ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯದೇವ ಆಸ್ಪತ್ರೆ ಬಳಿ ಮೆಟ್ರೋ ಮಾರ್ಗ ಬದಲು

|
Google Oneindia Kannada News

ಬೆಂಗಳೂರು, ಅ.16 : ಸಾರ್ವಜನಿಕರ ಒತ್ತಡಕ್ಕೆ ಮಣಿದಿರುವ ಬಿಎಂಆರ್ ಸಿಎಲ್ ಜಯದೇವ ಹೃದ್ರೋಗ ಆಸ್ಪತ್ರೆ ಮುಂಭಾಗದ ಮೆಟ್ರೋ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಆದರೆ, ಈ ಕುರಿತು ಅಂತಿಮ ನಕ್ಷೆ ತಯಾರಾಗಿಲ್ಲ.

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿರುವ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ, ನಮ್ಮ ಮೆಟ್ರೋ ಯೋಜನೆಯ 2ನೇ ಹಂತದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಮುಂಭಾಗ ಕೆಲವು ಬದಲಾವಣೆಗಳನ್ನು ಮಾಡಲು ಸಂಸ್ಥೆ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

bmrcl

ಈಗಿರುವ ಯೋಜನೆಯಂತೆ ಕಾಮಗಾರಿ ನಡೆಸಲು 800 ರಿಂದ 1000 ಕೋಟಿಯನ್ನು ಭೂಸ್ವಾಧೀನಕ್ಕೆ ಪರಿಹಾರ ರೂಪದಲ್ಲಿ ಕೊಡಬೇಕಾಗುತ್ತದೆ. ಹೀಗಾಗಿ ಕಡಿಮೆ ಭೂಸ್ವಾಧೀನದಿಂದ ಯೋಜನೆಯನ್ನು ಮುಗಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

ಆದರೆ, ಬದಲಾವಣೆ ಮಾಡುವ ಮಾರ್ಗ ಎಲ್ಲಿ ಹಾದು ಹೋಗುತ್ತದೆ ಎಂದು ಅವರು ಮಾಹಿತಿ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಸಹ ಜಯದೇವ ಆಸ್ಪತ್ರೆ ಆವರಣದಲ್ಲಿ ಮಾರ್ಗ ಬದಲಾವಣೆ ಮಾಡುವಂತೆ ಬಿಎಂಆರ್ ಸಿಎಲ್ ಗೆ ನಿರ್ದೇಶನ ನೀಡಿದ್ದರು. (ಜಯದೇವ ಆಸ್ಪತ್ರೆಗಿಲ್ಲ ನಮ್ಮ ಮೆಟ್ರೋ ಭೀತಿ)

ಈ ಕುರಿತು ಹೇಳಿಕೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ನಮ್ಮ ಮೆಟ್ರೋ ಯೋಜನೆಯ ಜಯದೇವ ಬಳಿ ಮೆಟ್ರೋ ಕಾಮಗಾರಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆಸ್ಪತ್ರೆಗೆ ಕಾಮಗಾರಿಯಿಂದ ಯಾವುದೇ ಅಡಚಣೆ ಆಗದಂತೆ ಬದಲಾವಣೆ ಮಾಡಲಾಗುವುದು ಎಂದರು.

ಮಾರ್ಗದಲ್ಲಿನ ಬದಲಾವಣೆಯಿಂದ ಮೆಟ್ರೋ ರೈಲಿನ ವೇಗದಲ್ಲಿ ಬದಲಾವಣೆಯಾಗುತ್ತದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ರೈಲಿನ ವೇಗದ ಮಿತಿ ಮುಂದಿನ ನಿಲ್ದಾಣಗಳಲ್ಲಿ ಹೆಚ್ಚಿಸಬಹುದು. ಜನರಿಗೆ ಅನುಕೂಲವಾಗಲು ಬದಲಾವಣೆ ಅನಿವಾರ್ಯವಾಗಿದೆ ಎಂದು ಕರೋಲಾ ಹೇಳಿದ್ದಾರೆ.

ಸದ್ಯ, ನವೆಂಬರ್ ಅಂತ್ಯದ ವೇಳೆಗೆ ಪೀಣ್ಯ-ಯಶವಂತಪುರ ಮಾರ್ಗದ ಸಂಚಾರ ಆರಂಭಿಸುವ ಗುರಿ ನಮ್ಮಮುಂದಿದೆ. ನಂತರ ಜಯದೇವ ಬಳಿಯ ಸಾರ್ವಜನಿಕರೊಂದಿಗೆ ಚರ್ಚಿಸಿ, ಮಾರ್ಗ ಬದಲಾವಣೆಯ ನಕ್ಷೆ ತಯಾರಿಸಲಾಗುವುದು ಎಂದು ಪ್ರದೀಪ್ ಸಿಂಗ್ ಕರೋಲಾ ತಿಳಿಸಿದರು.

English summary
Minor adjustments are likely to be made in the alignment of the Metro line at Jayadeva Hospital, said, P.S.Kharola Managing Director, BMRCL. On Tuesday, October 15 he addressed media at Bangalore and said, We require about 500 crore towards land acquisition itself. By making minor adjustments, we hope to reduce these costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X