ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

43 ಕೋಟಿ ವಂಚನೆ : ವಿಶಾಲಾಕ್ಷಿ ಭಟ್ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್ 28 : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಾಗಿ ಸುಮಾರು 43 ಕೋಟಿ ರೂಪಾಯಿ ವಂಚಿಸಿದ್ದ ವಿಶಾಲಾಕ್ಷಿ ಭಟ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ವಿಶಾಲಾಕ್ಷಿ ಅವರ ವಿರುದ್ಧ ದೂರು ದಾಖಲಾಗಿತ್ತು.

ಬೆಂಗಳೂರಿನ ಜೆ.ಪಿ. ನಗರ ನಿವಾಸಿಯಾದ ವಿಶಾಲಾಕ್ಷಿ ಭಟ್ ಅವರು ಮಡಿವಾಳದ ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಬ್ಯಾಂಕ್ ಮೂಲಕ ಷೇರು ಖರೀದಿಸಿದರೆ ಕೋಟಿ-ಕೋಟಿ ಹಣ ಮಾಡಬಹುದು ಎಂದು ಉದ್ಯಮಿಗಳನ್ನು ಹಣ ಹೂಡಿಕೆ ಮಾಡಲು ಆಹ್ವಾನಿಸಿದ್ದರು. [ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ಇನ್ಮುಂದೆ ಪೇಪರ್ ಲೆಸ್]

vishalakhsi bhat

ವಿಶಾಲಾಕ್ಷಿ ಅವರ ಮಾತು ನಂಬಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಉದ್ಯಮಿಗಳ ಹಣ ಹೂಡಿಕೆ ಮಾಡಿದ್ದರು. ಆದರೆ, ಸುಮಾರು 43 ಕೋಟಿ ಹಣದೊಂದಿಗೆ ವಿಶಾಲಾಕ್ಷಿ ಅವರು ಕೆಲವು ದಿನಗಳ ಹಿಂದೆ ಪರಾರಿಯಾಗಿದ್ದರು. [ಮಂಗಳೂರು : 5 ಕೋಟಿ ದರೋಡೆ ತನಿಖೆ ಎಲ್ಲಿಗೆ ಬಂತು?]

ಹಣ ಹೂಡಿಕೆ ಮಾಡುವಂತೆ ಆಹ್ವಾನಿಸಿ ನಮ್ಮನ್ನು ವಂಚಿಸಿದ್ದಾರೆ ಎಂದು ಹಣ ಹೂಡಿದ್ದ ಉದ್ಯಮಿಗಳು ಮಡಿವಾಳ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ವಿಶಾಲಾಕ್ಷಿ ಅವರ ವಿರುದ್ಧ ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ), 420 (ವಂಚನೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ಮಡಿವಾಳ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು.[ಚಿಟ್ ಫಂಡ್ ನಿಂದ 2 ಕೋಟಿ ವಂಚನೆ]

English summary
Bengaluru Madiwala police arrested Vishalakhsi Bhat in connection with the cheating case of more than 40 core. Vishalakhsi Bhat working in Madiwala HDFC Life Insurance branch as a manager. Two businessmen field complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X