ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣ ಸಿಪಿವೈ ಕಾರ್ಯಕ್ರಮ: ಹಕ್ಕು ಬಾಧ್ಯತಾ ಸಮಿತಿಗೆ ವಹಿಸಲು ಆಗ್ರಹಿಸಿ ಸಿಎಂ ಕುಮಾರಸ್ವಾಮಿ ಪತ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಚನ್ನಪಟ್ಟಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ವಿಧಾನ ಪರಿಷತ್ ಸದಸ್ಯ ಸಿ.ಪಿಯೋಗೇಶ್ವರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ಘಟನೆಯಿಂದ ತಮ್ಮ ಹಕ್ಕಿಗೆ ಚ್ಯುತಿಯಾಗಿದೆ. ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿ ಪರಿಶೀಲನೆಗೆ ಒಳಪಡಿಸುವ ಕುರಿತು ಮುಖ್ಯಮಂತ್ರಿಗಳಿಗೆ ಸುಧೀರ್ಘ ಪತ್ರೆ ಬರೆದಿರುವ ಕುಮಾರಸ್ವಾಮಿ, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ, ಅಕ್ಟೋಬರ್ 1ರಂದು ಆಯೋಜಿಸಿದ ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರ ನೀಡಿರುವ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಕ್ಷೇತ್ರದ ಶಾಸಕನಾಗಿರುವ ನನ್ನನ್ನು ಕಡೆಗಣಿಸಿ ನನ್ನ ಹಕ್ಕಿಗೆ ಚ್ಯುತಿ ಉಂಟು ಮಾಡಲಾಗಿದೆ ಎಂದು ದೂರಿದ್ದಾರೆ.

ಈ ಸರ್ಕಾರಿ ಕಾರ್ಯಕ್ರಮ ಏರ್ಪಡಿಸಿದ ರಾಮನಗರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲೆಯ ಮತ್ತು ಇತರೇ ಆಡಳಿತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ವಿಧಾನಸಭಾ ಹಕ್ಕು ಭಾದ್ಯತೆ ಸಮಿತಿ ಪರಿಶೀಲನೆಗೆ ಪ್ರಕರಣವನ್ನು ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನಲ್ಲಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಕೆಆರ್ಐಡಿಎಲ್ ಇಲಾಖೆಯಿಂದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಆಹ್ವಾನ ಪತ್ರ ಮುದ್ರಿಸಲಾಗಿದೆ. ಮುಖ ಪುಟದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ. ಅನುದಾನ ಅಡಿಯಲ್ಲಿ ಎಂದು ಸಹ ಮುದ್ರಿಸಲಾಗಿದೆ.

