ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಸಾವಿಗೆ ಗಣ್ಯರ ಸಂತಾಪ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್.16: ಕನ್ನಡ ಸಾಹಿತ್ಯ ರಂಗದ ಮತ್ತೊಂದು ಕೊಂಡಿ ಕಳಚಿದೆ. ಹಿರಿಯ ಸಾಹಿತಿ, ಕನ್ನಡ ಪರ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅಗಲಿಕೆಗೆ ಕರುನಾಡು ಬಡವಾಗಿದೆ.
ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಪಾಟೀಲ್ ಪುಟ್ಟಪ್ಪರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಮವಾರ ಚಿಕಿತ್ಸೆ ಸ್ಪಂದಿಸದೇ ನಾಡಿನ ಹಿರಿಯ ಸಾಹಿತಿ ಅಗಲಿದ್ದಾರೆ.
ಕರ್ನಾಟಕದ ಗಟ್ಟಿದನಿ, ಹೋರಾಟಗಾರ, ಹೆಮ್ಮೆಯ ''ಪಾಪು''
ನಾಡೋಜ ಪಾಟೀಲ್ ಪುಟ್ಟಪ್ಪನವರ ಅಗಲಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆದಿಯಾಗಿ ರಾಜಕೀಯ ಗಣ್ಯರು, ಸಂಬಂಧಿಕರು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ಪಾಪು ಕುರಿತು ನಾಯಕರು ಆಡಿರುವ ಸಂತಾಪದ ಮಾತುಗಳ ಕುರಿತು ಒಂದು ವರದಿ ಇಲ್ಲಿದೆ.

ಪಾಪು ಅವರ ಕಾರ್ಯವನ್ನು ಸ್ಮರಿಸಿಕೊಂಡ ಬಿಎಸ್ ವೈ

ಪಾಪು ಅವರ ಕಾರ್ಯವನ್ನು ಸ್ಮರಿಸಿಕೊಂಡ ಬಿಎಸ್ ವೈ

ನಾಡೋಜ ಪಾಟೀಲ್ ಪುಟ್ಟಪ್ಪನವರು ಗುಣಮುಖರಾಗಿ ಬರಲಿ ಎಂಬ ನಮ್ಮೆಲ್ಲರ ಪ್ರಾರ್ಥನೆ ಫಲಿಸಲಿಲ್ಲ. ಕರ್ನಾಟಕದ ಏಕೀಕರಣ ಚಳುವಳಿಯಿಂದ ಹಿಡಿದು - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿದ ಪ್ರತಿಯೊಂದು ಕಾರ್ಯವೂ ಅವಿಸ್ಮರಣೀಯ. ರಾಜ್ಯಸಭಾ ಸದಸ್ಯರಾಗಿ ದೆಹಲಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದು ಮಾತ್ರವಲ್ಲ, ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರ. ನಿನ್ನೆಯಷ್ಟೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಪಾಪು ಗುಣಮುಖರಾಗುತ್ತಾರೆ ಎಂಬ ಭರವಸೆ ಇತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೊರೆಯಲಿ. ಓಂ ಶಾಂತಿ, ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಧೀಮಂತ ನಾಯಕನಿಗೆ ಹೆಚ್ ಡಿಕೆ ಭಾವಪೂರ್ಣ ವಿದಾಯ

ಧೀಮಂತ ನಾಯಕನಿಗೆ ಹೆಚ್ ಡಿಕೆ ಭಾವಪೂರ್ಣ ವಿದಾಯ

ಪಾಪು ಎಂಬ ಕಾವ್ಯನಾಮದಿಂದಲೇ ಖ್ಯಾತರಾದವರು ಪಾಟೀಲ ಪುಟ್ಟಪ್ಪ. ಕನ್ನಡ ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದವರು. ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಾಪುರವರು ಕನ್ನಡ ನಾಡು, ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದವರು. ಇಂದು ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಪಾಟೀಲ ಪುಟ್ಟಪ್ಪ ಅವರ ನಿಧನ ಇಡೀ ಕರ್ನಾಟಕಕ್ಕೆ ತುಂಬಲಾರದ ಬಹುದೊಡ್ಡ ನಷ್ಟ. ಅವರ ಕುಟುಂಬದವರಿಗೆ ಮತ್ತು ಅನುಯಾಯಿಗಳಿಗೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಧೀಮಂತ ನಾಯಕನಿಗೆ ಭಾವಪೂರ್ವ ವಿದಾಯಗಳು, ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕನ್ನಡದ ನಿಷ್ಠಾವಂತ ಕಾವಲುಗಾರರು 'ಪಾಪು'

