ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 25 ಕಡೆ ಹೈ ಸ್ಪೀಡ್ ವೈ-ಫೈ ಝೋನ್

|
Google Oneindia Kannada News

ಬೆಂಗಳೂರು, ಜುಲೈ 30 : ಬೆಂಗಳೂರು ನಗರದ 25 ಪ್ರದೇಶಗಳಲ್ಲಿ ಹೈ ಸ್ಪೀಡ್ ವೈ-ಫೈ ಝೋನ್ ನಿರ್ಮಾಣಗೊಳ್ಳಲಿದೆ. ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರುತ್ತಿದ್ದು, 2ನೇ ಹಂತದಲ್ಲಿ 300 ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಿಸ್ಕೋ ನಗರದ 25 ಪ್ರದೇಶಗಳಲ್ಲಿ ಹೈ ಸ್ಪೀಡ್ ವೈ-ಫೈ ಜೋನ್ ನಿರ್ಮಿಸಲಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಈ ಯೋಜನೆ ಜಾರಿಗೆ ಬರಲಿದೆ. ಜಯನಗರ ಬಸ್ ನಿಲ್ದಾಣ, ಉಡುಪಿ ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ.

ಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಬಿಬಿಎಂಪಿಯಿಂದ ಉಚಿತ ವೈಫೈಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಬಿಬಿಎಂಪಿಯಿಂದ ಉಚಿತ ವೈಫೈ

ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರುತ್ತಿದ್ದು, 2ನೇ ಹಂತದಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಆಸ್ಪತ್ರೆ, ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಪ್ರದೇಶಗಳಲ್ಲಿ ವೈ-ಫೈ ಝೋನ್ ನಿರ್ಮಿಸಲಾಗುತ್ತದೆ.

ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈ-ಫೈಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈ-ಫೈ

Cisco To Set Up 25 High Speed Wi Fi Zone Bengaluru

ಗೂಗಲ್ ನಗರದ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ರೈಲ್ ಟೆಲ್ ಜೊತೆ ಮೂರು ವರ್ಷದ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. ಬಿಎಸ್‌ಎನ್‌ಎಲ್‌ ಜೊತೆಗೂ ಒಪ್ಪಂದವಾಗಿತ್ತು. ಈಗ ಮುಂದಿನ ಹತ್ತು ವರ್ಷಕ್ಕೆ ಹೆಚ್ಚಾಗುವ ಇಂಟರ್ನೆಟ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವೈ-ಫೈ ಸೌಲಭ್ಯ ಕಲ್ಪಿಸಲಾಗುತ್ತದೆ.

ಮಾರ್ಚ್ ಅಂತ್ಯದೊಳಗೆ ಬೆಂಗಳೂರಿನ 200 ಕಡೆಗಳಲ್ಲಿ ಉಚಿತ ವೈ-ಫೈ ಸೌಲಭ್ಯಮಾರ್ಚ್ ಅಂತ್ಯದೊಳಗೆ ಬೆಂಗಳೂರಿನ 200 ಕಡೆಗಳಲ್ಲಿ ಉಚಿತ ವೈ-ಫೈ ಸೌಲಭ್ಯ

ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೇವೆ ಕಲ್ಪಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಈಗ ಖಾಸಗಿ ಕಂಪನಿಗಳು ವೈ-ಫೈ ಝೋನ್ ನಿರ್ಮಾಣಕ್ಕೆ ಮುಂದೆ ಬಂದಿವೆ.

English summary
Cisco announced a pilot project to set up 25 high-speed Wi-Fi zone at Bengaluru city. Zone will set up at places like Jayanagar bus stand and Udupi Garden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X