ಸರ್ಕಾರದ ಅನುದಾನವೆಂದು ಹಾಕಬೇಕು

ಸರ್ಕಾರದ ಅನುದಾನವೆಂದು ಹಾಕಬೇಕು

ಆಹ್ವಾನ ಪತ್ರಿಕೆ ಮುದ್ರಣಕ್ಕೂ ಮುನ್ನ ಕಾರ್ಯಕ್ರಮದ ಬಗ್ಗೆ ಶಾಸಕನಾದ ನನ್ನೊಂದಿಗೆ ಚರ್ಚಿಸಿಲ್ಲ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ನನ್ನ ಗಮನಕ್ಕೆ ತಂದು ಕಾರ್ಯಕ್ರಮ ಏರ್ಪಡಿಸಬೇಕಿತ್ತು. ಸರ್ಕಾರದ ಯೋಜನೆ ಮತ್ತು ಶಂಕುಸ್ಥಾಪನೆ ವೇಳೆ ಯೋಜನೆಯ ನಾಮಾಂಕಿತ ಮತ್ತು ಸರ್ಕಾರದಿಂದ ನೀಡಿರುವ ಅನುದಾನ ಅಚ್ಚು ಹಾಕಬೇಕೇ ವಿನಾ ಬೇರೆ ಯಾವುದೇ ಚುನಾಯಿತ ಪ್ರತಿನಿಧಿಗಳು ಅನುದಾನ ತಂದಿದ್ದಾರೆಂದು ಬಿಂಬಿಸಿ, ಅಚ್ಚುಹಾಕುವುದು ಸರ್ಕಾರ ನೀತಿ, ನಿಯಮ ಮತ್ತು ಮಾರ್ಗದರ್ಶನಗಳಿಗೆ ವಿರುದ್ಧವಾದದ್ದು. ಸರ್ಕಾರ ನೀಡಿರುವ ಅನುದಾನ ಸರ್ಕಾರ ಬೊಕ್ಕಸದಿಂದ ಬಂದಿರುವ ಮೊತ್ತವೇ ಹೊರತು ಯಾವುದೇ ಚುನಾಯಿತ ಪ್ರತಿನಿಧಿಗಳು ನೀಡಿರುವ ಸ್ವಂತ ವಂತಿಕೆ ಅಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯರ ಕೋರಿಕೆಯಿಂದ ಬಂದಿರುವ ಅನುದಾನ ಎಂದು ಬಿಂಬಿಸಲಾಗಿದೆ. ರಾಮನಗರ ಜಿಲ್ಲೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಚನ್ನಪಟ್ಟಣ ಮತ್ತು ಕೆಆರ್ಐಡಿಎಲ್ ಇಲಾಖೆ ಅಧಿಕಾರಿಗಳು, ಚನ್ನಪಟ್ಟಣ ಕ್ಷೇತ್ರದಿಂದ ಚುನಾಯಿತನಾಗಿರುವ ನನ್ನನ್ನು ಕಡೆಗಣಿಸಿದ್ದಾರೆ. ನನ್ನ ಸ್ವ ಕ್ಷೇತ್ರದಲ್ಲಿ ನಡೆಯುವ ಸಭೆಯ ಬಗ್ಗೆ ನನ್ನ ಗಮನಕ್ಕೆ ಬಾರದೇ ಮತ್ತು ಸಭೆ ನಿಗದಿ ಪಡಿಸಿರುವ ದಿನಾಂಕದಂದು ನನ್ನ ಲಭ್ಯತೆ ಬಗ್ಗೆ ವಿಚಾರಿಸುವ ಸೌಜನ್ಯತೆಯನ್ನು ಜಿಲ್ಲಾಡಳತ ತೋರಲಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.

ಸಿಪಿ ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಎಸೆದ ಜೆಡಿಎಸ್ ಕಾರ್ಯಕರ್ತರುಸಿಪಿ ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಎಸೆದ ಜೆಡಿಎಸ್ ಕಾರ್ಯಕರ್ತರು

ಕಾರ್ಯಕ್ರಮಕ್ಕೆ ಅಧಿಕಾರಿಗಳ ಕುಮ್ಮಕ್ಕು

ಕಾರ್ಯಕ್ರಮಕ್ಕೆ ಅಧಿಕಾರಿಗಳ ಕುಮ್ಮಕ್ಕು


ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಸರ್ಕಾರದ ಮಾರ್ಗದರ್ಶನದಂತೆ, ಕಾರ್ಯಕ್ರಮ ಏರ್ಪಡಿಸಿರುವುದಾಗಿ ಉತ್ತರ ನೀಡಿದ್ದಾರೆ. ಶಾಸಕರ ಗಮನಕ್ಕೆ ತರದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಕ್ಷೇತ್ರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ರದ್ದು ಪಡಿಸುವಂತೆ ಆಗ್ರಹಿಸಿದ್ದಾರೆ. ನಂತರ ಕೆಆರ್ಐಡಿಎಲ್ ಅಧಿಕಾರಿಗಳು ಸೆಪ್ಟೆಂಬರ್ 30ರಂದು ಕಾರ್ಯಕ್ರಮವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ವಾಟ್ಸ್ಆಪ್ ಮುಖೇನ ಸಂದೇಶ ಕಳುಹಿಸಿದ್ದಾರೆ.

