ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಆರ್‌ಟಿಇ ಅಡಿ ಬರುವ ಮಕ್ಕಳಿಂದ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ'

|
Google Oneindia Kannada News

Recommended Video

ಮಕ್ಕಳ ಹಕ್ಕು ಆಯೋಗದಿಂದ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ

ಬೆಂಗಳೂರು, ಮಾರ್ಚ್ 29: ಆರ್‌ಟಿಇ ಅಡಿಯಲ್ಲಿ ದಾಖಲಾದ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯುವ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ವಿರುದ್ಧ ಕಢಿಣ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದರು.

ಆರ್‌ಟಿಇ ಕಾಯ್ದೆಯ ಕಲಂ 13ರಲ್ಲಿ ಯಾವುದೇ ಶಾಲೆಯ ಡೊನೇಷನ್, ಕ್ಯಾಪಿಟೇಷನ್ ಹೆಸರಲ್ಲಿ ಪೋಷಕರಿಂದ ಹಣ ಪಡೆಯುವಂತಿಲ್ಲ, ಖಾಸಗಿ ಮತ್ತು ಅನುದಾನರಹಿತ ಶಾಲೆಗಳು ಆರ್‌ಟಿಇ ಮಕ್ಕಳ ಪೋಷಕರಿಂದ ಪುಸ್ತಕ, ಸಮವಸ್ತ್ರ, ಕಲಿಕಾ ಸಾಮಗ್ರಿ, ಕಂಪ್ಯೂಟರ್ ಕಲಿಕೆ ಇತ್ಯಾದಿ ಕಾರ್ಯಗಳಿಗೆ ರಸೀದಿ ನೀಡದೆಸಾವಿರಾರು ರೂ ಹಣವನ್ನು ವಸೂಲಿ ಮಾಡುತ್ತಿದೆ . ಈ ಬಗ್ಗೆ ಸುಮಾರು 20ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದರು.

Children rights commission warns private schools on fees

RTE ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆ.20 ರಿಂದ ಆರಂಭ!RTE ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆ.20 ರಿಂದ ಆರಂಭ!

ಶೀಕ್ಷಣ ಸಂಸ್ಥೆಗಳ ನಿಯಮ 1995ರ ಕಲಂ 11(3)ರ ಪ್ರಕಾರ ಖಾಸಗಿ ಶಾಲೆಗಳು ಸಮವಸ್ತ್ರ, ಪಠ್ಯಪುಸ್ತಕಗಳನ್ನು ನಿದಿಷ್ಟ ವ್ಯಕ್ತಿ, ಸಂಸ್ಥೆಯಿಂದಲೇ ಖರೀದಿಸುವಂತೆ ಒತ್ತಡ ಹೇರುವ ಹಾಗಿಲ್ಲ, ಒತ್ತಡ ಹಾಕಿದರೆ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಪೋಷಕರು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾ ಅವರಿಗೆ ಮನವಿ ಮಾಡಬೇಕು ಎಂದರು.

English summary
Karnataka state children's rights commission chairman Kripa Alva has warned private schools that the institutions should not collect the excess fees from students who got admission under RTE act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X