ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಮುಂಗಡ ಟಿಕೆಟ್ ಕೌಂಟರ್ ಕೆಲಸದ ಅವಧಿ ಬದಲಾವಣೆ

|
Google Oneindia Kannada News

ಬೆಂಗಳೂರು, ಜೂನ್ 30 : ನೈಋತ್ಯ ರೈಲ್ವೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಕೌಂಟರ್‌ಗಳ ಸಮಯವನ್ನು ಪರಿಷ್ಕರಣೆ ಮಾಡಿದೆ. ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣ ಹೊರತುಪಡಿಸಿ ಉಳಿದ ಎಲ್ಲಾ ನಿಲ್ದಾಣಗಳ ಕೌಂಟರ್ ಭಾನುವಾರ ಮುಚ್ಚಿರುತ್ತದೆ.

ಬೆಂಗಳೂರು ರೈಲ್ವೆ ವಲಯದಲ್ಲಿರುವ ಎಲ್ಲಾ ಕಚೇರಿಗಳು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ತನಕ ಕಾರ್ಯ ನಿರ್ವಹಣೆ ಮಾಡಲಿವೆ. ಸೋಮವಾರದಿಂದ ಶನಿವಾರದ ತನಕ ಈ ವೇಳಾಪಟ್ಟಿ ಅನ್ವಯವಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೇಳಿದೆ.

ಬೆಂಗಳೂರು-ಬೆಳಗಾವಿ ನಡುವೆ ಜೂ.26ರಿಂದಲೇ ರಾತ್ರಿ ರೈಲು ಸಂಚಾರಬೆಂಗಳೂರು-ಬೆಳಗಾವಿ ನಡುವೆ ಜೂ.26ರಿಂದಲೇ ರಾತ್ರಿ ರೈಲು ಸಂಚಾರ

ಕೆಎಸ್‌ಆರ್ ಬೆಂಗಳೂರು, ಕಂಟೋನ್ಮೆಂಟ್ ರೈಲು ನಿಲ್ದಾಣ, ಯಶವಂತಪುರ, ಕೆ. ಆರ್. ಪುರ, ಹೊಸೂರು, ತುಮಕೂರು, ಮಂಡ್ಯ, ಯಲಹಂಕ ಮತ್ತು ಕೆಂಗೇರಿ ರೈಲು ನಿಲ್ದಾಣದಲ್ಲಿರುವ ಮುಂಗಡ ಟಿಕೆಟ್ ಕೌಂಟರ್‌ಗಳಿಗೆ ಈ ನಿಯಮ ಅನ್ವಯವಾಗಲಿದೆ.

Change In Railway Passenger Reservation Counter Timings

ಕರ್ನಾಟಕ ಸರ್ಕಾರ ಜುಲೈ 4ರ ಭಾನುವಾರದಿಂದ ಪ್ರತಿವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಅಂದು ಎಲ್ಲಾ ಕಚೇರಿಗಳು ಮುಚ್ಚಿರುತ್ತದೆ. ಆದರೆ, ಕೆಎಸ್‌ಆರ್ ಬೆಂಗಳೂರು ನಿಲ್ದಾನ ಬೆಳಗ್ಗೆ 8 ರಿಂದ 2 ಗಂಟೆ ತನಕ ಕಾರ್ಯ ನಿರ್ವಹಣೆ ಮಾಡಲಿದೆ.

ರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟ

ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಕಚೇರಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಹೇಳಿದೆ. ಆದರೆ ಧರ್ಮಪುರಿ, ಹಿಂದೂಪುರ, ಬಂಗಾರಪೇಟೆ ಸೇರಿದಂತೆ ಇತರ ನಿಲ್ದಾಣಗಳ ಕಚೇರಿ ಸಮಯದಲ್ಲಿ ಬದಲಾವಣೆ ಇಲ್ಲ.

English summary
South Western Railway Bengaluru division computerised passenger reservation counter will function from 8 am to 6 pm from Monday to Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X