ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಕುಮಾರಸ್ವಾಮಿ ಇಂದಿನಿಂದ ವಾರಗಳ ಕಾಲ ಅಮೆರಿಕ ಪ್ರವಾಸ

|
Google Oneindia Kannada News

Recommended Video

ಸಿಎಂ ಕುಮಾರಸ್ವಾಮಿ ಇಂದಿನಿಂದ ಅಮೆರಿಕ ಪ್ರವಾಸ/ ಎಚ್‌ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜೂನ್ 28: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದಿನಿಂದ ಒಂದು ವಾರಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ಜುಲೈ 4,5,6 ರಂದು ಅಮೆರಿಕದಲ್ಲಿ ಒಕ್ಕಲಿಗ ಪರಿಷತ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ.ಶುಕ್ರವಾರ ಸಂಜೆ ಅಮೆರಿಕಕ್ಕೆ ತೆರಳಲಿದ್ದು ಜುಲೈ 8ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಇಂದು ರಾಜ್ಯ ಸಚಿವ ಸಂಪುಟ ಸಭೆ, ಜಿಂದಾಲ್, ಐಎಂಎ, ವಾಲ್ಮೀಕಿಯದ್ದೇ ಚರ್ಚೆ ಇಂದು ರಾಜ್ಯ ಸಚಿವ ಸಂಪುಟ ಸಭೆ, ಜಿಂದಾಲ್, ಐಎಂಎ, ವಾಲ್ಮೀಕಿಯದ್ದೇ ಚರ್ಚೆ

ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಕುಮಾರಸ್ವಾಮಿ ಅವರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಜೊತೆಯಾಗಲಿದ್ದಾರೆ. ಒಂದು ವಾರಗಳ ಕಾಲ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ ಜೊತೆ ಕೆಲವು ಅಧಿಕಾರಿಗಳು ಕೂಡ ಅವರೊಟ್ಟಿಗೆ ತೆರಳಲಿದ್ದಾರೆ. ದೇವೇಗೌಡರು ಎರಡು ದಿನಗಳ ಮಟ್ಟಿಗೆ ಅಮೆರಿಕದಲ್ಲಿದ್ದು, ಬಳಿಕ ರಾಜಧಾನಿಗೆ ಹಿಂದಿರುಗಲಿದ್ದಾರೆ.

Chief minister Kumaraswamy going America for seven days

ಅಮೆರಿಕದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಕುಮಾರಸ್ವಾಮಿ, ದೇವೇಗೌಡರು. ಸಚಿವ ಡಿ ಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಸಚಿವರು, ಶಾಸಕರಿಗೆ ಆಹ್ವಾನ ನೀಡಲಾಗಿದೆ.

ಅಮೆರಿಕಾಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಶ್ರೀಗಳು, ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಇಂದು ಸಚಿವ ಸಂಪುಟ ಸಭೆ ಕೂಡ ಇದ್ದು, ಪ್ರಮುಖವಾಗಿ ಜಿಂದಾಲ್, ಐಎಂಎ ಹಗರಣ, ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಶರಾವತಿ ನೀರು ತರುವುದು, ವಾಲ್ಮೀಕಿ ಸಮುದಾಯ ಸಮುದಾಯದ ಮೀಸಲಾತಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮಧ್ಯಾಹ್ನ 12.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ.

English summary
Chief minister HD Kumaraswamy visiting the USA for seven days. After the today cabinet meeting he is traveling towards America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X