ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗರಗಳಲ್ಲಿ ಹೆಚ್ಚುತ್ತಿದೆ ಚಾಕೋಲೇಟ್, ಡ್ರೈಫ್ರೂಟ್ಸ್ ಬೇಡಿಕೆ!

|
Google Oneindia Kannada News

ಬೆಂಗಳೂರು, ಅ.19 : ನಗರಗಳಲ್ಲಿ ಚಾಕೋಲೇಟ್ ಮತ್ತು ಡ್ರೈಫ್ರೂಟ್ಸ್ ಪ್ರಿಯರು ಹೆಚ್ಚಾಗುತ್ತಿದ್ದಾರೆ. ಸಾಲು-ಸಾಲು ಹಬ್ಬಗಳು ಹಿನ್ನಲೆಯಲ್ಲಿ ಚಾಕೋಲೇಟ್ ಹಾಗೂ ಡ್ರೈಫ್ರೂಟ್ಸ್ ಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಇವುಗಳು ಉಡುಗೊರೆಯ ವಸ್ತುಗಳಾಗಿಯೂ ಯುವಜನರ ಗಮನಸೆಳೆದಿವೆ.

ಸಾಲು-ಸಾಲು ಹಬ್ಬಗಳ ಹಿನ್ನಲೆಯಲ್ಲಿ ಚಾಕೋಲೇಟ್ ಮತ್ತು ಡ್ರೈ ಫ್ರೂಟ್ಸ್ ಗಳ ಬೆಲೆಗಳು ಶೇ 40 ರಷ್ಟು ಏರಿಕೆಯಾಗಿಲಿವೆ. ಮುಂದಿನ ಕೆಲವು ದಿನಗಳಲ್ಲಿ ಡ್ರೈ ಫ್ರೂಟ್ಸ್ ಬೆಲೆಗಳು ಶೇ 25 ರಿಂದ 30ರಷ್ಟು ಹೆಚ್ಚಾಗಿ, ಚಾಕೋಲೇಟ್ ಗೆ ಪೈಪೋಟಿ ನೀಡಲಿದೆ ಎಂದು ಆಸೋಚಾಮ್ ಹೇಳಿದೆ.

ದೇಶದ ಮುಖ್ಯನಗರಗಳಾದ ಅಹಮದಾಬಾದ್, ಬೆಂಗಳೂರು, ಚಂಡೀಘಡ್, ಚೆನ್ನೈ, ದೆಹಲಿ, ಕೋಲ್ಕತ್ತಾ ಹೈದರಾಬಾದ್, ಲಕ್ನೋ, ಮುಂಬೈಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಪ್ರಸಿದ್ದ ಸಿಹಿತಿಂಡಿ ಅಂಗಡಿಗಳಲ್ಲಿ ಸಮೀಕ್ಷೆ ನಡೆಸಿ ಆಸೋಚಾಮ್ ವರದಿ ತಯಾರಿಸಿದೆ.

ವರದಿಯ ಅನ್ವಯ ಮಹಾನಗರಗಳಲ್ಲಿ ಚಾಕೋಲೇಟ್ ಮತ್ತು ಡ್ರೈ ಫ್ರೂಟ್ಸ್ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹಬ್ಬದ ದಿನಗಳಲ್ಲಿ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಜನರು ಡ್ರೈ ಫ್ರೂಟ್ಸ್ ಅನ್ನು ಖರೀದಿಸುತ್ತಿದ್ದಾರೆ. ಸಮೀಕ್ಷೆ ಏನು ಹೇಳುತ್ತದೆ ನೋಡೋಣ

ಚಾಕೋಲೇಟ್ ಗೆ ಬೇಡಿಕೆ ಹೆಚ್ಚಾಗಿದೆ

ಚಾಕೋಲೇಟ್ ಗೆ ಬೇಡಿಕೆ ಹೆಚ್ಚಾಗಿದೆ

ಮಹಾನಗರಗಳಲ್ಲಿ ಚಾಕೋಲೇಟ್ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹಬ್ಬಗಳ ಸಂದರ್ಭಗಳಲ್ಲಿ ಚಾಕೋಲೇಟ್ ಗಳನ್ನು ಉಡುಗೊರೆ ನೀಡಲು ಜನರು ಖರೀದಿಸುತ್ತಿದ್ದಾರೆ. ನಗರಗಳಲ್ಲಿ ಚಾಕೋಲೇಟ್ ಖರೀದಿ ಪ್ರಮಾಣ ಶೇ 40ರ ರಷ್ಟು ಹೆಚ್ಚಾಗಿದೆ.

ಆಸೋಚಾಮ್ ವರದಿ

ಆಸೋಚಾಮ್ ವರದಿ

ಬೆಂಗಳೂರು ಸೇರಿದಂತೆ ದೇಶದ ಎಂಟು ಮಹಾನಗರಗಳಲ್ಲಿ ಸಮೀಕ್ಷೆ ನಡೆಸಿ ಆಸೋಚಾಮ್ ಈ ವರದಿ ತಯಾರಿಸಿದೆ. ಅದರಂತೆ ಮಹಾನಗರಗಳಲ್ಲಿ ಚಾಕೋಲೇಟ್ ಮತ್ತು ಡ್ರೈ ಫ್ರೂಟ್ಸ್ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ.

