ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ವೃತ್ತಾಕಾರದ ಫ್ಲೈಓವರ್

|
Google Oneindia Kannada News

ಬೆಂಗಳೂರು,ಫೆಬ್ರವರಿ 09: ಬೈಯಪ್ಪನಹಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ವೃತ್ತಾಕಾರದ ಫ್ಲೈಓವರ್ ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Recommended Video

ಫ್ಲೈಓವರ್ ನಿರ್ಮಾಣದ ಕಾರಣ ಟ್ರಾಫಿಕ್ ಇರಲ್ಲಾ! | OneindiaKannada

120 ಕೋಟಿ ವೆಚ್ಚದಲ್ಲಿ ರೋಟರಿ ಫ್ಲೈಓವರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಬಾಣಸವಾಡಿ ಜಂಕ್ಷನ್‌ನ ಮೂಲಕ ಹೋಗಲು ಮೇಲ್ಸೇತುವೆ ಇದೆ, ಆದರೆ, ಕಮ್ಮನಹಳ್ಳಿಯಿಂದ ಬೈಯಪ್ಪನಹಳ್ಳಿಗೆ ಬರಲು ರೋಟರಿ ಫ್ಲೈಓವರ್ ನಿರ್ಮಾಣ ಮಾಡುವುದರಿಂದ ಬಾಣಸವಾಡಿ,ರಿಂಗ್ ರೋಡ್ ಮತ್ತು ಬೈಯಪ್ಪನಹಳ್ಳಿ ಮಾರ್ಗವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಜನರು ಕ್ಲೀನ್ ಮಾಡಿದ್ರು, ಬಿಬಿಎಂಪಿಯೇ ಕಸ ತಂದು ಸುರೀತುಜನರು ಕ್ಲೀನ್ ಮಾಡಿದ್ರು, ಬಿಬಿಎಂಪಿಯೇ ಕಸ ತಂದು ಸುರೀತು

ಈ ಯೋಜನೆಗೆ ಸರ್ಕಾರದ 0.61 ಎಕರೆ ಹಾಗೂ ರೈಲ್ವೆ ಇಲಾಖೆಯ 2.92 ಎಕರೆ ಭೂಮಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

Circular Flyover For Byappanahalli To Reduce Traffic

ಅದೇ ರೀತಿ ಬೈಯಪ್ಪನಹಳ್ಳಿ ನಿಲ್ದಾಣದಿಂದ ಕಮ್ಮನಹಳ್ಳಿ,ಬಾಣಸವಾಡಿ,ಫ್ರೇಜರ್‌ಟೌನ್ ಅಥವಾ ರಿಂಗ್ ರಸ್ತೆ ಮಾರ್ಗವಾಗಿ ಹೋಗಬಹುದು. ಒಂದು ಬಾರಿ ರೋಟರಿ ಮಾರ್ಗದಲ್ಲಿ ಹೋದರೆ ಎಲ್ಲಿ ಬೇಖಾದರೂ ಸಂಚಾರ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಬೆಂಗಳೂರಿನ ಓಕಳಿಪುರಂ ಮೇಲ್ಸೇತುವೆ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. ಬಿಬಿಎಂಪಿ 2014ರಲ್ಲಿ ರೈಲ್ವೆ ಇಲಾಖೆಯ ಸಹಯೋಗದಲ್ಲಿ 103 ಕೋಟಿ ರೂ. ವೆಚ್ಚದಲ್ಲಿ ಓಕಳಿಪುರಂ ಜಂಕ್ಷನ್‌ನಲ್ಲಿ ಅಷ್ಟಪಥ ಕಾರಿಡಾರ್ ಆರಂಭಿಸಿತ್ತು.

ಬೆಂಗಳೂರು-ತುಮಕೂರು ರೈಲ್ವೆ ಮಾರ್ಗದಲ್ಲಿ ಇನ್ನೊಂದು ಪಥದ ಕೆಳಸೇತುವೆ ನಿರ್ಮಾಣ ಹಾಗೂ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದಲ್ಲಿ ಎರಡು ಕೆಳ ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಇದೆ.

English summary
A circular flyover will be built to reduce the traffic problem in Byappanahalli says BBMP Commissioner Manjunath Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X