗಳು ಕಾಲ್ನಡಿಗೆಯವರನ್ನು ತಾರತಮ್ಯ ಭಾವನೆಯಿಂದ ನೋಡುವ ಸ್ಥಿತಿ ಬಂದಿದೆ.

Citizen for Bengaluru holds campaign for Nadeyalu Bidi

ರಸ್ತೆಗಳಲ್ಲಿ ಉಳಿದೆಲ್ಲ ವಾಹನಗಳಿಂದ ಅತಿ ಕಡಿಮೆ ಜಾಗ ಆವರಿಸುವುದು, ಮಾಲಿನ್ಯಕ್ಕೆ ಕಾರಣವಾಗುವುದು , ಕಾಲ್ನಡಿಗೆಯಲ್ಲಿ ಹೋಗುವವರು, ಆದಾಗ್ಯೂ ಪಾದಚಾರಿಗಳಿಗೆ ಪ್ರತ್ಯೇಕ ಸಿಗ್ನಲ್ ಗಳಿಲ್ಲ. ಈ ತಾರತಮ್ಯ ವಿರುದ್ಧ ಹಾಗೂ ಕಾಲ್ನಡಿಗೆಯವರ ಹಕ್ಕುಗಳಿಗಾಗಿ ಒತ್ತಾಯಿಸಿ ಈ ಚಳವಳಿ ನಡೆಯುತ್ತಿದೆ.

English summary
Citizen for Bengaluru holding a campaign for 'Nadeyalu Bidi' demanding for walking space in roads on January 20 at 3.30pm at Richmond circle in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X