ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚ್ ಸ್ಟ್ರೀಟ್ ರಸ್ತೆಯ ಅಂದ ಹೆಚ್ಚಿಸಲಿವೆ ಗ್ರಾನೈಟ್!

|
Google Oneindia Kannada News

Recommended Video

Church Street To Be Designed By Granite Curbstone | Oneindia Kannada

ಬೆಂಗಳೂರು, ಅಕ್ಟೋಬರ್ 03 : ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್ ರಸ್ತೆ ಕೆಲವು ದಿನಗಳಲ್ಲಿ ಹೊಸ ವಿನ್ಯಾಸದಿಂದ ಕಂಗೊಳಿಸಲಿದೆ. ರಸ್ತೆ, ಫುಟ್‌ಪಾತ್‌ಗಳಿಗೆ ಗ್ರಾನೈಟ್ ಕರ್ಬ್ ಸ್ಟೋನ್ ಅಳವಡಿಕೆ ಮಾಡಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಅಂತ್ಯಗೊಳ್ಳುವ ನಿರೀಕ್ಷೆ ಇದೆ.

ಟೆಂಡರ್ ಶ್ಯೂರ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು?ಟೆಂಡರ್ ಶ್ಯೂರ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು?

ಇದೇ ಮೊದಲ ಬಾರಿಗೆ ಬೆಂಗಳೂರಿನ ರಸ್ತೆಗಳಿಗೆ ಗ್ರಾನೈಟ್ ಕರ್ಬ್ ಸ್ಟೋನ್ ಅಳವಡಿಸಲಾಗುತ್ತಿದೆ. ಕಳೆದ ವಾರ ಪ್ರಾಯೋಗಿಕವಾಗಿ ಎರಡು ಮೀಟರ್ ದೂರಕ್ಕೆ ಗ್ರಾನೈಟ್ ಕರ್ಬ್ ಸ್ಟೋನ್ ಅಳವಡಿಕೆ ಮಾಡಿ ರಸ್ತೆ ಹೇಗೆ ಕಾಣುತ್ತದೆ? ಎಂದು ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Church Street road to be designed by cobblestones

ಬಿಳಿ, ಕಪ್ಪು ಮತ್ತು ಚೆರ್ರಿ ಕೆಂಪು ಬಣ್ಣದ ಕಲ್ಲುಗಳನ್ನು ಪ್ರಾಯೋಗಿಕವಾಗಿ ಜೋಡಿಸಲಾಗಿತ್ತು. ಯಾವ ವಿನ್ಯಾಸದಲ್ಲಿ ಕಲ್ಲುಗಳನ್ನು ಜೋಡಿಸಬೇಕು ಎಂಬುದನ್ನು ತೀರ್ಮಾನಿಸಿ, ಈ ವಾರ ಕಾಮಗಾರಿ ಆರಂಭಿಸಲಾಗುತ್ತದೆ. ನಂತರ ರಸ್ತೆಗೆ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ.

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಶಾಸಕ ಆಶ್ವತ್ಥನಾರಾಯಣ ಟ್ವೀಟ್ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಶಾಸಕ ಆಶ್ವತ್ಥನಾರಾಯಣ ಟ್ವೀಟ್

ಗ್ರಾನೈಟ್ ಅಳವಡಿಕೆ ಮಾಡಲು ನುರಿತ ಕಾರ್ಮಿಕರನ್ನು ಕರೆತರಲಾಗಿದೆ. ಒಟ್ಟು 750 ಮೀಟರ್ ಉದ್ದದ ಚರ್ಚ್ ಸ್ಟ್ರೀಟ್‌ ನಲ್ಲಿ ಬ್ರಿಗೇಡ್ ರಸ್ತೆಯಿಂದ ವಾಸುದೇವ ಅಡಿಗಾಸ್ ಹೋಟೆಲ್ ವರೆಗಿನ ಮೊದಲ ಹಂತದ 440 ಮೀಟರ್ ಉದ್ದದ ಕಾಮಗಾರಿ ನವೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಚರ್ಚ್ ಸ್ಟ್ರೀಟ್‌ ಸ್ಫೋಟ, ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎಚರ್ಚ್ ಸ್ಟ್ರೀಟ್‌ ಸ್ಫೋಟ, ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

ಬಿಬಿಎಂಪಿ ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಟೆಂಡರ್ ಶ್ಯೂರ್ ಯೋಜನೆಯಡಿ ಈ ರಸ್ತೆ, ಫುಟ್‌ ಪಾತ್ ಅಭಿವೃದ್ಧಿ ಮಾಡಲಾಗುತ್ತಿದೆ. ಡಿಸೆಂಬರ್ ವೇಳೆಗೆ ಎಲ್ಲಾ ಕಾಮಗಾರಿ ಮುಗಿದು, ರಸ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

English summary
For the first time in Bengaluru city granite cobblestones are being used to design Church Street road. Under tendersure project Bruhat Bengaluru Mahanagara Palike (BBMP) has taken road development work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X