ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಸಿಎಸ್ 10ಕೆ ರನ್‌ಗೆ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಮೇ 15: ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ಸ್‌ (ಟಿಸಿಎಸ್) ಆಯೋಜಿಸಿರುವ 10ಕೆ ರನ್ ಎಲ್ಲರ ಜೀವನದಲ್ಲಿ ಹೊಸ ಚೈತನ್ಯ ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಟಿಸಿಎಸ್ ಸಂಸ್ಥೆಯು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವರ್ಲ್ಡ್ ಪ್ರೀಮಿಯರ್ 10ಕೆ ರನ್‌ಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

"10ಕೆ ರನ್‌ ನಲ್ಲಿ 17 ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದಾರೆ. ಹಿರಿಯರು, ವಿಶೇಷಚೇತನರು ತಮ್ಮ ಆರೋಗ್ಯಕ್ಕಾಗಿ, ದೇಶಕ್ಕಾಗಿ ಹಾಗೂ ಜೀವನದ ಉತ್ಸಾಹಕ್ಕಾಗಿ ಓಡುತ್ತಿದ್ದಾರೆ. ಕಾರ್ಯಕ್ರಮ ಆಯೋಜಿಸಿರುವ ಟಿಸಿಎಸ್ ಉತ್ತಮ ಕೆಲಸ ಮಾಡಿದೆ'' ಎಂದು ಶ್ಲಾಘಿಸಿದರು.

Chief Minister Basavaraj Bommai Flags Off TCS 10K Run

"ಅನೇಕ ಸರಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆ ಸಂಗ್ರಹಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಈ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಟಿಸಿಎಸ್ ಸಂಸ್ಥೆ ತೋರಿದೆ'' ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಡಾ. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

Recommended Video

ಕ್ರಿಕೆಟ್ ಜಗತ್ತಿಗೆ ಆಘಾತ:ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ | Oneindia Kannada

English summary
Karnataka chief minister Basavaraj Bommai flagged off for TCS 10K run at Kanteerava stadium, Bengaluru on May 15th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X