ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿ ಹುದ್ದೆಯಿಂದ ಸಚಿವ ಸ್ಥಾನ: ಜಗದೀಶ್ ಶೆಟ್ಟರ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಆಗಸ್ಟ್ 21: ಹೌದು ನಾನು ಮುಖ್ಯಮಂತ್ರಿ ಹುದ್ದೆಯಿಂದ ಮತ್ತೆ ಸಚಿವ ಸ್ಥಾನಕ್ಕೇರಿದ್ದೇನೆ. ಹಾಗೆಂದ ಮಾತ್ರಕ್ಕೆ ಇದು ನನ್ನ ಹಿನ್ನಡೆ ಎಂದು ಯಾವತ್ತೂ ಭಾವಿಸುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಅಪರೂಪದ ಘಟನೆಯಾಗಿದೆ.

Recommended Video

B S Yeddyurappa Cabinet Expansion : ಅಮಿತ್ ಶಾ ಪಟ್ಟಿಯಿಂದ 6 ಶಾಸಕರು ಹೊರಗೆ

ಯಡಿಯೂರಪ್ಪ ಸಂಪುಟ ಸೇರಿ ಬಿ. ಡಿ. ಜತ್ತಿ ದಾಖಲೆ ಮುರಿದ ಶೆಟ್ಟರ್! ಯಡಿಯೂರಪ್ಪ ಸಂಪುಟ ಸೇರಿ ಬಿ. ಡಿ. ಜತ್ತಿ ದಾಖಲೆ ಮುರಿದ ಶೆಟ್ಟರ್!

ಒಂದು ಬಾರಿ ಮುಖ್ಯಮಂತ್ರಿಯಾದವರು ಮುಂದೆಯೂ ಮುಖ್ಯಮಂತ್ರಿಯೇ ಆಗಿರಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ರಾಜಕೀಯದಲ್ಲಿ ನನ್ನ ಸ್ಥಾನ ಕೆಳಗಿಳಿಯಿತೆಂದಲ್ಲ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿಡಿ ಜತ್ತಿ ಸಹ ಸಿಎಂ ಆದ ನಂತರ ಉಪಾಧ್ಯಕ್ಷ ಹುದ್ದೆ ನಿರ್ವಹಿಸಿದ್ದರು.

Chief Minister Position To Minister What Shettar Says

ಮಧ್ಯಪ್ರದೇಶದ ಮಾಜಿ ಸಿಎಂಗಳಾದ ಬಾಬುಲಾಲ್ ಗೌರ್ ಶಿವರಾಜ್ ಸಿಂಗ್ ಚೌಹಾನ್ ಅವರ ಅಡಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಒ. ಪನ್ನೀರ್ ಸೆಲ್ವಂ ಸಿಎಂ ಆದವರು ಜಯಲಲಿತಾ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶೆಟ್ಟರ್ ವಿವರಿಸಿದ್ದಾರೆ.

ನಾನು ಮುಜುಗರಕ್ಕೊಳಗಾಗುವುದಿಲ್ಲ ಇದು ನನ್ನ ಪುನರಾಗಮನ ಎಂದು ತಿಳಿದಿದ್ದೇನೆ. ಏಕೆಂದರೆ ಬಿಎಸ್ ಯಡಿಯೂರಪ್ಪ ರಾಜ್ಯದ ಅತ್ಯಂತ ಶ್ರೇಷ್ಠ ನಾಯಕ. ಅವರಡಿಯಲ್ಲಿ ನಾನು ಸಚಿವರಾಗಿ ಸೇವೆ ಸಲ್ಲಿಸಲು ನನಗೆ ಯಾವ ಬೇಸರವಿಲ್ಲ ಅವರು ಹೇಳಿದ್ದಾರೆ.

ಆರು ಅವಧಿಯ ಶಾಸಕರಾದ ಶೆಟ್ಟರ್ ಸುಮಾರು 30 ವರ್ಷಗಳ ವೃತ್ತಿಜೀವನದಲ್ಲಿ ಪ್ರತಿಯೊಂದು ಪ್ರಮುಖ ಸ್ಥಾನದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

English summary
I have been re-appointed to the post of Minister. I don't think this is a setback, Minister Jagdish Shettar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X