ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾ ಸಮುದಾಯದ ಕುಂಭಮೇಳ ಚಿತ್ರಸಂತೆ ಕಲಾವಿದರಿಗೆ ಬಲ ನೀಡಲಿ

|
Google Oneindia Kannada News

ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜನೆಯ 16ನೇ ಚಿತ್ರಸಂತೆ ಸಾಂಗವಾಗಿ ನಡೆದಿದೆ. ಈ ಬಾರಿ ಮಹಾತ್ಮಾ ಗಾಂಧೀಜಿ ಕುರಿತ ಚಿತ್ರ ಗ್ಯಾಲರಿ ಎಲ್ಲರ ಆಕರ್ಷಣೆಯಾಗಿದೆ. ಚಿತ್ರ ಕಲಾವಿದರ ಪಾಲಿನ ಕುಂಭಮೇಳದಿಂದ ಬಡ ಚಿತ್ರಕಾರರಿಗೆ ಇನ್ನಷ್ಟು ನೆರವು ಸಿಗಬೇಕಿದೆ ಎಂದು ವೃತ್ತಿಪರ ಕಲಾವಿದ ಅಶೋಕ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಬಾರಿ 1400 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಚಿತ್ರಸಂತೆಯಲ್ಲಿ ಚಿತ್ರಕಲಾವಿದರು, ಸ್ವಯಂ ಸೇವಕರು, ಭದ್ರತಾ ಸಿಬ್ಬಂದಿ ಸೇರಿದಂತೆ ಚಿತ್ರಸಂತೆಯಲ್ಲಿ ಭಾಗವಹಿಸುವವರಿಗೆ ಊಟ, ಕುಡಿಯುವ ನೀರು, ತಿಂಡಿ ವ್ಯವಸ್ಥೆ ಮಾಡಲಾಗಿದೆ.

Chitra Santhe should help poor Artists

ಚಿತ್ರಸಂತೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ನಾಡಿನ ಬಡ ಕಲಾಸಮುದಾಯಕ್ಕೆ ಆರ್ಥಿಕ ಪರಿಸ್ಥಿತಿಯನ್ನು ದೂರಗೊಳಿಸುತ್ತದೆ ಎಂದರೆ ತಪ್ಪಾಗಲಾರದು, ಕಲಾ ಸಮುದಾಯದಲ್ಲಿ ಕೆಲವರಿಗೆ ಚಿತ್ರಸಂತೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದರೆ ಈಗ ಕಲಾಸಮುದಾಯಕ್ಕೆ ಕುಂಭಮೇಳ ಎಂದು ಮನ್ನಣೆ ಪಡೆದಿದೆ.

16ನೇ ಚಿತ್ರ ಸಂತೆಗೆ ಸಿಕೆಪಿ ಸಜ್ಜು, ಗಾಂಧಿ ಪ್ರಮುಖ ಆಕರ್ಷಣೆ16ನೇ ಚಿತ್ರ ಸಂತೆಗೆ ಸಿಕೆಪಿ ಸಜ್ಜು, ಗಾಂಧಿ ಪ್ರಮುಖ ಆಕರ್ಷಣೆ

ಸಮುದಾಯದ ಏಕತಾನತೆಯನ್ನು ಮುರಿಯುವ ಒಂದು ವರ್ಗವಾದರೆ, ಬಹಳಷ್ಟು ಕಲಾವಿದರನ್ನು ಪ್ರೀತಿಯಿಂದ ಕಾಣುವ ನೋಡುವ ಸ್ಥಳ ಚಿತ್ರಸಂತೆಯಾಗಿದೆ, ಸಾಹಿತ್ಯಸಮ್ಮೆಳನಕ್ಕೆ ದೊರೆಯುವ ಗೌರವ ನಮ್ಮಲ್ಲಿ ಚಿತ್ರಕಲೆಗಿಲ್ಲ ಎನ್ನುವ ಕೊರಗನ್ನು ಚಿತ್ರಸಂತೆ ನೀಗಿಸಬಹುದು ಎನ್ನುವುದೆ ನನ್ನ ಅಭಿಲಾಸೆ.

Chitra Santhe should help poor Artists

ನಮ್ಮ ಹಿರಿಯರು ಲೈಬ್ರರಿಯಲ್ಲಿನ ಪುಸ್ತಕಗಳಾಗಿದ್ದಾರೆ,? ಅದನ್ನು ತೆಗೆದು ಓದುವ ಸಂಪ್ರದಾಯ ಕಲಾವಿದರಿಗಿಲ್ಲ, ಕಲಾವಿದರು ಮುಖಾಮುಖಿಯಾಗಿ ಬೆರೆಯುವ ಸಮ್ಮೆಳನಗಳಿಲ್ಲ, ನಮ್ಮ ಸಮುದಾಯಕ್ಕೆ ಪ್ರೀತಿ ಹೇಗೆ ಹುಟ್ಟಬೇಕು, ಚೌಕಟ್ಟನ್ನು ಮೀರುವ ವಿಧಾನವೇ ಕಲೆ ಎಂದವರು? ಚೌಕಟ್ಟಿನ ಒಳಗಿರುವುದೇ ಸಮುದಾಯ. ಅಂತಹ ಸಮುದಾಯಕ್ಕೆ ಚಿತ್ರಸಂತೆ ಪ್ರೀತಿಯ ಹಬ್ಬ ಎನಿಸುತ್ತದೆ.

Chitra Santhe should help poor Artists

ಅಲ್ಲಿ ಭಾಗವಹಿಸದವರೂ ಕೂಡ ಎಲ್ಲರನ್ನು ನೋಡಬಹುದೆಂಬ ದಿನ ಚಿತ್ರಸಂತೆ. ಮುಂದಿನ ದಿನಗಳಲ್ಲಿ ಚಿತ್ರಕಲಾ ಪರಿಷತ್ತು, ಅಧ್ಯಕ್ಷರಾದ ಶಂಕ್ರಗೌಡ್ರು ವೃತ್ತಿಪರ ಕಲಾವಿದರನ್ನು ಗುರುತಿಸಿ ಚಿತ್ರಸಂತೆಯ ಗೌರವವನ್ನು ಹೆಚ್ಚಿಸಬೇಕೆಂದು ಕಳಕಳಿಯ ವಿನಂತಿ,

ಮತ್ತು ಕಲಾವಿದರಲ್ಲಿ ವಿನಂತಿಸುವುದೇನೆಂದರೆ ಕಲಾತ್ಮಕ ಚಿತ್ರಗಳನ್ನು ರಚಿಸಿದರೆ ಮಾತ್ರ ನಿಮಗೆ ಭವಿಷ್ಯವಿದೆ, ಬೆಲೆ ಇದೆ. ಇಲ್ಲದಿದ್ದಲ್ಲಿ ಚಿತ್ರಸಂತೆ ಕೇವಲ ಸಂತೆಯಾಗಬಾರದು.

English summary
Chitra Santhe organised on Jan 06 by Karnataka Chitrakala Parishat should help poor Artists says artist Ashok U.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X