ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜು.26 ರಂದು ಸಿಎಂ ಸಿದ್ದರಾಮಯ್ಯ ಮಂಡೂರಿಗೆ ಭೇಟಿ

By Ashwath
|
Google Oneindia Kannada News

ಬೆಂಗಳೂರು,ಜು.9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಡೂರು ಭೇಟಿಗೆ ದಿನ ನಿಶ್ಚಯವಾಗಿದೆ. ಮಂಡೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜು.26ರಂದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ಡಂಪಿಂಗ್‌ ಯಾರ್ಡ್‌‌ ಸಮಸ್ಯೆ ಬಗ್ಗೆ ಮಂಡೂರು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿ, ಡಂಪಿಂಗ್‌ ಯಾರ್ಡ್‌ಗೆ ಗುಣಮಟ್ಟದ ರಾಸಾಯನಿಕ ಸಿಂಪಡಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ್‌‌‌‌ ಅವರಿಗೆ ಸೂಚಿಸಿದರು. ಈಗ ಟ್ಯಾಂಕರ್‌ ಮೂಲಕ ಕಾವೇರಿ ನೀರು ಪೊರೈಕೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಪೈಪ್‌ಲೈನ್‌ ಸಂಪರ್ಕ‌ ನೀಡುವುದಾಗಿ ಭರವಸೆ ನೀಡಿದರು.

Siddaramaiah
ಗ್ರಾಮಸ್ಥ ಶ್ರೀನಿವಾಸ ಗೌಡ ಮಾತನಾಡಿ, ಮಂಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಸದಿಂದಾಗಿ ಕುಡಿಯುವ ನೀರು ಮಲಿನವಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇವೆ. ಸಮಸ್ಯೆ ನಿವಾರಿಸುವುದಾಗಿ ಮಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.[ಕಸ ಕಿತ್ತಾಟ: ಕಸ ವಿಲೇವಾರಿ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ]

ಒಂದು ತಿಂಗಳ ಹಿಂದೆ ಮಂಡೂರು ಗ್ರಾಮಸ್ಥರ ಜೊತೆ ನಡೆದ ಸಂಧಾನ ಸಭೆಯಲ್ಲಿ ಮುಖ್ಯಮಂತ್ರಿಗಳು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.

English summary
Chief Minister Siddaramaiah may soon get a peek into the difficult life that communities living around the Mandur landfills lead. After meeting community leaders here on Tuesday, he has assured them of visiting their village on July 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X