ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮಂಡಳಿ ಬಿಲ್ ಪಾವತಿಯಲ್ಲಿ ಮಹತ್ವದ ಬದಲಾವಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18 : ಬೆಂಗಳೂರು ಜಲಮಂಡಳಿ ನೀರಿನ ಬಿಲ್ ಪಾವತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ನವೆಂಬರ್‌ 1ರಿಂದಲೇ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಲಮಂಡಳಿ ನೀರಿನ ಶುಲ್ಕವನ್ನು ನವೆಂಬರ್ 1ರಿಂದ ಚೆಕ್ ಅಥವ ಡಿಡಿ ಮೂಲಕ ಸ್ವೀಕಾರ ಮಾಡುವುದನ್ನು ರದ್ದುಗೊಳಿಸಲಾಗಿದೆ. ಡಿಜಿಟಲ್ ಪೇಮೆಂಟ್ ಮೂಲಕ ಬಿಲ್‌ಗಳನ್ನು ಪಾವತಿ ಮಾಡಲು ಅವಕಾಶ ನೀಡಲಾಗಿದೆ.

ಶೇ 35ರಷ್ಟು ನೀರಿನ ದರ ಹೆಚ್ಚಿಸಲಿದೆ ಬೆಂಗಳೂರು ಜಲಮಂಡಳಿಶೇ 35ರಷ್ಟು ನೀರಿನ ದರ ಹೆಚ್ಚಿಸಲಿದೆ ಬೆಂಗಳೂರು ಜಲಮಂಡಳಿ

ನೀರಿನ ಬಿಲ್ ಪಾವತಿಸಿದ ಚೆಕ್ ಮತ್ತು ಡಿಡಿಗಳು ಹಲವು ಬಾರಿ ಬ್ಯಾಂಕ್‌ನಿಂದ ತಿರಸ್ಕೃತವಾಗುತ್ತಿವೆ. ಈ ಹಿನ್ನಲೆಯಲ್ಲಿ ನೀರಿನ ಬಿಲ್ ಪಾವತಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.

ನಿವೃತ್ತ ಜಲಮಂಡಳಿ ಅಧಿಕಾರಿಗೆ ಕೊರೊನಾ ಸೋಂಕು, ಆತ್ಮಹತ್ಯೆನಿವೃತ್ತ ಜಲಮಂಡಳಿ ಅಧಿಕಾರಿಗೆ ಕೊರೊನಾ ಸೋಂಕು, ಆತ್ಮಹತ್ಯೆ

bwssb

ಡಿಜಿಟಲೀಕರಣವನ್ನು ಪ್ರೋತ್ಸಾಹಿಸಲು ಮತ್ತು ಬಿಲ್ ಪಾವತಿಯನ್ನು ಮತ್ತಷ್ಟು ಸರಳಗೊಳಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಜನರು ಜಲಮಂಡಳಿ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.

ಯಾದಗಿರಿ: ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಬದಲು ನೀರು; ಗ್ರಾಹಕರ ಆಕ್ರೋಶಯಾದಗಿರಿ: ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಬದಲು ನೀರು; ಗ್ರಾಹಕರ ಆಕ್ರೋಶ

ಜನರು ನೀರಿನ ಶುಲ್ಕವನ್ನು ಬಿಬಿಪಿಎಸ್, ಪೇಟಿಎಂ, ಭೀಮ್, ಪೇಯು, ಫೋನ್ ಪೇ, ಗೂಗಲ್ ಪೇ ಸೇರಿದಂತೆ ವಿವಿಧ ಮಾದರಿಯ ವ್ಯವಸ್ಥೆ ಮೂಲಕ ಪಾವತಿ ಮಾಡಬಹುದಾಗಿದೆ.

ಕೋವಿಡ್ ಸಂದರ್ಭದಲ್ಲಿ ಜಲಮಂಡಳಿ ನೀರಿನ ಬಿಲ್ ಮೊತ್ತವನ್ನು ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್ ರೂಪದಲ್ಲಿ ಕಳಿಸುವ ವ್ಯವಸ್ಥೆಯನ್ನು ಮಾಡಿತ್ತು. ಜಲಮಂಡಳಿ ವೆಬ್‌ಸೈಟ್‌ನಲ್ಲಿಯೂ ಬಿಲ್ ಪಡೆಯುವ ವ್ಯವಸ್ಥೆಯನ್ನು ಮಾಡಿತ್ತು.

ಜಲಮಂಡಳಿ ನೀರಿನ ದರ ಪರಿಷ್ಕರಣೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬೆಂಗಳೂರು ನಗರ ಉಸ್ತುವಾರಿ ಸಚಿವರು. ಕೆಲವು ದಿನಗಳ ಕಾಲ ದರ ಏರಿಕೆ ಮಾಡುವುದು ಬೇಡ ಎಂದು ಅವರು ಸೂಚಿಸಿದ್ದಾರೆ. ಆದ್ದರಿಂದ, ದರ ಹೆಚ್ಚಳವಾಗಿಲ್ಲ.

English summary
The Bangalore Water Supply and Sewerage Board (BWSSB) said that it will not allowed cheque and demand draft for water bill from November 1. People can pay bill through digital payment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X