ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋಗೆ ಸೇರ್ಪಡೆಯಾಗಲಿವೆ 216 ಚೀನಾ ಬೋಗಿಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ನಮ್ಮ ಮೆಟ್ರೋಗೆ 216 ಬೋಗಿಗಳು ಸೇರ್ಪಡೆಗೊಳ್ಳಲಿವೆ. ನಮ್ಮ ಮೆಟ್ರೋದ ಎರಡನೇ ಹಂತದ ಯೋಜನೆಗೆ ಬೇಕಿರುವ ಬೋಗಿಗಳ ಪೂರೈಕೆಗೆ ಚೀನಾ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಸಿಆರ್‌ಆರ್‌ಸಿ ಕಾರ್ಪೊರೇಷನ್ ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿ ಬೋಗಿ ನಿರ್ಮಾಣ ಘಟಕ ಸ್ಥಾಪಿಸುತ್ತಿದೆ.. ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಏರ್ಪಟ್ಟ ನಂತರದಲ್ಲಿ 216 ಬೋಗಿಗಳ ಪೈಕಿ 204 ಬೋಗಿಗಳನ್ನು ಘಟಕದಲ್ಲೇ ನಿರ್ಮಿಲಾಗುತ್ತದೆ. ಇತರೆ 12 ಬೋಗಿಗಳನ್ನು ಚೀನಾದಲ್ಲಿ ನಿರ್ಮಿಸಿ ನೀಡಲಾಗುತ್ತದೆ.

2 ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ದಿನಾಂಕ ನಿಗದಿ 2 ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ದಿನಾಂಕ ನಿಗದಿ

ನಮ್ಮ ಮೆಟ್ರೋ ಎರಡನೇ ಹಂತದ 7 ಮಾರ್ಗಗಳ ಪೈಕಿ ನಾಲ್ಕು ಮಾರ್ಗಗಳು ಮೊದಲನೇ ಹಂತದಲ್ಲಿ ನಿರ್ಮಾಣಗೊಂಡಿರುವ ಮಾರ್ಗಗಳ ವಿಸ್ತರಣಾ ಮಾರ್ಗಗಳಾಗಿವೆ.

Chinese Firm To Make New Namma Metro Coaches

ಇವುಗಳ ಪೈಕಿ ಯಲಚೇನಹಳ್ಳಿ-ಅಂಜನಾಪುರ ಟೌನ್ ಶಿಪ್‌ ಮಾರ್ಗದಲ್ಲಿ ಆಗಸ್ಟ್‌ನಿಂದ ಹಾಗೂ ನಾಯಂಡಹಳ್ಳಿ-ಕೆಂಗೇರಿ ಮಾರ್ಗದಲ್ಲಿ ಅಕ್ಟೋಬರ್‌ನಿಂದ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 42 ಕಿ.ಮೀ ಉದ್ದದ ಮಾರ್ಗ ನಿರ್ಮಿಸಿ ರೈಲು ಸಂಚಾರ ಆರಂಭಿಸಲಾಗಿದೆ.

ಜೊತೆಗೆ ಇದೀಗ ಎರಡನೇ ಹಂತದಲ್ಲಿ ಒಟ್ಟು ನಾಲ್ಕು ಮಾರ್ಗಗಳಲ್ಲಿ 72 ಕಿ.ಮೀ ಉದ್ದದ ಮಾರ್ಗವನ್ನು ವಿಸ್ತರಿಸಲಾಗುತ್ತಿದೆ. ಆ ಮಾರ್ಗಗಳ ಪೈಕಿ ಯಲಚೇನಹಳ್ಳಿ-ಅಂಜನಾಪುರ ಟೌನ್‌ ನಡುವಿನ ವಿಸ್ತೃತ ಮಾರ್ಗದಲ್ಲಿ ಆಗಸ್ಟ್‌ನಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಎರಡನೇ ಹಂತಕ್ಕೆ ಅಗತ್ಯವಿರುವ ಒಟ್ಟು ಬೋಗಿಗಳ ಪೈಕಿ 216 ಬೋಗಿಗಳ ಪೂರೈಕೆಗಾಗಿ ಚೀನಾ ಮೂಲದ ಸಿಆರ್‌ಆರ್‌ಸಿ ಕಾರ್ಪೊರೇಷನ್ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಒಟ್ಟು 235 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

English summary
BMRCL has awarded a contract to China's CRRC Corporation Ltd To provide 216 coaches to Namma Metro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X