ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ

|
Google Oneindia Kannada News

ಬೆಂಗಳೂರು, ಜುಲೈ 10: ನಮ್ಮ ಮೆಟ್ರೋ ಎರಡನೇ ಹಂತದ ಲೇನ್ 2 ರ ನಿರ್ಮಾಣ ಕಾಮಗಾರಿಯು ಜಯದೇವಾ ಮೇಲ್ಸೇತುವೆ ಜಂಕ್ಷನ್ ಬಳಿ ಪ್ರಗತಿಯಲ್ಲಿರುವ ಕಾರಣ, ಜಯದೇವ ಜಂಕ್ಷನ್ ಬಳಿ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಬನ್ನೇರುಘಟ್ಟ ರಸ್ತೆ ಮೂಲಕ ಸಿಲ್ಕ್‌ ಬೋರ್ಡ್‌ ಕಡೆಗೆ ಹೋಗುವವರು ಜೆಡಿ ಮರಾ ಜಂಕ್ಷನ್ ಮತ್ತು 9ನೇ ಕ್ರಾಸ್ ರಸ್ತೆ ಕಡೆಗೆ ಎಡ ತಿರುವು ತೆಗೆದುಕೊಂಡು, ನಂತರ ಈಸ್ಟ್‌ ಎಂಡ್ ಮುಖ್ಯ ರಸ್ತೆಗೆ ಬಲ ತಿರುವು ತೆಗೆದುಕೊಂಡು, ಮತ್ತೆ ಮಾರೇನಹಳ್ಳಿ ಮುಖ್ಯ ರಸ್ತೆ ಕಡೆಗೆ ಬಲ ತಿರುವು ತೆಗೆದುಕೊಂಡು ಸಿಲ್ಕ್‌ ಬೋರ್ಡ್‌ ತಲುಪ ಬಹುದಾಗಿದೆ.

2019 ಬಜೆಟ್: 300 ಕಿ.ಮೀ ಮೆಟ್ರೋ ಮಾರ್ಗ ವಿಸ್ತರಣೆ ಘೋಷಣೆ 2019 ಬಜೆಟ್: 300 ಕಿ.ಮೀ ಮೆಟ್ರೋ ಮಾರ್ಗ ವಿಸ್ತರಣೆ ಘೋಷಣೆ

ಬನ್ನೇರುಘಟ್ಟ ರಸ್ತೆ ಮೂಲಕ ಸಿಲ್ಕ್‌ ಬೋರ್ಡ್‌ಗೆ ತೆರಳಲು ಬೆಂಗಳೂರು ಸಂಚಾರಿ ಪೊಲೀಸರು ಮತ್ತೊಂದು ಮಾರ್ಗವನ್ನು ಸೂಚಿಸಿದ್ದು, 29ನೇ ಮುಖ್ಯ ರಸ್ತೆಯಿಂದ 6ನೇ ಕ್ರಾಸ್ ಜಂಕ್ಷನ್‌ಗೆ ಬಲ ತಿರುವುದು ತೆಗೆದುಕೊಂಡು ನಂತರ 6ನೇ ಮುಖ್ಯರಸ್ತೆಗೆ ಎಡ ತಿರುವು ಪಡೆದುಕೊಂಡು ಮತ್ತೆ ಮಾರೇನಹಳ್ಳಿ ಮುಖ್ಯ ರಸ್ತೆಗೆ ಬಲ ತಿರುವು ತೆಗೆದುಕೊಂಡು ಸಿಲ್ಕ್‌ ಬೋರ್ಡ್‌ ತಲುಪಬಹುದಾಗಿದೆ.

changes in traffic movement near Jayadev junction due to Metro construction

ಸಿಲ್ಕ್‌ ಬೋರ್ಡ್‌ ಕಡೆಯಿಂದ ಬನ್ನೇರುಘಟ್ಟ ಕಡೆಗೆ ಸಂಚರಿಸುವವರು, 29ನೇ ಮುಖ್ಯ ರಸ್ತೆಗೆ ಎಡ ತಿರುವು ತೆಗೆದುಕೊಂಡು, 7 ನೇ ಅಡ್ಡ ರಸ್ತೆಗೆ ಅಡ್ಡ ತಿರುವು ತೆಗೆದುಕೊಂಡು ಬನ್ನೇರುಘಟ್ಟ ರಸ್ತೆ ತಲುಪಬಹುದಾಗಿದೆ.

ಮಹಿಳೆಯರಿಗೆ ಮೆಟ್ರೋ ಪ್ರಯಾಣ ಉಚಿತ: ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರ್ಕಾರಮಹಿಳೆಯರಿಗೆ ಮೆಟ್ರೋ ಪ್ರಯಾಣ ಉಚಿತ: ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರ್ಕಾರ

ಜಯದೇವಾ ಅಂಡರ್‌ಪಾಸ್‌ನ ಎರಡೂ ಬದಿಯ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಔಟರ್‌ ರಿಂಗ್ ರಸ್ತೆಯಿಂದ ಬನಶಂಕರಿ ಹಾಗೂ ಸಿಲ್ಕ್‌ ಬೋರ್ಡ್‌ ಕಡೆಗೆ ಹೋಗುವ ಮಾರ್ಗದಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗ ಹೇಳಿದೆ.

English summary
Changes in traffic movement near Jayadeva junction doe to Metro 2nd phase construction. Silk Board and Bannerghatta road traffic will have some changes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X