ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶಸ್ಸಿನ ಹತ್ತಿರಕ್ಕೆ ಹೋಗಿ ಸ್ತಬ್ಧವಾದ ಚಂದ್ರಯಾನ 2: ಬೇಸರ ಛಾಯೆ ಎಲ್ಲೆಡೆ

|
Google Oneindia Kannada News

Recommended Video

ರಾಹುಲ್ ಮಾತು ಕೇಳಿ ಮೋದಿಗೆ ಅಚ್ಚರಿ..? | Chandrayaan 2 | Oneindia Kannada

ಬೆಂಗಳೂರು, ಸೆಪ್ಟೆಂಬರ್ 07: ಜಗತ್ತಿನ ಗಮನ ಸೆಳೆದಿದ್ದ ಚಂದ್ರಯಾನ 2, ಯಶಸ್ಸಿನ ಹತ್ತಿರಕ್ಕೆ ಹೋಗಿ ನಿರಾಸೆ ಉಂಟುಮಾಡಿದೆ. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ಗುರಿ ಸಾಧನೆ ಆಗಿ ಬಿಡುತ್ತದೆ ಎಂದು ಕೊಳ್ಳುವಾಗ ತಾಂತ್ರಿಕ ಅಡಚಣೆ ಉಂಟಾಗಿದೆ.

ಇಂದು ಚಂದ್ರಯಾನ 2 ಮಿಷನ್‌ನ ಅಂತಿಮ ಘಟ್ಟವಾಗಿತ್ತು. ವಿಕ್ರಂ ಲ್ಯಾಂಡರ್ ಅನ್ನು ಹೊತ್ತ ಆರ್ಬಿಟರ್ ಚಂದ್ರನ ಸುತ್ತ ಪರಿಭ್ರಮಿಸುತ್ತಾ ತನ್ನಿಂದ ಚಂದ್ರನ ಕೆಲವು ಕಿ.ಮೀ ಸಮೀಪದ ಅಂತರದಲ್ಲಿ ವಿಕ್ರಂ ಲ್ಯಾಂಡರ್‌ ಅನ್ನು ಬೇರ್ಪಡಿಸಿಕೊಂಡಿತು.

ಕೊನೆಯ ಕ್ಷಣದಲ್ಲಿ ಎದುರಾದ ನಿರಾಶೆ: ಸಂವಹನ ಕಳೆದುಕೊಂಡ ಚಂದ್ರಯಾನ 2 ನೌಕೆಕೊನೆಯ ಕ್ಷಣದಲ್ಲಿ ಎದುರಾದ ನಿರಾಶೆ: ಸಂವಹನ ಕಳೆದುಕೊಂಡ ಚಂದ್ರಯಾನ 2 ನೌಕೆ

ಆರ್ಬಿಟರ್‌ನಿಂದ ಬೇರ್ಪಟ್ಟ ವಿಕ್ರಂ ಲ್ಯಾಂಡರ್, ಇಸ್ರೋ ವಿನ್ಯಾಸ ಮಾಡಿರುವಂತೆ, ಸ್ವ-ಬುದ್ದಿಶಕ್ತಿಯಿಂದ ಚಂದ್ರನ ಮೇಲ್ಮೈ ಅನ್ನು ಸ್ಪರ್ಷಿಸಬೇಕಿತ್ತು, ಇಸ್ರೋದ ಎಣಿಕೆಯಂತೆಯೇ ವಿಕ್ರಂ ಲ್ಯಾಂಡರ್ ಸಹ ಕಾರ್ಯನಿರ್ವಹಿಸಿತು. ಬೆಂಗಳೂರಿನ ಇಸ್ರೋ ಕೇಂದ್ರದ ಒಳಗೆ ವಿಜ್ಞಾನಿಗಳು ಸಹ ಖುಷಿಯಿಂದ ಐತಿಹಾಸಿಕ ಘಟನೆಗೆ ಕಾಯುತ್ತಿದ್ದರು.

Chandrayana 2: Vikram Lander lost communication with ISRO

ಇನ್ನೇನು ಚಂದ್ರನ ಮೇಲ್ಮೈ 2.1 ಕಿ.ಮೀ ದೂರದಲ್ಲಿರುವ ಸಮಯದಲ್ಲಿ ವಿಕ್ರಂ ಲ್ಯಾಂಡರ್ ನೊಂದಿಗೆ ಇಸ್ರೋ ಸಂಪರ್ಕ ಕಳೆದುಕೊಂಡಿತು. ವಿಕ್ರಂ ಲ್ಯಾಂಡರ್‌ ಮಾಹಿತಿಯನ್ನು ಆರ್ಬಿಟರ್‌ಗೆ, ಆರ್ಬಿಟರ್ ಇಸ್ರೋಕ್ಕೆ ಕಳಿಸುವಂತೆ ವಿನ್ಯಾಸ ಮಾಡಲಾಗಿತ್ತು. ಆದರೆ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡ ಕಾರಣ ಚಂದ್ರಯಾನ 2 ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ.

Chandrayaan 2 Live Updates: ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್Chandrayaan 2 Live Updates: ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್

ಈವರೆಗೆ ಯಾರೂ ಹೋಗದಿದ್ದ ಚಂದ್ರನ ದಕ್ಷಿಣ ಭಾಗದ ಅನ್ವೇಷಣೆಗೆ ನೌಕೆಯನ್ನು ಇಸ್ರೋ ಕಳಿಸಿತ್ತು ಆದರೆ ಪ್ರಯತ್ನ ಯಶಸ್ವಿ ಆಗಲಿಲ್ಲ. ಈಗ ದೊರೆತಿರುವ ಮಾಹಿತಿಯನ್ನು ವಿಶ್ಲೇಷಣೆ ಮಾಡುತ್ತಿದ್ದೇವೆ, ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

English summary
Chandrayan 2 not success as expected, Vikram Lander lost its communication when it is near to Moon surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X