ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಾಹುಲ್ ಗಾಂಧಿ ಗೇಲಿ ಮಾಡಿದ ಚೇತನ್ ಭಗತ್

|
Google Oneindia Kannada News

ಬೆಂಗಳೂರು, ಡಿಸೆಂಬರ್. 08: ಅಸಹಿಷ್ಣುತೆ ಬಗ್ಗೆ ಮಾತನಾಡಲು ಇದು ವೇದಿಕೆಯೂ ಅಲ್ಲ, ಕಾಲವೂ ಅಲ್ಲ ಎಂದು ಬರಹಗಾರ ಚೇತನ್ ಭಗತ್ ಹೇಳಿದ್ದಾರೆ. ಬೆಂಗಳೂರಿನಲ್ಲಿ 'ಸೆಂಡ್ ಮೈ ಗಿಫ್ಟ್.ಕಾಮ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಗತ್ ಮಾತನಾಡುತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗೇಲಿ ಮಾಡಲು ಮರೆಯಲಿಲ್ಲ.

ನಾನು ಉತ್ತಮ ಬರಹಗಾರನಲ್ಲ, ಆದರೆ ಅತಿ ಹೆಚ್ಚು ಮಾರಾಟವಾಗುವ ಬರಹಗಾರ ಎನ್ನುತ್ತಲೇ ಮಾತು ಆರಂಭಿಸಿದ ಭಗತ್, ರಾಹುಲ್ ಬಂದು ಹೋದ ಮೇಲೆ ಒಂದು ಸಂಗತಿ ಸ್ಪಷ್ಟವಾಗಿದೆ ಯಾವ ಕಾರಣಕ್ಕೂ ಭಾಷಣ ಮಾಡುತ್ತಿದ್ದಾಗ ಪ್ರೇಕ್ಷಕರಿಂದ ಪ್ರತಿಕ್ರಿಯೆ ಬಯಸಬಾರದು ಎಂಬುದನ್ನು ರಾಹುಲ್ ತಿಳಿಸಿಕೊಟ್ಟಿದ್ದಾರೆ ಎಂದು ಮೌಂಟ್ ಕಾರ್ಮೆಲ್ ಕಾಲೇಜು ಸಂವಾದದ ಪ್ರಕರಣವನ್ನು ನೆನಪು ಮಾಡಿಕೊಂಡು ಹೇಳಿದರು.['ಚೇತನ್ ಭಗತ್ ಸಾಹಿತ್ಯ ಲೋಕದ ರಾಹುಲ್ ಗಾಂಧಿ!']

bengaluru

ಪರಿಶ್ರಮವೇ ಯಶಸ್ಸಿಗೆ ಮಾನದಂಡ, ಅದು ಯಾವುದೇ ಕ್ಷೇತ್ರದಲ್ಲಾಗಿರಬಹುದು. ಒಮ್ಮೆ ನೀವು ಉನ್ನತ ಮಟ್ಟಕ್ಕೆ ತಲುಪಿದಿರಿ ಎಂದಾದರೆ ಹೊಸ ಹೊಸ ಯೋಜನೆಗಳು ನಿಮ್ಮ ಮುಂದೆಯೇ ಬರುತ್ತದೆ ಎಂದು ಭಗತ್ ಹೇಳಿದರು.[ಚೇತನ್ ಭಗತ್ 'ಅರ್ಧ ಪ್ರೇಯಸಿ'ಯ ಕತೆಯಿದು]

ಆವಾರ್ಡ್ ವಾಪಸಿ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರಿತೋ? ಇಲ್ಲವೋ? ಎಂಬುದನ್ನು ವಿಶ್ಲೇಷಣೆ ಮಾಡಲು ಇದು ವೇದಿಕೆಯಲ್ಲ ಎಂದು ಹೇಳಿದರು. ಅಲ್ಲದೇ ಅಸಹಿಷ್ಣುತೆ ಬಗ್ಗೆ ಮಾತನಾಡುವ ಅಗತ್ಯವೂ ನನಗೆ ಕಂಡುಬರುತ್ತಿಲ್ಲ ಎಂದು ಹೇಳಿದರು.

bengaluru
English summary
A glittering program convened to motivate youths, mainly those envisage to clutch on to entrepreneurship unleashed its peacock-styled feather with 'Authorpreneur' Chetan Bhagat delivering an inspiring talk. The program was organised by a corporate start-up "sendmygift.com", a gift delivery portal at Le Meridien hotel in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X