ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈದರಾಬಾದ್ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ' ಎಂದು ಹೆಸರಿಡಲು ಆಗ್ರಹ

By Manjunatha
|
Google Oneindia Kannada News

ಬೆಂಗಳೂರು, ಜುಲೈ 04: ಹೈದರಾಬಾದ್ ಕರ್ನಾಟಕವು ಹಿಂದಿಳಿದ ಭಾಗ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ಇದನ್ನು ತೊಡೆದುಹಾಕುವ ಸಲುವಾಗಿ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರಿಡಬೇಕು ಎಂದು ಬಿಜೆಪಿ ಶಾಸಕ ರಾಜಶೇಖರ ಪಾಟೀಲ ಒತ್ತಾಯಿಸಿದರು.

ಸದನದಲ್ಲಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಎಂಬ ಹೆಸರು ದಾಸ್ಯದ ಸಂಕೇತವಾಗಿ ಧ್ವನಿಸುತ್ತದೆ. ಈ ಭಾಗದ ಬಗ್ಗೆ ಹಾಗೂ ಇಲ್ಲಿನ ಜನರ ಬಗ್ಗೆ ಇತರೆ ಕರ್ನಾಟಕದ ಜನಗಳಿಗೆ ಇರುವ ಕೀಳರಿಮೆಯನ್ನು ಹೋಗಲಾಡಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಅವರು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಿರುವ ಸವಾಲುಗಳು!ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಿರುವ ಸವಾಲುಗಳು!

ವೈದ್ಯಕೀಯ ಸೀಟುಗಳ ಕರ್ಮಕಾಂಡ
ವೈದ್ಯಕೀಯ ಸೀಟುಗಳ ಶುಲ್ಕ 50-60 ಲಕ್ಷ ಇದ್ದು, ಸಾಮಾನ್ಯರ ಕೈಗೆ ಎಟುಕದ ರೀತಿಯಲ್ಲಿದೆ. ಮೆಡಿಕಲ್ ಕಾಲೇಜುಗಳ ಮೇಲೆ ನಿಯಂತ್ರಣ ಹೇರಿ, ಬಡವರಿಗೂ ವೈದ್ಯಕೀಯ ಸೀಟುಗಳು ಲಭ್ಯವಾಗುವಂತೆ ಮಾಡಬೇಕಿದೆ ಎಂದು ಶಾಸಕ ರಾಜಶೇಖರ ಪಾಟೀಲ ಒತ್ತಾಯಿಸಿದರು.

Change Hyderabad Karnataka name to Kalyana Karnataka: Rajashekhar patil

ಹಾಸ್ಯ, ವ್ಯಂಗ್ಯ, ಮೊನಚು ಮಾತಿಂದಲೇ ತಿವಿದ ರಮೇಶ್ ಕುಮಾರ್!ಹಾಸ್ಯ, ವ್ಯಂಗ್ಯ, ಮೊನಚು ಮಾತಿಂದಲೇ ತಿವಿದ ರಮೇಶ್ ಕುಮಾರ್!

ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ವೈದ್ಯ ಅಶ್ವಥ್‌ನಾರಾಯಣ್ ಅವರು, ಮೆಡಿಕಲ್ ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ಪಡೆದು ಕೊನೆಯ ಗಳಿಗೆಯಲ್ಲಿ ಲ್ಯಾಪ್ಸ್ ಮಾಡಲಾಗುತ್ತದೆ. ಖಾಸಗಿ ಆಡಳಿತ ಮಂಡಳಿಗೆ ಆ ಸೀಟು ಲಭ್ಯವಾಗುತ್ತದೆ. ಲ್ಯಾಪ್ಸ್‌ ಮಾಡಿದ್ದಕ್ಕೆ ಕಡಿಮೆ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ. ಲ್ಯಾಪ್ಸ್‌ ಮಾಡದ ಸೀಟುಗಳನ್ನು ಮಧ್ಯವರ್ತಿಗಳು, ಏಜೆನ್ಸಿ ಸೇರಿ ಮಾರಾಟ ಮಾಡುತ್ತಾರೆ. ಇದೊಂದು ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ಅವರು ಚಿತ್ರಣ ಬಿಚ್ಚಿಟ್ಟರು.

English summary
BJP MLA Rajashekhar Patil demanded government to Change Hyderabad Karnataka name as 'Kalyana Karnataka'. He also demand government to take control on medical colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X