ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ ಜಿನಮಂದಿರದಲ್ಲಿ ಚಾತುರ್ಮಾಸ ಕಾರ್ಯಕ್ರಮ ಆರಂಭ

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 11 : ಪರಮ ಪೂಜ್ಯ 108 ಬಾಲಾಚಾರ್ಯಶ್ರೀ ಸಿದ್ಧಸೇನ ಮಹಾರಾಜರು ಹಾಗೂ ಪರಮ ಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರ ಸಾರಥ್ಯದಲ್ಲಿ 2015ರ ಚಾತುರ್ಮಾಸ ಕಾರ್ಯಕ್ರಮ ಜರುಗುತ್ತಿದೆ.

ಚಾತುರ್ಮಾಸ ಕಾರ್ಯಕ್ರಮವು ತ್ಯಾಗಿ ಸೇವಾ ಟ್ರಸ್ಟ್ ಹಾಗೂ ಚಕ್ರೇಶ್ವರ ಮಹಿಳಾ ಸಮಾಜದ ಸಹಯೋಗದಲ್ಲಿ ನಡೆಯುತಿದ್ದು, ಜಯನಗರದ ಜಿನ ಮಂದಿರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.[ಜೈನರ ಸಲ್ಲೇಖನ ವ್ರತ ಕಾನೂನುಬಾಹಿರ ಆಚರಣೆಯಂತೆ!]

Chaturmaasa programme started on Bengaluru Jayanagara digambara jain mandir

ಈ ವರ್ಷದ ಚಾತುರ್ಮಾಸವು ಜುಲೈ27 ರ ಸೋಮವಾರದಿಂದ ಆರಂಭವಾಗಿದ್ದು, ನವೆಂಬರ್ 8ರ ಮಂಗಳವಾರ ಮುಕ್ತಾಯವಾಗಲಿದೆ. ದಿನಾಂಕ 15ರ ಶನಿವಾರ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಜೈನ ಯುವ ಸಮಾವೇಶ ಕಾರ್ಯಕ್ರಮ ಜಯನಗರದ ಆಚಾರ್ಯ ಶ್ರೀ ಶಾಂತಿನಗರ ಸಭಾ ಮಂಟಪದಲ್ಲಿ ನಡೆಯಲಿದ್ದು, ಶ್ರವಣ ಬೆಳಗೊಳದ ಮಾಸ ಪತ್ರಿಕೆ, ಗೊಮ್ಮಟವಾಣಿಯ ಸಂಪಾದಕರಾದ ಎಸ್. ಎನ್ ಅಶೋಕ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಚಾತುರ್ಮಾಸ 2015 ರ ಧಾರ್ಮಿಕ ಕಾರ್ಯಕ್ರಮಗಳು:

* ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ

* ಆಗಸ್ಟ್ 21 - ಮುಕುಟ ಸಪ್ತಮಿ

* ಆಗಸ್ಟ್ 29 - ರಕ್ಷಾ ಬಂಧನ

* ಸೆಪ್ಟೆಂಬರ್ 14 - ಷೋಡಶಭಾವನ ವ್ರತಾರಂಭ

* ಸೆಪ್ಟೆಂಬರ್ 18 - ದಶಲಕ್ಷಣ ವ್ರತಾರಂಭ

* ಸೆಪ್ಟೆಂಬರ್ 26 - ಶ್ರೀಮದನಂತ ವ್ರತಾರಂಭ- ತ್ರಯೋದಶಿ

* ಸೆಪ್ಟೆಂಬರ್ 27 - ಶ್ರೀಮದನಂತ ತೀರ್ಥಂಕರರ ವ್ರತ ಚತುರ್ದಶಿ

* ಸೆಪ್ಟೆಂಬರ್ 28 - ಕ್ಷಮಾವಳಿ

* ಅಕ್ಟೋಬರ್‌ 4 - ಸಾಮೂಹಿಕ ಕ್ಷಮಾವಳಿ

* ಅಕ್ಟೋಬರ್ 13 - ಶರನ್ನವರಾತ್ರಿ ಪ್ರಾರಂಭ

* ಅಕ್ಟೋಬರ್ 23 - ವಿಜಯದಶಮಿ

* ನವೆಂಬರ್ 09 - ತ್ರಯೋದಶಿ (ಧನ್ ತೇರಸ್)

* ನವೆಂಬರ್ 10 - ಚತುರ್ದಶಿ

* ನವೆಂಬರ್‌ 11 - ಭಗವಾನ್ ೧೦೦೮ ಶ್ರೀ ಮಹಾವೀರ ಸ್ವಾಮಿ ಮೋಕ್ಷ ಕಲ್ಯಾಣ

ಚಾತುರ್ಮಾಸ 2015ರ ಸಭಾ ಕಾರ್ಯಕ್ರಮಗಳು:

* ಆಗಸ್ಟ್ 15 - ಯುವ ಸಮಾವೇಶ

* ಆಗಸ್ಟ್ 16 - ರಾಜ್ಯ ಮಟ್ಟದ ಜೈನ್ ಮಿಲನ್ ಸಮಾವೇಶ

* ಆಗಸ್ಟ್ 23 - ವಿಮಾನಪುರದ ಜೈನ ಬಾಂಧವರ ಸಮಾವೇಶ

* ಆಗಸ್ಟ್ 30 - ವಕೀಲರ ಸಮಾವೇಶ

* ಸೆಪ್ಟೆಂಬರ್ 09 - ಸಾಂಸ್ಕೃತಿಕ ಕಾರ್ಯಕ್ರಮಗಳು

* ಸೆಪ್ಟೆಂಬರ್‌ 12 - ವೈದ್ಯರ ಸಮಾವೇಶ

* ಸೆಪ್ಟೆಂಬರ್‌ 13 - ಆಚಾರ್ಯಶ್ರೀಗಳೊಂದಿಗೆ ಮಕ್ಕಳ ಸಮಾವೇಶ

* ಅಕ್ಟೋಬರ್‌ 02 - ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟದವರ ಸಮಾವೇಶ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪ)

* ಅಕ್ಟೋಬರ್ 03 - ಜಿನ ಭಜನಾ ಕಾರ್ಯಕ್ರಮ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪ)

* ಅಕ್ಟೋಬರ್‌ 18 - ಖಂಡೇಲ್ ವಾಲ ಜೈನ ಸಮಾಜದ ಸಮಾವೇಶ

* ಅಕ್ಟೋಬರ್ 25 - ರಸಪ್ರಶ್ನೆ ಕಾರ್ಯಕ್ರಮ (ಶ್ರೀ ಚಕ್ರೇಶ್ವರ ಮಹಿಳಾ ಸಂಘ)

* ನವೆಂಬರ್‌ 01 - ಪೂಜಾರಾಧನೆ

* ನವೆಂಬರ್‌ 08 - ಜನ ಕಲ್ಯಾಣ ಕಾರ್ಯಕ್ರಮಗಳು

English summary
Chaturmaasa programme started on Digambara jain mandir, Aane bande road, 3rd block, South end circle, Jayanagara, bengaluru. This programme organized by Tyagi seva trust and Chakreshwari Mahila Sangha. Its ends on November 08.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X