ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಎಎಲ್‌ ಆವರಣದಲ್ಲಿ ಲಕ್ಷಾಂತರ ಮೌಲ್ಯದ ತಾಮ್ರದ ಕೇಬಲ್ ಕಳ್ಳತನ

|
Google Oneindia Kannada News

ಬೆಂಗಳೂರು, ಏ.9: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಆವರಣದಲ್ಲಿದ್ದ ಲಕ್ಷಾಂತರ ರೂ ಬೆಲೆ ಬಾಳುವ ತಾಮ್ರದ ಕೇಬಲ್ ಕಳ್ಳತನವಾಗಿದೆ.

ಎಚ್‌ಎಎಲ್ ಆವರಣದಲ್ಲೇ ಇರಿಸಲಾಗಿದ್ದ 2.5 ಲಕ್ಷ ರೂ ಬೆಲೆಬಾಳುವ ತಾಮ್ರದ ಕೇಬಲ್‌ಗಳಾಗಿತ್ತು. ಸಂಸ್ಥೆಯ ಒಳಗಿನವರದ್ದೇ ಕೈವಾಡವಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

16ನೇ ಎಲ್‌ಸಿಎ ತೇಜಸ್ ಯುದ್ಧ ವಿಮಾನ ನಿರ್ಮಾಣ ಪೂರ್ಣಗೊಳಿಸಿದ ಎಚ್‌ಎಎಲ್ 16ನೇ ಎಲ್‌ಸಿಎ ತೇಜಸ್ ಯುದ್ಧ ವಿಮಾನ ನಿರ್ಮಾಣ ಪೂರ್ಣಗೊಳಿಸಿದ ಎಚ್‌ಎಎಲ್

ಭಾರತ ರಕ್ಷಣಾ ಪಡೆಗಳಿಗೆ ಅಗತ್ಯವಾಗಿರುವ ವೈಮಾನಿಕ ಸಲಕರಣೆಗಳ ಉತ್ಪಾದನೆಗೆ ಹೆಸರಾಗಿರುವ ಎಚ್ಎಎಲ್ ನಲ್ಲಿ ಭದ್ರತಾ ಲೋಪ ಹಾಗೂ ಕಳ್ಳತನ ಆತಂಕಕ್ಕೆ ಕಾರಣವಾಗಿದೆ.

Chopper cable worth lakhs missing from HAL

ಕಳ್ಳತನದ ಕುರಿತು ನಮಗೆ ಮಾಹಿತಿ ಇಲ್ಲ, ಎಂಆರ್ ಒ ವಿಭಾಗದಲ್ಲಿ ಕೆಲ ಭದ್ರತಾ ಲೋಪಗಳು ಕಂಡುಬಂದಿದೆ. ಈ ಕಾರಣದಿಂದ ಮಾವಿನ್ ಸ್ವಿಚ್ಗೀಯರ್ಸ್ ಮತ್ತು ಕಂಟ್ರೋಲ್ ಪ್ರೈವೇಟ್ ಲಿಮಿಟೆಡ್ ಗೆ ನಾವು ಅವರ ಕೆಲಸ ಪೂರ್ಣವಾಗುವವರೆಗೆ ಅವರದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಹೇಳಿದ್ದೇವೆ, ಇದರಂತೆ ಈಗ ಭದ್ರತಾ ಸಿಬ್ಬಂದಿ ನಿಯೋಜಿಸಲ್ಪಟ್ಟಿದೆ ಎಂದು ಎಚ್ಎಎಲ್ ನ ತನಿಖಾಧಿಕಾರಿಗಳು ಹೇಳಿದ್ದಾರೆ.

ಮಾವಿನ್ ಸ್ವಿಚ್ಗೀಯರ್ಸ್ ಮತ್ತು ಕಂಟ್ರೋಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಎಚ್.ಆರ್. ವಿಭಾಗದಲ್ಲಿ ಕೆಲಸ ಮಾಡುವ ಸುರೇಶ್ ಈ ಕುರಿತು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.

ಎಚ್ಎಎಲ್ ನ ಮೈಂಟೇನೆನ್ಸ್ ರಿಪೇರ್ ಆಂಡ್ ಆಪರೇಷನ್ಸ್ (ಎಂಆರ್ ಒ) ವಿಭಾಗದಿಂದ 2.5 ಲಕ್ಷ ರೂ. ಮೌಲ್ಯದ 580 ಮೀಟರ್ ಉದ್ದದ ತಾಮ್ರದ ಕೇಬಲ್ ಕಳವಾಗಿದೆ. ನಮ್ಮ ಸಂಸ್ಥೆಯು ಎಚ್ಎಎಲ್ ನಲ್ಲಿ 11 ಕೆವಿ ಕೇಬಲ್ ನೆಟ್ ವರ್ಕ್ ಸ್ಥಾಪನೆಗೆ ಟೆಂಡರ್ ಸ್ವೀಕರಿಸಿದೆ ಎಂದು ಸುರೇಶ್ ಪೋಲೀಸರಿಗೆ ಹೇಳಿದ್ದಾರೆ.

ಎಂಆರ್ ಒ ವಿಭಾಗದಲ್ಲಿ ಸಿಸಿಟಿವಿ ಅಳವಡಿಸಬೇಕು. ಘಟನೆಯಲ್ಲಿ ಎಚ್ಎಎಲ್ ಗೆ ನೀರು ಸರಬರಾಜು ಮಾಡುವ, ಕಸ ತೆಗೆದುಕೊಳ್ಳಲು ಬರುವ ಕಾರ್ಮಿಕ ಕೈವಾಡ ಇರಬಹುದೆಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

English summary
Another case of security breach and theft has been reported in premises of Hindustan Aeronautics Limited(HAL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X