ಆದರೆ, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವ ಬದಲು ರಾಮನಗರ ಜಿಲ್ಲಾ ಎಸ್‌ಪಿ ನೀಡಿದ ಪೊಲೀಸ್ ಕುಮ್ಮಕ್ಕಿನಿಂದ ಈ ಸರ್ಕಾರಿ ಕಾರ್ಯಕ್ರಮವನ್ನು ಚನ್ನಪಟ್ಟಣ ತಾಲೂಕಿನಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಹೊಂದಿರುವ ವಿಧಾನ ಪರಿಷತ್‌ ಸದಸ್ಯರ ಹಸ್ತದಿಂದ ನೆರೆವೇರಿಸಲು ಬಿಟ್ಟಿದ್ದಾರೆ. ಜನರ ಆಕ್ರೋಶ ಅರಿತ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರು ಕಾರ್ಯಕ್ರಮದಿಂದ ಹೊರ ಉಳಿದಿದ್ದಾರೆ. ಕಾರ್ಯಕ್ರಮ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠರಿಗೆ ಮೊದಲೇ ತಿಳಿದಿದೆ. ಆದರೂ ಒತ್ತಡದ ಮೇರೆಗೆ ಈ ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಲು ಅವರೆಲ್ಲ ಶಾಮೀಲಾಗಿದ್ದಾರೆ ಎಂದು ಅವರು ದೂರಿದರು.

75 ಎಂಎಲ್‌ಸಿಗೂ 50ಕೋಟಿ ಅನುದಾನ ನೀಡಿ

75 ಎಂಎಲ್‌ಸಿಗೂ 50ಕೋಟಿ ಅನುದಾನ ನೀಡಿ

ಮುಖ್ಯಮಂತ್ರಿಗಳೇ ತಾವು ಚನ್ನಪಟ್ಟಣ ತಾಲೂಕಿನಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡಿರುವ ವಿಧಾನ ಪರಿಷತ್‌ ಸದಸ್ಯರಿಗೆ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ.ಅನುದಾನವಾಗಿ ನೀಡಿದ್ದೀರಿ. ಈ ಅನುದಾನದಡಿ ಕೈಗೊಳ್ಳುವ ಕಾಮಗಾರಿಯನ್ನು ಕೆಆರ್ಐಡಿಎಲ್ ಮುಖೇನ ಕೈಗೊಳ್ಳುವಂತೆ ಆದೇಶಿಸಿದ್ದೀರಿ. ಕರ್ನಾಟಕ ವಿಧಾನ ಪರಿಷತ್ತಿನಲ್ಲಿ 75 ವಿಧಾನ ಪರಿಷತ್‌ ಸದಸ್ಯರು ಇದ್ದರೂ ಯಾರಿಗೂ ಈ ರೀತಿಯಾದ 50 ಕೋಟಿ ರೂ. ಅನುದಾನ ನೀಡದೇ ಚನ್ನಪಟ್ಟಣ ತಾಲೂಕಿನಿಂದ ನಾಮನಿರ್ದೇಶನ ಹೊಂದಿರುವ ವಿಧಾನ ಪರಿಷತ್‌ ಸದಸ್ಯರಿಗೆ ನೀಡಲು ಇರುವ ವಿಶೇಷತೆಯ ಹಿನ್ನೆಲೆ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

ಅನುದಾನ ನೀಡಿದ್ದರ ಉದ್ದೇಶವೇನು?

ಅನುದಾನ ನೀಡಿದ್ದರ ಉದ್ದೇಶವೇನು?

ಬೃಹತ್ ಮೊತ್ತದ 50 ಕೋಟಿ ರೂ.ಗಳು ಅನುದಾನದ ಕಾಮಗಾರಿಗಳನ್ನು ಕೆಟಿಪಿಪಿ ಕಾಯಿದೆಯ ನಿಬಂಧನೆಗಳನ್ನು ಹೊರತುಪಡಿಸಿ, ಕೆಆರ್ಐಡಿಎಲ್ ನಿಂದ ಕೈಗೊಳ್ಳಲು ನೀಡಿರುವ ಆದೇಶದ ಉದ್ದೇಶವೇನು?. ರಾಜ್ಯಾದ್ಯಂತ ಕೆಆರ್ಐಡಿಎಲ್ ನಿಂದ ವಿವಿಧ ಇಲಾಖೆ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ಕಳಪೆ ಕಾಮಗಾರಿ, ವಿಳಂಬ ಮತ್ತು ಟೆಂಡರ್ ಪ್ರಕ್ರಿಯೆ ಮುಖೇನ ಕೈಗೊಳ್ಳುವ ಕಾಮಗಾರಿಗಳಗಿಂತ ಅಧಿಕವಾಗಿದೆ. ಇದು ಪ್ರತಿ ಜಿಲ್ಲೆಯ ತ್ರೈಮಾಸಿಕವಾಗಿ ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಹೀಗಿದ್ದರೂ ತಾವು ರೂ.50 ಕೋಟಿ ಅನುದಾನದ ಕಾಮಗಾರಿ ಕೆಆರ್ಐಡಿಎಲ್ ನಿಂದ ಕೈಗೊಳ್ಳಲು ಆದೇಶಿಸಿರುವುದು ಔಚಿತ್ಯವೇನು? ಎಂದರು.