ಹಬ್ಬಗಳ ಸಂದರ್ಭದಲ್ಲಿ ಖರೀದಿ ಭರಾಟೆ

ಹಬ್ಬಗಳ ಸಂದರ್ಭದಲ್ಲಿ ಖರೀದಿ ಭರಾಟೆ

ಆಸೋಚಾಮ್ ಮಹಾನಗರಗಳ ಪ್ರಸಿದ್ಧ ಸಿಹಿ ತಿಂಡಿ ಅಂಗಡಿಗಳ ಮಾಲೀಕರನ್ನು ಸಂದರ್ಶಿಸಿ ಈ ವರದಿ ತಯಾರಿಸಿದೆ. ಅದರಂತೆ ಹಬ್ಬಗಳ ಸಂದರ್ಭದಲ್ಲಿ ಚಾಕೋಲೇಟ್ ಮತ್ತು ಡ್ರೈ ಫ್ರೂಟ್ಸ್ ಖರೀದಿ ಭರಾಟೆ ಜೋರಾಗಿರುತ್ತದೆ.

ಖರೀದಿ ಹೇಗೆ

ಖರೀದಿ ಹೇಗೆ

ಸಿಹಿ ತಿಂಡಿಯೊಂದಿಗೆ ಡ್ರೈ ಫ್ರೂಟ್ಸ್ ಖರೀದಿಯು ಜೋರಾಗಿ ನಡೆಯುತ್ತಿದೆ. ಆಕರ್ಷಕವಾದ ಪ್ಯಾಕಿಂಗ್, ಉತ್ತಮ ರುಚಿ ಹೊಂದಿರುವ ಡ್ರೈ ಫ್ರೂಟ್ ಗಳನ್ನು ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಡ್ರೈ ಫ್ರೂಟ್ ಗಳನ್ನು ಉಡುಗೊರೆಯಾಗಿ ನೀಡುವ ಸಂಸ್ಕೃತಿಯೂ ಹೆಚ್ಚಾಗುತ್ತಿದೆ.

ಉಡುಗೊರೆ ನೀಡುತ್ತಾರೆ

ಉಡುಗೊರೆ ನೀಡುತ್ತಾರೆ

ಆಸೋಚಾಮ್ ಸಮೀಕ್ಷೆ ವೇಳೆ ಡ್ರೈ ಫ್ರೂಟ್ ಅಂಗಡಿಗಳ ಮಾಲೀಕರು ಇಂದಿನ ಯುವಕರಲ್ಲಿ ಡ್ರೈ ಫ್ರೂಟ್ ಗಳನ್ನು ಉಡುಗೊರೆ ನೀಡುವ ಸಂಪ್ರದಾಯ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಆದ್ದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.

ಚಾಕೋಲೇಟ್ ಗೆ ಬೇಡಿಕೆ

ಚಾಕೋಲೇಟ್ ಗೆ ಬೇಡಿಕೆ

ಹಬ್ಬದ ಸಂದರ್ಭದಲ್ಲಿ ಚಾಕೋಲೇಟ್ ಗಳಿಗೆ ನಗರಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಚಾಕೋಲೇಟ್ ಪಡೆಯಲು ಬುಕ್ ಮಾಡುತ್ತಾರೆ. ಆಕರ್ಷಕವಾಗಿ ಪ್ಯಾಕ್ ಮಾಡಿದ ಚಾಕೋಲೇಟ್ ಅವರ ಕೈಗೆ ಕೆಲವೇ ಹೊತ್ತಿನಲ್ಲಿ ಸೇರುತ್ತಿದೆ. ಸದ್ಯ ಡ್ರೈ ಫ್ರೂಟ್ಸ್ ಗಳು ಚಾಕೋಲೇಟ್ ಗಳಿಗೆ ಪೈಪೋಟಿ ನೀಡುತ್ತಿವೆ.

ಮುಂದೆಯೂ ಬೇಡಿಕೆ ಹೆಚ್ಚು

ಮುಂದೆಯೂ ಬೇಡಿಕೆ ಹೆಚ್ಚು

ದೀಪಾವಳಿ ಸೇರಿದಂತೆ ಸಾಲು-ಸಾಲು ಹಬ್ಬಗಳು ಎದುರಾಗುತ್ತಿರುವುದರಿಂದ ಚಾಕೋಲೇಟ್ ಮತ್ತು ಡ್ರೈ ಫ್ರೂಟ್ಸ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಬ್ಬದ ಸಮಯದಲ್ಲಿ ಬೇಡಿಕೆ ಶೇ 35ರಿಂದ 40ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಮಾರುಕಟ್ಟೆ ವಿಸ್ತರಣೆ

ಮಾರುಕಟ್ಟೆ ವಿಸ್ತರಣೆ

ಸದ್ಯ ಭಾರತದ ಚಾಕೋಲೇಟ್ ಮಾರುಕಟ್ಟೆ ವಾರ್ಷಿಕವಾಗಿ 5000 ಕೋಟಿ ವ್ಯವಹಾರ ನಡೆಸುತ್ತಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಇದು 7,500 ತಲುಪುವ ಸಾಧ್ಯತೆ ಇದೆ ಎಂದು ಸಮೀಕ್ಷೆಯ ವರದಿ ಅಂದಾಜಿಸಿದೆ.

English summary
Chocolate demand soars by 40% amid growing concerns of adulterated sweets & abnormally high dry-fruit prices this festive season said The Associated Chambers of Commerce and Industry of India (ASSOCHAM) survey. Survey conducted in Ahmedabad, Bangalore, Chennai other major citys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X