ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರಯಾನ 2: ಇಸ್ರೋದಿಂದ ಮತ್ತೊಂದು ಸಂತಸದ ಸುದ್ದಿ!

|
Google Oneindia Kannada News

Recommended Video

Chandrayaan-2 : ಇಸ್ರೋದಿಂದ ಮತ್ತೊಂದು ಸಂತಸದ ಸುದ್ದಿ! | Oneindia Kannada

ಬೆಂಗಳೂರು, ಸೆಪ್ಟೆಂಬರ್ 09: ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಮುರಿದಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಇಳಿಯುವುದಕ್ಕೆ ಇನ್ನೂ 2.1 ಕಿ.ಮೀ. ಅಂತರವಿದ್ದಾಗ ಆರ್ಬಿಟರ್ ಜೊತೆ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು.

ಆರ್ಬಿಟರ್ ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ವೇಗ ತಗ್ಗಿಸಲು ಸಾಧ್ಯವಾಗದೆ, ಚಂದ್ರನ ಮೇಲೆ ಅಪ್ಪಳಿಸಿ ಮುರಿದು ಹೋಗಿರಬಹುದು. ಆದ್ದರಿಂದಲೇ ಸಂಪರ್ಕ ಸಾಧ್ಯವಾಗುತ್ತಿಲ್ಲ ಎನ್ನಲಾಗಿತ್ತು. ಆದರೆ 'ವಿಕ್ರಂ' ಮುರಿದುಹೋಗಿಲ್ಲ, ಕೇವಲ ಅದರ ಒಂದು ಭಾಗ ಬಾಗಿದಂತಾಗಿದೆ ಅಷ್ಟೇ ಎಂದು ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದೇಕೆ? ವಿಜ್ಞಾನಿ ನೀಡಿದ ವಿವರ...ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದೇಕೆ? ವಿಜ್ಞಾನಿ ನೀಡಿದ ವಿವರ...

ಆರ್ಬಿಟರ್ ಕಳಿಸಿದ ಚಿತ್ರದಲ್ಲಿ ಲ್ಯಾಂಡರ್ ಸುರಕ್ಷಿತವಾಗಿರುವುದು ಪತ್ತೆಯಾಗಿದೆ.

ಉದ್ದೇಶಿತ ಸ್ಥಳದ ಬದಿಯಲ್ಲೇ ಲ್ಯಾಂಡ್

ಉದ್ದೇಶಿತ ಸ್ಥಳದ ಬದಿಯಲ್ಲೇ ಲ್ಯಾಂಡ್

"ಉದ್ದೇಶಿತ ಸ್ಥಳದ ಬಳಿಯಲ್ಲೇ ವಿಕ್ರಂ ಲ್ಯಾಂಡ್ ಆಗಿದ್ದು, ಅದು ಮುರಿದುಹೋಗಿಲ್ಲ. ಮುರಿದು ಹೋಗಿದ್ದರೆ ಚಿತ್ರದಲ್ಲಿ ಹಲವು ಬಿಡಿ ಭಾಗಗಳು ಕಾಣಿಸಬೇಕಿತ್ತು. ಆದರೆ ಅದರಲ್ಲ ಲ್ಯಾಂಡರ್ ಮಾತ್ರವೇ ಕಾಣಿಸುತ್ತಿದೆ" ಎಂದು ಇಸ್ರೋ ಅಧಿಕಾರಿ ಹೇಳಿದ್ದಾರೆ.

ಫೋಟೋ ಕ್ಲಿಕ್ಕಿಸಿದ ಆರ್ಬಿಟರ್

ಫೋಟೋ ಕ್ಲಿಕ್ಕಿಸಿದ ಆರ್ಬಿಟರ್

ಚಂದ್ರನ ಸುತ್ತ ಇನ್ನೂ ಏಳು ವರ್ಷಗಳ ಕಾಲ ಸುತ್ತಲಿರುವ ಆರ್ಬಿಟರ್ ತಾನೇ ಹೊತ್ತು ತಂದ ವಿಕ್ರಂ ಮತ್ತು ಅದರ ಒಡಲಲ್ಲಿರುವ ಪ್ರಜ್ಞಾನ್ ರೋವರ್ ಅನ್ನು ತನ್ನಿಂದ ