ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್‌ ಕೊಚ್ಚಿ ತನಕ ವಿಸ್ತರಣೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್‌ ಯೋಜನೆಯನ್ನು ಕೊಚ್ಚಿ ತನಕ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೇರಳ ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಹಲವು ಬಾರಿ ಮನವಿ ಮಾಡಿತ್ತು.

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್‌ಐಸಿಡಿಐಟಿ) ಕೇಂದ್ರ ಸರ್ಕಾರದ ತೀರ್ಮಾನದ ಬಗ್ಗೆ ಕೇರಳ ರಾಜ್ಯಕ್ಕೆ ಮಾಹಿತಿ ನೀಡಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ.

ಬೆಂಗಳೂರು-ಚೆನ್ನೈ ನಡುವೆ 120 ಕಿಮೀ ವೇಗದಲ್ಲಿ ಚಲಿಸಿಬೆಂಗಳೂರು-ಚೆನ್ನೈ ನಡುವೆ 120 ಕಿಮೀ ವೇಗದಲ್ಲಿ ಚಲಿಸಿ

"ಹಲವು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವಾಗ ಕೇರಳ ರಾಜ್ಯವನ್ನು ಕಡೆಗಣಿಸಲಾಗಿದೆ. ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಕೇರಳವನ್ನು ಸೇರಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಹಲವು ಬಾರಿ ಮನವಿ ಮಾಡಿತ್ತು" ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಬೆಂಗಳೂರು-ಚೆನ್ನೈ ನಡುವೆ 120 ಕಿಮೀ ವೇಗದಲ್ಲಿ ಚಲಿಸಿಬೆಂಗಳೂರು-ಚೆನ್ನೈ ನಡುವೆ 120 ಕಿಮೀ ವೇಗದಲ್ಲಿ ಚಲಿಸಿ

Chennai Bengaluru Industrial Corridor Extend Till Kochi

ಕಾರಿಡಾರ್ ಕೊಚ್ಚಿ ತನಕ ವಿಸ್ತರಣೆಯಾದರೆ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಸುಮಾರು 10 ಸಾವಿರ ಕೋಟಿ ಬಂಡವಾಳ ಖಾಸಗಿ ಉದ್ಯಮಗಳ ಮೂಲಕ ಕೇರಳ ರಾಜ್ಯದಲ್ಲಿ ಹೂಡಿಕೆಯಾಗುವ ನಿರೀಕ್ಷೆ ಇದೆ.

ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ

ದೇಶದಲ್ಲಿ ನಿರ್ಮಾಣವಾಗುತ್ತಿರುವ 5 ಪ್ರಮುಖ ಇಂಡಸ್ಟ್ರಿಯಲ್ ಕಾರಿಡಾರ್‌ಗಳಲ್ಲಿ ಚೆನ್ನೈ-ಬೆಂಗಳೂರು ಕಾರಿಡಾರ್ ಒಂದಾಗಿದೆ. ಚೆನ್ನೈ, ಶ್ರೀಪೆರಂಬೂರು, ರಾಣಿಪೇಟ್, ಚಿತ್ತೂರು, ಬಂಗಾರಪೇಟೆ, ಹೊಸಕೋಟೆ, ಮೂಲಕ ಬೆಂಗಳೂರಿಗೆ ಬಂದು ಸೇರಲಿದೆ.

English summary
Chennai-Bengaluru industrial corridor extend till Kochi. Kerala government approached union government to extend corridor to Kochi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X