ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಮನ್ಸೂರ್‌ ಖಾನ್‌ ಪತ್ತೆಗೆ ಇಂಟರ್‌ಪೋಲ್ ನೆರವು ಕೇಳಿದ ಸಿಐಡಿ

|
Google Oneindia Kannada News

ಬೆಂಗಳೂರು, ಜೂನ್ 18: ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಪರಾರಿ ಆಗಿರುವ ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್‌ ಪತ್ತೆಗೆ ಬಲೆ ಬೀಸಲಾಗಿದ್ದು, ಆತನ ಪತ್ತೆಗೆ ನೆರವಾಗುವಂತೆ ಸಿಐಡಿಯು ಇಂಟರ್‌ಪೋಲ್‌ಗೆ ಪತ್ರ ಬರೆದಿದೆ.

ಐಎಂಎ ಮಾಲೀಕ ಮನ್ಸೂರ್ ಖಾನ್‌ ಜೂನ್ 8 ರಂದು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹಾರಿಹೋಗಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗಾಗಿ ಸಿಐಡಿಯು ಇಂಟರ್‌ಪೋಲ್ ನ ನೆರವು ಕೇಳಿದೆ.

ಐಎಂಎ ಜ್ಯುವೆಲ್ಸ್ ವಂಚನೆ ಕೇಸ್, ಮನ್ಸೂರ್ ಗೆ 'ಇಡಿ' ನೋಟಿಸ್ ಐಎಂಎ ಜ್ಯುವೆಲ್ಸ್ ವಂಚನೆ ಕೇಸ್, ಮನ್ಸೂರ್ ಗೆ 'ಇಡಿ' ನೋಟಿಸ್

ಬಹುತೇಕ ದೇಶದ ಪೊಲೀಸರ ಪರಸ್ಪರ ಒಪ್ಪಂದ ಇಂಟರ್‌ಪೋಲ್ (ಇಂಟರ್‌ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಶನ್) ಆಗಿದ್ದು, ಒಂದು ದೇಶದ ಅಪರಾಧಿಗಳು ಮತ್ತೊಂದು ದೇಶಕ್ಕೆ ಹಾರಿದಾಗ ಅಲ್ಲಿನ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚಿ ವಾಪಸ್‌ ಸ್ವದೇಶಕ್ಕೆ ಕಳುಹಿಸಲು ಇಂಟರ್‌ಪೋಲ್ ನೆರವಾಗುತ್ತದೆ.

CID has written to Interpol about IMA fraud case accused Mansoor Khan

ಐಎಂಎ ವಂಚನೆ ಪ್ರಕರಣ ಬಹಿರಂಗವಾದ ದಿನವೇ (ಜೂನ್ 08) ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆಡಿಯೋ ಒಂದನ್ನು ಬಹಿರಂಗಪಡಿಸಿ, ಕಾರಿನಲ್ಲಿ ತನ್ನ ಎರಡನೇ ಮತ್ತು ನಾಲ್ಕನೇ ಹೆಂಡತಿ ಜೊತೆಗೂಡಿ ಇನ್ನೂ ಕೆಲವು ಕುಟುಂಬ ಸದಸ್ಯರನ್ನು ಕರೆದುಕೊಂಡು ಅದೇ ದಿನ ವಿಮಾನ ನಿಲ್ದಾಣದಿಂದ ಮನ್ಸೂರ್ ಖಾನ್ ದುಬೈಗೆ ಹಾರಿ ಹೋಗಿದ್ದಾರೆ.

ದುಬೈಗೆ ಹಾರಿದ ಐಎಂಎ ಜ್ಯುವೆಲ್ಸ್ ವಂಚನೆ ಕೇಸ್ ಆರೋಪಿ ಮನ್ಸೂರ್ದುಬೈಗೆ ಹಾರಿದ ಐಎಂಎ ಜ್ಯುವೆಲ್ಸ್ ವಂಚನೆ ಕೇಸ್ ಆರೋಪಿ ಮನ್ಸೂರ್

ಇದೇ ದಿನ ಇಡಿ (ಜಾರಿ ನಿರ್ದೇಶನಾಲಯ)ಯು ಮನ್ಸೂರ್‌ ಖಾನ್‌ಗೆ ನೊಟೀಸ್ ಜಾರಿ ಮಾಡಿದ್ದು, ಮನ್ಸೂರ್ ಖಾನ್ ಮಾತ್ರವಲ್ಲದೆ ಐಎಂಎ ಸಂಸ್ಥೆಯ ಏಳು ನಿರ್ದೇಶಕರಿಗೂ ನೊಟೀಸ್ ಜಾರಿ ಮಾಡಿದೆ.

English summary
Crime Investigation Department (CID) has written to Interpol about IMA fraud case main accused Mansoor Khan who reportedly fled to Dubai on 8th June after spreading a video that he may commit suicide due to his situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X