ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಮೊಮ್ಮಕ್ಕಳ ಹೆಸರಿನಲ್ಲಿ ವಂಚನೆ; ಎಫ್‌ಐಆರ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡರ ಮೊಮ್ಮಕ್ಕಳ ಹೆಸರಿನಲ್ಲಿ ಇಬ್ಬರು ಯುವಕರು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಎಫ್‌ಐಆರ್ ದಾಖಲು ಮಾಡಲಾಗಿದೆ.

Recommended Video

Congress ನಾಯಕರ ಜೊತೆ Ragini ಹಾಗು Sanjjanaa - BJP tweet | Oneindia Kannada

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಿಶಾಂತ್ ಮತ್ತು ಪ್ರದೀಪ್ ಎಂಬ ಇಬ್ಬರು ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರಿಗಾಗಿ ಹುಡುಕಾಡ ನಡೆದಿದೆ. ಆರ್. ನಾರಾಯಣಪ್ಪ ಎಂಬುವವರು ದೂರು ನೀಡಿದ್ದರು.

100 ಕೋಟಿ ರು ವಂಚನೆ ಆರೋಪ: ಶಾಸಕರ ಮನೆ ಮೇಲೆ ದಾಳಿ 100 ಕೋಟಿ ರು ವಂಚನೆ ಆರೋಪ: ಶಾಸಕರ ಮನೆ ಮೇಲೆ ದಾಳಿ

ನಿಶಾಂತ್ ಎಂಬ ಯುವಕ ತಾನು ದೇವೇಗೌಡ ಮೊಮ್ಮಗ ಎಂದು ಹೇಳಿಕೊಂಡು ರೋಲ್ಸ್‌ ರಾಯಲ್ಸ್ ಕಾರು ಖರೀದಿ ಮಾಡಲು ಹೋಗಿದ್ದ. ಈ ಬಗ್ಗೆ ವಿಡಿಯೋವಿದ್ದು, ಅದನ್ನು ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಹಾಕಲಾಗಿತ್ತು.

ತೆರಿಗೆ ವಂಚನೆ: ಐಐಪಿಎಂ ನಿರ್ದೇಶಕ ಅರಿಂದಂ ಚೌಧರಿ ಬಂಧನ ತೆರಿಗೆ ವಂಚನೆ: ಐಐಪಿಎಂ ನಿರ್ದೇಶಕ ಅರಿಂದಂ ಚೌಧರಿ ಬಂಧನ

Cheating In The Name Of Deve Gowda Grandson Fir Filed

ಪ್ರದೀಪ್ ಎಂಬ ವ್ಯಕ್ತಿ ಸರ್ಕಾರದ ವಿವಿಧ ಕೆಲಸಗಳನ್ನು ಮಾಡಿಸಿಕೊಡುತ್ತೇನೆ ಎಂದು ಜನರಿಂದ ಹಣ ಪಡೆದಿದ್ದಾನೆ. ಈ ಕುರಿತು ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿತ್ತು.

ಫಾಸ್ಟ್‌ಟ್ಯಾಗ್ ಹೆಸರಲ್ಲಿ ಯುವಕರಿಗೆ 64 ಸಾವಿರ ವಂಚನೆ ಫಾಸ್ಟ್‌ಟ್ಯಾಗ್ ಹೆಸರಲ್ಲಿ ಯುವಕರಿಗೆ 64 ಸಾವಿರ ವಂಚನೆ

ಎಚ್. ಡಿ. ದೇವೇಗೌಡರ ಸಾಮಾಜಿಕ ಜಾಲತಾಣ ನೋಡಿಕೊಳ್ಳುವ ಆರ್. ನಾರಾಯಣಪ್ಪ ಈ ವಿಡಿಯೋ ನೋಡಿ ಯುವಕರಿಗೆ ಕರೆ ಮಾಡಿದ್ದಾರೆ. ಆಗ ವಿಡಿಯೋ ಡಿಲೀಟ್ ಮಾಡಲಾಗಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ನಿಶಾಂತ್ ಮತ್ತು ಪ್ರದೀಪ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

English summary
Bengaluru Banashankari police registered FIR against Nishant and Pradeep who try to cheat in the name of former the PM H. D. Deve Gowda grandson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X