ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗರೇಟ್ ಲಂಚ: ಎಸಿಪಿ ಪ್ರಭುಶಂಕರ್ ಮೇಲೆ ತನಿಖೆಗೆ ಅನುಮತಿ

|
Google Oneindia Kannada News

ಬೆಂಗಳೂರು, ಮೇ 21: ಲಾಕ್‌ಡೌನ್ ಸಮಯದಲ್ಲಿ ಸಿಗರೇಟ್ ಅಕ್ರಮ ಸಾಗಾಟಕ್ಕೆ ಸೀಗರೇಟ್‌ ಡೀಲರ್ಸ್‌ಗಳಿಂದ ಭಾರೀ ಮೊತ್ತದ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಸಿಸಿಬಿ ಎಸಿಪಿ ಪ್ರಭುಶಂಕರ್ ವಿರುದ್ಧ ತನಿಖೆ ನಡೆಸಲು ಸರ್ಕಾರ ಅನುಮತಿ ನೀಡಿದೆ.

Recommended Video

ದೇವಸ್ಥಾನದ ಅರ್ಚಕರಿಗೆ ಸರ್ಕಾರ ಎಷ್ಟು ಹಣ ಕೊಡ್ತಿದೆ | Srinivas poojari | Oneindia Kannada

ಈ ಕುರಿತು ಎಸಿಬಿಯಲ್ಲಿ ಎಫ್ ಐ ಆರ್ ದಾಖಲಿಸಿ‌, ಎಸಿಪಿ ಪ್ರಭುಶಂಕರ್ ಅವರನ್ನು ಒಂದನೇ ಆರೋಪಿಯನ್ನಾಗಿ ಮಾಡಲಾಗಿದೆ.

crime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣcrime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣ

ಸಿಗರೇಟ್ ವಿತರಕರು ಹಾಗೂ ಮಾಸ್ಕ್ ತಯಾರಿ ಮಾಡುತ್ತಿದ್ದ ಕಂಪೆನಿಯ ಮಾಲೀಕನಿಂದ ಸಿಸಿಬಿಯ ಎಸಿಪಿ ಪ್ರಭುಶಂಕರ್ ಹಾಗೂ ಇಬ್ಬರು ಇನ್ಸ್ಪೆಕ್ಟರ್ ಗಳು ಲಂಚ ಪಡೆದ ಆರೋಪದ ತನೀಖೆಯ ವರದಿಯನ್ನ ಸದ್ಯ ಎಸಿಬಿ ಚುರುಕುಗೊಳಿಸಿದೆ.

Cigarette Scam In Bengaluru CCB: FIR Lodged In ACB Against ACP Prabhushankar

ಈಗಾಗಲೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೂಡ ಇದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಸದ್ಯ ಎಸಿಬಿಗೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಕೂಡ ತನಿಖೆಯ ವರದಿ ನೀಡಲಿದ್ದಾರೆ.

ಲಾಕ್‌ಡೌನ್ ಜಾರಿಯಾದ ಮೇಲೆ, ಸಿಸಿಬಿಯ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ ಗಳಾದ ಅಜಯ್ ಹಾಗೂ ನಿರಂಜನ್ ಸಿಗರೇಟ್ ವಿತರಕರಿಂದ ಸುಮಾರು 1.75 ಕೋಟಿ ಸುಲಿಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆ, ಸಿಸಿಬಿ ಡಿಸಿಪಿ ರವಿಕುಮಾರ್ ತನಿಖೆ ನಡೆಸಿದ್ದರು. ಈ ವೇಳೆ ಸಿಗರೇಟ್ ವಿತರಕರಿಂದ ಹಣ ಹಾಗೂ ಮಾಸ್ಕ್ ಮಾಲೀಕರಿಂದ ಕೂಡ ಲಂಚ ಪಡೆದಿರುವುದು ಸ್ಫಷ್ಟವಾಗಿತ್ತು. ಕೋಟಿ , ಕೋಟಿ ಹಗರಣ ನಡೆದಿರುವ ಕಾರಣ ಪ್ರಕರಣದ ಗಂಭೀರತೆ ಅರಿತು ಐಜಿ ಪ್ರವೀಣ್ ಸೂದ್ ಎಸಿಬಿ ತನಿಖೆ ನಡೆಸುವಂತೆ ಸೂಚಿಸಿದ್ದರು.

English summary
Lockdwon Cigarette Scam In Bengaluru CCB: FIR Lodged In ACB Against ACP Prabhushankar. karnataka government gives permision for investigation against acp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X