ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳಲ್ಲಿ ಭಾಷೆ ಕಲಿಯುವ ಸಾಮರ್ಥ್ಯ ಎಷ್ಟಿರುತ್ತದೆ ಗೊತ್ತಾ?

|
Google Oneindia Kannada News

ಬೆಂಗಳೂರು, ನ. 07: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ. ಆರಂಭಿಕ ಹಂತದಿಂದಲೇ ಮಕ್ಕಳಿಗೆ ವ್ಯವಸ್ಥಿತ ಶಿಕ್ಷಣ ನೀಡುವ ಗುರಿ ಇಟ್ಟುಕೊಂಡು ನೂತನ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದೀಗ ನೂತನ ಶಿಕ್ಷಣ ನೀತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಮಹತ್ವದ ಮಾತನಾಡಿದ್ದಾರೆ.

ಒಂದನೇ ತರಗತಿಯಿಂದಲ್ಲ, ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ವ್ಯವಸ್ಥಿತವಾದ ಶಿಕ್ಷಣ ನೀಡಬೇಕಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಇದೆಲ್ಲ ರಾಜ್ಯದಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಅಕಾಡೆಮಿ ಆಫ್ ಕ್ರಿಯೇಟಿವ್‌ ಲರ್ನಿಂಗ್ ಆಶ್ರಯದಲ್ಲಿ ಅಂಗನವಾಡಿ ಶಿಕ್ಷಕಿಯರ ತರಬೇತಿಯ ಮುಕ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

children should be given a systematic education from the anganwadi level


ಹದಿಮೂರು ಭಾಷೆಗಳನ್ನು ಕಲಿಯುವ ಸಾಮರ್ಥ್ಯ: ಅಂಗನವಾಡಿ ಹಂತದಲ್ಲಿಯೇ ಮಕ್ಕಳಿಗೆ ಭಾಷೆ ಸೇರಿದಂತೆ ಬಹು ವಿಷಯಗಳ ಕಲಿಕೆಯ ಶಕ್ತಿ ಹೆಚ್ಚಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ ನಾಲ್ಕರಿಂದ ಆರು ವರ್ಷದ ವಯಸ್ಸಿನ ಮಗುವಿಗೆ ಹದಿಮೂರು ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಪುಟ್ಟ ಮಕ್ಕಳಿಗೆ ಬೋಧನೆ ಮಾಡಬೇಕಿದೆ ಎಂದರು.

children should be given a systematic education from the anganwadi level

Recommended Video

BJP ಸಿಬಿಐ ನಾ miss use ಮಾಡ್ತಿದಾರೆ!! | Oneindia Kannada

ನಮ್ಮಲ್ಲಿ ಈಗ ಅಂಗನವಾಡಿಯಲ್ಲಿ ವ್ಯವಸ್ಥಿತ, ಅಂದರೆ ಔಪಚಾರಿಕವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಈವರೆಗೆ ಇರಲಿಲ್ಲ. ಇದು ಮುಂದೆ ಈ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಲಿದೆ. ಆರಂಭದ ಹಂತದಲ್ಲಿಯೇ ಮಕ್ಕಳಿಗೆ ಶೈಕ್ಷಣಿಕವಾಗಿ ಗಟ್ಟಿ ತಳಪಾಯ ಬೀಳುವ ಅಗತ್ಯವಿದೆ. ಈ ಬಗ್ಗೆ ಸರಕಾರವೂ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದರು.

English summary
The children should be given a systematic education from the Anganwadi level, not from the first class, and after the implementation of the National Education Policy said DCM C.N. Ashwath Narayana. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X