ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಛೋಟಾ ಶಕೀಲ್ ಸಹಚರನ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್ 18 : ಭೂಗತ ಪಾತಕಿ ಛೋಟಾ ಶಕೀಲ್ ಜೊತೆ ಸೇರಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆತನ ಸಹಚರನನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬೆಂಗಳೂರಿನ ಬಿಸ್ಮಿಲ್ಲಾ ನಗರದಲ್ಲಿ ವಾಸವಾಗಿದ್ದ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ಅವರು ಸಿಸಿಬಿ ಪೊಲೀಸರು ಸೈಯದ್ ನಿಯಾಮತ್ (28) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಛೋಟಾ ಶಕೀಲ್ ಜೊತೆ ಸೈಯದ್ ನಿರಂತರ ಸಂಪರ್ಕದಲ್ಲಿದ್ದ ಎಂದು ಹೇಳಿದರು. [ರಾಜನ್ ಪಾಸ್ ಪೋರ್ಟ್ ಬಗ್ಗೆ ಮಂಡ್ಯದಲ್ಲಿ ತನಿಖೆ]

ccb

ಬಿಸ್ಮಿಲ್ಲಾ ನಗರದ 3ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಸೈಯದ್ ಛೋಟಾ ಶಕೀಲ್ ಸೂಚನೆಯಂತೆ ಇತರರೊಂದಿಗೆ ಸೇರಿ ನಗರದಲ್ಲಿ ಪ್ರಮುಖ ಮುಖಂಡರನ್ನು ಕೊಲೆ ಮಾಡಿ, ಆ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಲು ಒಳಸಂಚು ರೂಪಿಸಿದ್ದ. [ದಾವೂದ್ ಶರಣಾಗತಿ ತಪ್ಪಿಸಿದ್ದು ಪವಾರ್: ಜೇಠ್ಮಲಾನಿ]

ಈ ಬಗ್ಗೆ ಖಚಿತವಾದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿ ಸೈಯದ್‌ನನ್ನು ಬಂಧಿಸಿದ್ದಾರೆ. ಸೈಯದ್ ಜೊತೆಗೆ ಇನ್ನು ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಸೈಯದ್‌ಗೆ ಸಹಕಾರ ನೀಡುತ್ತಿದ್ದರು ಎಂದು ತಿಳಿದುಬಂದಿದ್ದು, ತನಿಖೆ ನಡೆಯುತ್ತಿದೆ.

syed niyamath

ಬಂಧಿತ ಸೈಯದ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಹಿಂದೆ ಕೊಲೆ ಪ್ರಕರಣದ ದಾಖಲಾಗಿತ್ತು. ಕೊಲೆ, ದರೋಡೆ ಸೇರಿದಂತೆ ಒಟ್ಟು 7 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

English summary
The Bengaluru CCB (City Crime Branch) arrested a man suspected to be an aide of underworld don Chotta Shakeel. The man identified as Syed Niyamath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X