ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಳಿ ಉದ್ಯಮಕ್ಕೆ ಬರೆ ಎಳೆದ ಕೊರೊನಾ: 10 ಕೋಟಿ ರೂ. ನಷ್ಟ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಕೋಳಿ ಮಾಂಸ ತಿನ್ನುವುದರಿಂದಲೂ ಕೊರೊನಾ ಬರುತ್ತದೆ ಎಂದು ಹಬ್ಬಿರುವ ಸುದ್ದಿಯಿಂದಾಗಿ ಕೋಳಿ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.

ರಾಜ್ಯದಲ್ಲಿ ಕೋಳಿ ಮಾಂಸ ವ್ಯಾಪಾರ ಶೇ.30ರಷ್ಟು ಕುಸಿದಿದ್ದು , ಪ್ರತಿದಿನ ಅಂದಾಜು 10 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕುಕ್ಕುಟೋದ್ಯಮ ರೈತರ ಹಾಗೂ ತಳಿ ಸಾಕಾಣಿಕೆದಾರರ ಸಂಘ ತಿಳಿಸಿದೆ.

ಕೋಳಿ ಮಾಂಸದಿಂದ ಕೊರೊನಾ ವೈರಸ್? ರಾಜ್ಯ ಸರ್ಕಾರ ಸ್ಪಷ್ಟನೆಕೋಳಿ ಮಾಂಸದಿಂದ ಕೊರೊನಾ ವೈರಸ್? ರಾಜ್ಯ ಸರ್ಕಾರ ಸ್ಪಷ್ಟನೆ

ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುಳ್ಳು ಸುದ್ದಿಯಿಂದ ಕೋಳಿ ಉದ್ಯಮ ನೆಲಕಚ್ಚಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿಡಿರುವ ಕೋಳಿಮಾಂಸದಲ್ಲಿ ಕೊರೊನಾ ವೈರಸ್ ಇದೆ ಎಂಬ ಸುಳ್ಳುಸುದ್ದಿಯಿಂದ ಕೋಳಿ ಸಾಕಾಣಿಕೆ ಹಾಗೂ ಮಾರಾಟ ವಲಯ ಅಪಾರ ನಷ್ಟ ಅನುಭವಿಸಿದೆ. ರೋಗ ಹರಡುವ ಭಯದಿಂದ ಗ್ರಾಹಕರು ಕೋಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಬಾಯ್ಲರ್ ಕೋಳಿ ಮಾರಾಟ ಇಳಿಕೆ

ಬಾಯ್ಲರ್ ಕೋಳಿ ಮಾರಾಟ ಇಳಿಕೆ

ಕೋಳಿ ಮಾಂಸ ಸೇವನೆಯಿಂದ ಕೊರೊನಾ ವೈರಸ್ ಹರಡುತ್ತೆ ಎನ್ನುವ ಸುಳ್ಳು ಸುದ್ದಿಯಿಂದಾಗಿ ಬಾಯ್ಲರ್ ಕೋಳಿ ಮಾರಾಟ ದರ ಪ್ರತಿ ಕೆಜಿ 80 ರೂ.ನಿಂದ 50 ರೂ.ಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಕೋಳಿ ಮಾರಾಟ ವ್ಯವಹಾರ ಶೇ.30ರಿಂದ 40ರಷ್ಟು ನಷ್ಟ ಅನುಭವಿಸಿದೆ.

ಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ದಂತ ವೈದ್ಯನ ಹರಸಾಹಸಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ದಂತ ವೈದ್ಯನ ಹರಸಾಹಸ

ರಾಜ್ಯದಲ್ಲಿ ದಿನಕ್ಕೆ 8 ಕೋಟಿ ರೂ. ನಷ್ಟ

ರಾಜ್ಯದಲ್ಲಿ ದಿನಕ್ಕೆ 8 ಕೋಟಿ ರೂ. ನಷ್ಟ

ಕುಕ್ಕುಟೋದ್ಯಮ ಕ್ಷೇತ್ರದಲ್ಲಿ ದೇಶದಾದ್ಯಂತ ಬಾಯ್ಲರ್ ಕೋಳಿ ಮಾಂಸ ಮಾರಾಟದಲ್ಲಿ ಪ್ರತಿದಿನಕ್ಕೆ 66 ಕೋಟಿ ರೂ. ನಷ್ಟವಾಗಿದ್ದರೆ , ಕರ್ನಾಟಕದಲ್ಲಿ ದಿನಕ್ಕೆ ಎಂಟು ಕೋಟಿ ರೂ. ನಷ್ಟ ಉಂಟಾಗಿದೆ.ಹಾಗೆ ಮೊಟ್ಟೆ ಕೋಳಿ ಉತ್ಪಾದನೆ ಹಾಗೂ ಮಾರಾಟದಲ್ಲಿ ದೇಶಾದ್ಯಂತ ಪ್ರತಿದಿನ 28 ಕೋಟಿ ರೂ. ನಷ್ಟವಾಗುತ್ತಿದೆ.

ಕೋಳಿಮಾಂಸಕ್ಕೂ ಕೊರೊನಾಕ್ಕೂ ಸಂಬಂಧವಿಲ್ಲ

ಕೋಳಿಮಾಂಸಕ್ಕೂ ಕೊರೊನಾಕ್ಕೂ ಸಂಬಂಧವಿಲ್ಲ

ಕೋಳಿ ಮಾಂಸಕ್ಕೂ ಕೊರೊನಾಕ್ಕೂ ಯಾವುದೇ ಸಂಬಂಧವಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ತೊಂದರೆ ನೀಡಲು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ರಾಜ್ಯ ಸರ್ಕಾರ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ. ಇದು ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ ಎಂದು ಸಂಘದ ಅಧ್ಯಕ್ಷರು ವಿಷಾದ ವ್ಯಕ್ತಪಡಿಸಿದ್ದಾರೆ.

ಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯ

English summary
The poultry industry has been hit by rumors that corona comes from eating chicken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X