ಕನ್ನಡದ ನಿಷ್ಠಾವಂತ ಕಾವಲುಗಾರರು 'ಪಾಪು'

ಹಿರಿಯ ಪತ್ರಕರ್ತ, ಕನ್ನಡದ ಕಟ್ಟಾಳು ಮತ್ತು ರಾಜ್ಯಸಭೆಯ ಮಾಜಿ ಸದಸ್ಯರಾದ ಪಾಟೀಲ್ ಪುಟ್ಟಪ್ಪ ಅವರ ಅಗಲಿಕೆಯಿಂದ ನಾಡು-ನುಡಿ ಬಡವಾಗಿದೆ. ರಾಜ್ಯದ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಸದಾ ಟೊಂಕಕಟ್ಟಿ ನಿಲ್ಲುತ್ತಿದ್ದ ಪಾಪು ಕನ್ನಡದ ನಿಷ್ಠಾವಂತ ಕಾವಲುಗಾರರಾಗಿದ್ದರು. ಅವರ ಗೆಳೆಯರು ಮತ್ತು ಕುಟುಂಬದವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ, ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲುರಿಂದ ಭಾವಪೂರ್ಣ ಶ್ರದ್ಧಾಂಜಲಿ

ಆರೋಗ್ಯ ಸಚಿವ ಶ್ರೀರಾಮುಲುರಿಂದ ಭಾವಪೂರ್ಣ ಶ್ರದ್ಧಾಂಜಲಿ

ಕನ್ನಡ ಭಾಷೆ, ಕರ್ನಾಟಕದ ಗಡಿ, ಕನ್ನಡಿಗರ ಹಿತಕ್ಕೆ ದಕ್ಕೆ ಆದಾಗ, ತಮ್ಮ ಹರಿತ ಬರಹದಿಂದ ಎದುರಾಳಿಗಳ ನಿದ್ದೆಯನ್ನಡಗಿಸಿದ ಹೋರಾಟಗಾರ, ಹಿರಿಯ ಪತ್ರಕರ್ತ, ನಾಡೋಜ ಶ್ರೀಪಾಟೀಲ ಪುಟ್ಟಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು. ಓಂ ಶಾಂತಿಃ, ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಪಾಟೀಲ್ ಪುಟ್ಟಪ್ಪ ಕನ್ನಡದ ದಿಟ್ಟ ಹೋರಾಟಗಾರ

ಪಾಟೀಲ್ ಪುಟ್ಟಪ್ಪ ಕನ್ನಡದ ದಿಟ್ಟ ಹೋರಾಟಗಾರ

ನಾಡೋಜ ಪುರಸ್ಕೃತರಾದ ಪಾಟೀಲ್ ಪುಟ್ಟಪ್ಪ ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶತಾಯುಷಿ ಗಳಾಗಿದ್ದ ಪಾಟೀಲ್ ಪುಟ್ಟಪ್ಪ ಅವರು ಕನ್ನಡದ ದಿಟ್ಟ ಹೋರಾಟಗಾರರಾಗಿ ಏಕೀಕರಣದ ರೂವಾರಿಗಳಾಗಿ ನಾಡಿನ ಭಾಷೆ ಸಂಸ್ಕೃತಿಗೆ ಅಪಾರವಾದ ಕಾಣಿಕೆ ಸಲ್ಲಿಸಿದ್ದರು. ಇವರ ಅಗಲಿಕೆಯಿಂದ ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ, ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

English summary
Chief Minister B.S.Yadiyurappa And Many Political Leader Condolences To Patil Puttappa Death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X