ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುಧವಾರದಿಂದ ಚೆನ್ನೈ-ಬೆಂಗಳೂರು ನೇರ ರೈಲು; ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20 : ಚೆನ್ನೈ ಮತ್ತು ಬೆಂಗಳೂರು ನಡುವಿನ ನೇರ ರೈಲು ಸಂಚಾರ ಅಕ್ಟೋಬರ್ 21ರಿಂದ ಆರಂಭವಾಗಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ 6 ತಿಂಗಳಿನಿಂದ ರೈಲು ಸಂಚಾರ ರದ್ದುಗೊಂಡಿತ್ತು.

ಡಬಲ್ ಡೆಕ್ಕರ್ ಸಂಪೂರ್ಣ ಕಾಯ್ದಿರಿಸಿದ ಸೀಟುಗಳನ್ನು ಹೊಂದಿರುವ ವಿಶೇಷ ರೈಲು ಅಕ್ಟೋಬರ್ 21ರಿಂದ ಸಂಚಾರ ನಡೆಸಲಿದೆ. ಇದರಿಂದಾಗಿ ಚೆನ್ನೈ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ ಎಂದುದ ನೈಋತ್ಯ ರೈಲ್ವೆ ಹೇಳಿದೆ.

ಹಬ್ಬದ ವಿಶೇಷ ರೈಲು; ಮೈಸೂರಿನಿಂದ ಸಂಚರಿಸುವ ರೈಲುಗಳ ಪಟ್ಟಿ ಹಬ್ಬದ ವಿಶೇಷ ರೈಲು; ಮೈಸೂರಿನಿಂದ ಸಂಚರಿಸುವ ರೈಲುಗಳ ಪಟ್ಟಿ

ಚೆನ್ನೈ-ಬೆಂಗಳೂರು-ಚೆನ್ನೈ ನಡುವೆ ಸಂಚಾರ ನಡೆಸುವ ರೈಲು ನಂಬರ್ 06075 ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ 7.25ಕ್ಕೆ ಹೊರಡಲಿದೆ. ಬೆಂಗಳೂರು ನಗರಕ್ಕೆ 1.10ಕ್ಕೆ ತಲುಪಲಿದೆ.

ಹುಬ್ಬಳ್ಳಿ-ವಿಜಯವಾಡ ಹಬ್ಬದ ವಿಶೇಷ ರೈಲು; ವೇಳಾಪಟ್ಟಿ ಹುಬ್ಬಳ್ಳಿ-ವಿಜಯವಾಡ ಹಬ್ಬದ ವಿಶೇಷ ರೈಲು; ವೇಳಾಪಟ್ಟಿ

Chennai Bengaluru Direct Train From October 21

ರೈಲು ನಂಬರ್ 06076 ಬೆಂಗಳೂರು ನಗರದಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ರಾತ್ರಿ 8.30ಕ್ಕೆ ಚೆನ್ನೈ ತಲುಪಲಿದೆ. ಈ ರೈಲು 8 ಎಸಿ ಕೋಚ್‌ಗಳನ್ನು ಹೊಂದಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಹಬ್ಬಕ್ಕಾಗಿ 392 ವಿಶೇಷ ರೈಲು, ಟಿಕೆಟ್ ದರವೂ ಹೆಚ್ಚುಹಬ್ಬಕ್ಕಾಗಿ 392 ವಿಶೇಷ ರೈಲು, ಟಿಕೆಟ್ ದರವೂ ಹೆಚ್ಚು

ಈ ರೈಲು ಕುಪ್ಪಂ, ಬಂಗಾರಪೇಟೆ, ಕೆ. ಆರ್. ಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

Recommended Video

ನಾವು ತುಂಬಾ ಯೋಚ್ನೆ ಮಾಡೋಲ್ಲ , Festival Important | Oneindia Kannada

ಚೆನ್ನೈ ಮತ್ತು ಬೆಂಗಳೂರು ನಡುವೆ ಪ್ರತಿದಿನದ ನೇರ ರೈಲು ಸಂಚಾರ ಆರಂಭವಾದರೆ ನೂರಾರು ಪ್ರಯಾಣಿಕರಿಗೆ ಸಹಾಯಕವಾಗಲಿದೆ. ನೂರಾರು ಜನರು ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರವನ್ನು ನಡೆಸುತ್ತಾರೆ.

English summary
After the 6 months South Western Railway will run double-decker fully reserved special train between Chennai-Bengaluru from October 21, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X