ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಚಿತ್ರಸಂತೆಗೆ ಹರಿದು ಬಂದ ಜನಸಾಗರ

|
Google Oneindia Kannada News

ಬೆಂಗಳೂರು, ಜ.4 : ಕರ್ನಾಟಕ ಚಿತ್ರಕಲಾ ಪರಿಷತ್‌ ಹಮ್ಮಿಕೊಂಡಿರುವ ಚಿತ್ರಸಂತೆಗೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಮೇಯರ್ ಶಾಂತಕುಮಾರಿ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಹಾಜರಿದ್ದರು.

ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ಹಮ್ಮಿಕೊಂಡಿರುವ 12 ನೇ ಚಿತ್ರಸಂತೆಗೆ ಭಾನುವಾರ ಚಾಲನೆ ನೀಡಲಾಗಿದ್ದು ಸಾವಿರಾರು ಕಲಾ ಪ್ರೇಮಿಗಳು ಭಾಗವಹಿಸಿದ್ದಾರೆ. ರಾಜ್ಯದ ಕಲಾವಿದರ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಬಾಗದ ಸುಮಾರು 1200 ಅಧಿಕ ಕಲಾವಿದರು ತಮ್ಮ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.[ಚಿತ್ರಕಲಾ ಪರಿಷತ್ ಅಧ್ಯಕ್ಷ ಸ್ಥಾನ ಬಿ.ಎಲ್.ಶಂಕರ್ ಗೆ]

art

ಉದ್ಘಾಟನೆ ನೇರವೇರಿಸಿ ಮಾತನಾಡಿದ ಸಿಎಂ, ಕಲಾವಿದರಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಚಿತ್ರಕಲಾ ಪರಿಷತ್ ನ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ನೆರವು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. 10 ರೂಪಾಯಿಯಿಂದ ಹಿಡಿದು 10 ಲಕ್ಷ ರೂ. ವರೆಗಿನ ವಿವಿಧ ಬಗೆಯ ಚಿತ್ರಗಳು ಮಾರಾಟಕ್ಕಿದೆ.[ಕುಮಾರಕೃಪಾ ರಸ್ತೆಯಲ್ಲಿ ಬಣ್ಣದ ಚಿತ್ತಾರ]

art 1

ಹೊಸ ಕಲಾವಿದರನ್ನು ಬೆಳಕಿಗೆ ತರಲು ಪರಿಷತ್ ಕಳೆದ 11 ವರ್ಷಗಳಿಂದ ಸತತವಾಗಿ ಚಿತ್ರ ಸಂತೆಯನ್ನು ಆಯೋಜಿಸುತ್ತಾ ಬಂದಿದೆ. ಕಲಾ ಪ್ರೇಮಿಗಳು ಸ್ಥಳದಲ್ಲಿಯೇ ತಮಗೆ ಬೇಕಾದ ಚಿತ್ರವನ್ನು ಕಲಾವಿದರಿಂದ ಚಿತ್ರಿಸಿಕೊಂಡು ಖರೀದಿಸುವ ಅವಕಾಶವನ್ನು ಒದಗಿಸಲಾಗಿದೆ. ಭಾನುವಾರದ ರಜೆಯ ಸವಿಯನ್ನು ಬೆಂಗಳೂರು ಜನ ಚಿತ್ರಸಂತೆಯಲ್ಲಿ ಕಳೆದಿದ್ದು ವಿಶೇಷವಾಗಿತ್ತು.

English summary
Bengaluru: Chitra Santhe inagurated by Chief Minister Siddaramaiah on Sunday at Karnataka Chitrakala Parishath. The event witnessed the participation of 1,200 artists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X