ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟ್ರಾಫಿಕ್‌ನಿಂದಾಗಿ ಆಂಬುಲೆನ್ಸ್‌ನಲ್ಲಿ ಹಸುಗೂಸು ಸಾವು!

ಬೆಂಗಳೂರು ಟ್ರಾಫಿಕ್‌ನಲ್ಲಿ ಆಂಬುಲೆನ್ಸ್ ಸಿಲುಕಿದ ಕಾರಣ ಪುಟ್ಟ ಮಗುವೊಂದು ಆಸ್ಪತ್ರೆ ಸಾಗುವ ಮಾರ್ಗಮಧ್ಯೆ ಪ್ರಾಣಬಿಟ್ಟ ಘಟನೆ ನಡೆದಿದೆ.

|
Google Oneindia Kannada News

ಬೆಂಗಳೂರು ಟ್ರಾಫಿಕ್‌ಗೆ ಹೆಸರುವಾಸಿ. ಇದರಿಂದಾಗಿ ಬೆಂಗಳೂರಿನಲ್ಲಿ ಪ್ರಯಾಣ ಮಾಡಲು ಜನ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ತುರ್ತು ಪರಿಸ್ಥಿತಿಗಳಲ್ಲಿ ಬೆಂಗಳೂರಿನಲ್ಲಿ ಸಗಮವಾಗಿ ಸಂಚಾರ ಮಾಡಲು ಸಾಧ್ಯವಾಗದೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅದೆಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಗೊರಗುಂಟೆಪಾಳ್ಯ ಸುತ್ತಮುತ್ತ ಟ್ರಾಫಿಕ್ ಜಾಮ್‌ನಲ್ಲಿ ಆಂಬುಲೆನ್ಸ್‌ನಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗುವನ್ನು ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಹಾಸನದಿಂದ ನಿಮ್ಹಾನ್ಸ್‌ಗೆ ಕರೆತರಲಾಗುತ್ತಿತ್ತು. ಈ ವೇಳೆ ಹೆಚ್ಚು ಟ್ರಾಫಿಕ್ ಇರುವ ಕಾರಣ ಮಗು ಮಾರ್ಗಮಧ್ಯೆ ಪ್ರಾಣಬಿಟ್ಟಿದೆ.

ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹಾಸನದಿಂದ ಚಿಕಿತ್ಸೆಗಾಗಿ ಬರುತ್ತಿದ್ದ ವೇಳೆ ಅತಿಯಾದ ಟ್ರಾಫಿಕ್ ನಿಂದ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಮಗುವಿದ್ದ ಅಂಬ್ಯುಲೆನ್ಸ್ ಹಾಸನದಿಂದ ಕೇವಲ ಒಂದು ಗಂಟೆಯಲ್ಲೇ ಜೀರೋ ಟ್ರಾಫಿಕ್‌ನಲ್ಲಿ ನೆಲಮಂಗಲ ತಲುಪಿತ್ತು. ಆದರೆ ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆ ಟ್ರಾಫಿಕ್ ಹಿನ್ನೆಲೆ 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಗಿತ್ತು. ಟ್ರಾಫಿಕ್ ವೇಳೆ ಅಂಬಯುಲೆನ್ಸ್‌ಗೂ ದಾರಿ ಬಿಡದೇ ಮಾನವೀಯತೆ ಮರೆತ್ತಿರುವುದು ಕಂಡುಬಂದಿದೆ.

Child died in Ambulance stuck in traffic jam around Goraguntepalya

ಮಗು ಮೃತಪಟ್ಟ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿ ಆಕ್ರೋಶ ಹೊರಹಾಕಿದ್ದಾರೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ವ್ಯವಸ್ಥೇ ಮಾಡದ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಸೂಕ್ತಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದರಿಂದಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಎಳೆ ಕಂದಮ್ಮ ಪ್ರಾಣ ಬಿಟ್ಟಿದೆ. ಈ ಘಟನೆಗೆ ಯಾರು ಹೊಣೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಟ್ರಾಫಿಕ್ ಪೊಲೀಸರು ಇಂತಹ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಬೆಂಗಳೂರಿನಲ್ಲಿ ಇಂತಹ ಘಟನೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.

English summary
Bengaluru : Child died in Ambulance stuck in traffic jam around Goraguntepalya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X