ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ ಬದಲು

|
Google Oneindia Kannada News

ಬೆಂಗಳೂರು, ಜನವರಿ 16: ಬೆಂಗಳೂರು-ಮೈಸೂರು ಮೆಮು ರೈಲು ವೇಳಾ ಪಟ್ಟಿ ಬದಲಾಗಿದೆ. ವೇಳಾಪಟ್ಟಿಯನ್ನು ಜನವರಿ 16ರಿಂದ ಅನ್ವಯವಾಗುವಂತೆ ನೈಋತ್ಯ ರೈಲ್ವೆ ಬದಲಿಸಿದೆ.

ಪ್ರತಿ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸಂಜೆ 7.55ರ ಬದಲಾಗಿ 7.50ಕ್ಕೆ ಮೈಸೂರಿಗೆ ರೈಲು ಹೊರಡಲಿದೆ.

ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ, ನಿಲ್ದಾಣಗಳುಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ, ನಿಲ್ದಾಣಗಳು

ರಾತ್ರಿ 10.40ಕ್ಕೆ ಮೈಸೂರು ತಲುಪಲಿದೆ. ರೈಲಿಗೆ ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ರೈಲು ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.

Change in timing for MEMU trains

ಇದೇ ರೈಲು ಪ್ರತಿ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ರಾತ್ರಿ 11.05ಕ್ಕೆ ಮೈಸೂರಿನಿಂದ ಹೊರಟು ಮಧ್ಯರಾತ್ರಿ 1.50ಕ್ಕೆ ಬೆಂಗಳೂರು ತಲುಪಲಿದೆ. ಮೈಸೂರಿನಿಂದ ಬರುವಾಗ ರಾಮನಗರ ನಂತರ ಕೆಂಗೇರಿಯಲ್ಲಷ್ಟೇ ನಿಲುಗಡೆ ಇರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಡಿ.23ರಿಂದ ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರ ಆರಂಭಡಿ.23ರಿಂದ ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರ ಆರಂಭ

ಮೆಮು ರೈಲು ಪ್ರತಿ ಸೋಮವಾರ ಹಾಗೂ ಮಂಗಳವಾರ ರಾಮನಗರದಲ್ಲಷ್ಟೇ ಸಂಚರಿಸಲಿದೆ. ಸಂಜೆ 7.50ಕ್ಕೆ ಕೆಎಸ್‌ಆರ್‌ನಿಂದ ಹೊರಟು 8.41ಕ್ಕೆ ರಾಮನಗರ ತಲುಪಲಿದೆ. ರೈಲಿಗೆ ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿಯಲ್ಲಿ ನಿಲುಗಡೆ ಇರಲಿದೆ. ರೈಲು ಸಂಖ್ಯೆ 66535 ಬೆಂಗಳೂರು-ರಾಮನಗರ ಮೆಮು ಭಾನುವಾರ ಹೊರತುಪಡಿಸಿ ಉಳಿದ ಆರು ದಿನಗಳು ಸಂಚಾರ ನಡೆಸಲಿದೆ.

English summary
The Railway department has made following changes in the running of Memu trains Between Bengaluru-mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X