ಚನ್ನಪಟ್ಟಣ ತಾಲೂಕಿಗೆ ಸಂಬಂಧ ನೀಡಿರುವ 50 ಕೋಟಿ ರೂ. ವಿಶೇಷ ಅನುದಾನವನ್ನು ಉಳಿದ 74 ವಿಧಾನ ಪರಿಷತ್ ಸದಸ್ಯರಿಗೂ ನೀಡಿ ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುವು ಮಾಡಿಕೊಡಬೇಕೆಂದು ಕುಮಾರಸ್ವಾಮಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸಿಪಿ ಯೋಗೇಶ್ವರ್ ಮತ್ತು ಬೆಂಬಲಿಗರ ವಿರುದ್ಧ ಜೆಡಿಎಸ್ ಕಾರ್ಯಕರ್ತರಿಂದ ದೂರು ದಾಖಲುಸಿಪಿ ಯೋಗೇಶ್ವರ್ ಮತ್ತು ಬೆಂಬಲಿಗರ ವಿರುದ್ಧ ಜೆಡಿಎಸ್ ಕಾರ್ಯಕರ್ತರಿಂದ ದೂರು ದಾಖಲು

ಕಾರ್ಯಕ್ರಮಕ್ಕೆ ಕಾರಣರಾದವರನ್ನು ಅಮಾನತು ಮಾಡಿ

ಕಾರ್ಯಕ್ರಮಕ್ಕೆ ಕಾರಣರಾದವರನ್ನು ಅಮಾನತು ಮಾಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚುನಾಯಿತ ಪ್ರತಿನಿಧಿಗಳು ಶಾಸಕರು ಮತ್ತು ಲೋಕಸಭಾ ಸದಸ್ಯರುಗಳಿಗೆ ಸರ್ಕಾರಿ ಸಭೆ-ಸಮಾರಂಭಗಳಿಗೆ ಆಹ್ವಾನಿಸುವ ಕುರಿತು ಶಿಷ್ಟಾಚಾರ ಒಂದನ್ನು ಹೊರಡಿಸಲಾಗಿರುತ್ತದೆ. ಆದ ಶಿಷ್ಟಾಚಾರ ಉಲ್ಲಂಘಿಸಿ ಸರ್ಕಾರಿ ಸಮಾರಂಭಗಳನ್ನು ಏರ್ಪಡಿಸಿ ನನ್ನನ್ನು ಕಡೆಗಣಿಸಲಾಗಿದೆ. ನನ್ನ ಹಕ್ಕುಗಳಿಗೆ ಚ್ಯುತಿ ಉಂಟುಮಾಡಿದ ರಾಮನಗರ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ನಿರ್ವಹಣಾಧಿಕಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಹಾಗೂ ಕೆಆರ್ಐಡಿಎಲ್ ಅಧಿಕಾರಿಗಳನ್ನು ಕೂಡಲೇ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಬೇಕು. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಹುದ್ದೆಯ ಅಧಿಕಾರಿ ಒಬ್ಬರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಧರಣಿ ಎಚ್ಚರಿಕೆ: ಒಂದು ವೇಳೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸದಿದ್ದರೆ ನಮ್ಮ ಪಕ್ಷದ ವತಿಯಿಂದ ರಾಜಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ. ನಮ್ಮ ಪಕ್ಷದ ಎಲ್ಲಾ ಶಾಸಕರು ಸೇರಿ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಂದು ಅವರು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

English summary
Channapatna CP Yogeshwar programme. HD Kumaraswamy letter to CM Basavaraj bommai for requesting to hand over rights to liability committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X