ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಳಪು ಕಳೆದುಕೊಳ್ಳುವ ಚರ್ಚ್‌ ಸ್ಟ್ರೀಟ್ ನ್ನು ತೊಳೆಯಲಿರುವ ಪಾಲಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಒಂದು ರಸ್ತೆ ನಿರ್ಮಾಣ ಕಾರ್ಯ ಪೂರ್ಣವಾದ ಬಳಿಕ ಯಾರೂ ಅದರ ಕಡೆಗೆ ಗಮನ ಹರಿಸುವುದಿಲ್ಲ, ಇನ್ನು ಪುನಃ ಅದು ಹಾಳಾದರೆ ಮಾತ್ರ ಅದನ್ನು ಸರಿಪಡಿರುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿತ್ತು.

ಆದರೆ ಮೊದಲ ಬಾರಿಗೆ ರಸ್ತೆಯನ್ನು ಮಾಡಿದ ಮೇಲೆ ಅದರ ನಿರ್ವಹಣೆಯೂ ಅಗತ್ಯ ಎನ್ನುವುದು ಮನವರಿಕೆಯಾದಂತಿದೆ. ಚರ್ಚ್ ಸ್ಟ್ರೀಟ್ ರಸ್ತೆಯನ್ನು ಇನ್ನು ಮುಂದೆ ವಾರಕ್ಕೊಮ್ಮೆ ನೀರು ಹಾಕಿ ತೊಳೆಯಲಾಗುತ್ತದೆ. ಇದೇನಪ್ಪ ಬೇಸಿಗೆಯಲ್ಲಿ ನೀರಿನ ಅಭಾವವಿದ್ದರೂ ರಸ್ತೆ ತೊಳೆಯಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆಯಾ ಅಂದುಕೊಳ್ಳಬೇಡಿ.

ಚರ್ಚ್ ಸ್ಟ್ರೀಟ್ ನಲ್ಲಿ ನಡೆಯಿರಿ ಇಂಪಾದ ಸಂಗೀತ ಕೇಳಿರಿಚರ್ಚ್ ಸ್ಟ್ರೀಟ್ ನಲ್ಲಿ ನಡೆಯಿರಿ ಇಂಪಾದ ಸಂಗೀತ ಕೇಳಿರಿ

ಚರ್ಚ್ ಸ್ಟ್ರೀಟ್ ರಸ್ತೆಯನ್ನು ತೊಳೆಯಲು ಕುಡಿಯುವ ನೀರಿನ ಬದಲು ಬಳಸಲಾದ ನೀರನ್ನು ಉಪಯೋಗಿಸಲಾಗುತ್ತದೆ. ರಸ್ತೆಗೆ ಅಳವಡಿಸಿರುವ ಕಾಬೂಲ್ ಮಾರ್ಬಲ್ ತನ್ನ ಹೊಳಪು ಕಳೆದುಕೊಳ್ಳುತ್ತಿರುವುದು ರಸ್ತೆ ತೊಳೆಯಲು ಪ್ರಮುಖ ಕಾರಣವಾಗಿದೆ.

Church street will have water wash every week

ಕಾಬೂಲ್ ಮಾರ್ಬಲ್ ಮೇಲೆ ಜಾಸ್ತಿ ವಾಹನ ಓಡಾಡಿದರೆ ಅದರ ಹೊಳಪು ಕಡಿಮೆಯಾಗಲಿದೆ. ಹೀಗಾಗಿ ಅದನ್ನು ನೀರಿನಲ್ಲಿ ತೊಳೆಯಲು ಯೋಜನೆ ರೂಪಿಸಲಾಗಿದೆ. ವಾರದಲ್ಲಿ ಒಮ್ಮೆ ನೀರಿನಲ್ಲಿ ರಸ್ತೆ ತೊಳೆಯುವ ಮೂಲಕ ಕಾಬೂಲ್ ಮಾರ್ಬಲ್ ತನ್ನ ಕಳೆ ಕಳೆದುಕೊಳ್ಳದಂತೆ ಮಾಡಲಾಗುತ್ತದೆ.

English summary
BBMP has decided to clean up church street road every week with water wash to maintain Cabul marbles which were installed in the newly constructed road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X