ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರಲಕ್ಷ್ಮಿ ಹಬ್ಬದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ "ಚಿತ್ತಾರ ಮೇಳ"

|
Google Oneindia Kannada News

ಬೆಂಗಳೂರು ಜುಲೈ 17: ನಗರದ ಕರಕುಶಲ ವಸ್ತುಗಳ ಪ್ರೇಮಿಗಳಿಗೆ ಮತ್ತೆ ಬಂದಿದೆ ಚಿತ್ತಾರ ಮೇಳ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳ. ಜುಲೈ 19 ರಿಂದ ಜುಲೈ 28 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಈ "ಚಿತ್ತಾರ ಮೇಳ" ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ಈ ಚಿತ್ತಾರ ಮೇಳ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳದ ವಿಶೇಷವೆಂದರೆ ವರಮಹಾಲಕ್ಷ್ಮಿ ಹಬ್ಬ(ಆಗಸ್ಟ್ 09)ದ ಆಚರಣೆಗೆ ಬೇಕಾದ ಎಲ್ಲಾ ರೀತಿಯ ಸಾಮಗ್ರಿಗಳು ಇಲ್ಲಿ ಲಭ್ಯವಿವೆ. ಮಣಿಪುರ, ನಾಗಾಲ್ಯಾಂಡ್ ರಾಜ್ಯದ ಕರಕುಶಲಕಾರರು ತಯಾರಿಸಿದ ಸೀರೆಗಳು ಈ ಬಾರಿಯ ಪ್ರಮುಖ ಆಕರ್ಷಣೆ. ಅಲ್ಲದೆ, ಸ್ಟೋನ್ ಆಭರಣಗಳು ಎಲ್ಲರ ಗಮನ ಸೆಳೆಯಲಿವೆ. ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಬೇಕಾದ ಸಾಮಗ್ರಿಗಳು ಇಲ್ಲಿ ಲಭ್ಯವಿವೆ.

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ

ಹಾಗೆಯೇ, ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

Chittara & Grand Flea Market Chitrakala Parishat Varamahalakshi festival

ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

 ಸೀರೆಗೆ ಸೀರೆನೇ ಸಾಟಿ! ಟ್ವಿಟ್ಟರ್ ನಲ್ಲಿ ಸೀರೆಯಲ್ಲಿ ಮಿಂಚಿದ ನೀರೆಯರು ಸೀರೆಗೆ ಸೀರೆನೇ ಸಾಟಿ! ಟ್ವಿಟ್ಟರ್ ನಲ್ಲಿ ಸೀರೆಯಲ್ಲಿ ಮಿಂಚಿದ ನೀರೆಯರು

ಜುಲೈ 19 ರಿಂದ ಜುಲೈ 28 ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ.

ಚಿತ್ತಾರ ಮೇಳ
(ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳ)
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್
(ಶಿವಾನಂದ ವೃತ್ತದ ಬಳಿ)
ದಿನಾಂಕ: ಜುಲೈ 19 ರಿಂದ ಜುಲೈ 28 ರ ವರೆಗೆ

ಸಮಯ: ಬೆಳಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

English summary
Chittara & Grand Flea Market has organised during the Varamahalakshmi festival. A 10-day handicrafts and handicrafts exhibition cum sale The Souq (Market) from July 19 to 28 at Karnataka Chitrakala Parishat. The aim of the exhibition is to promote a variety of handicrafts and handloom from across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X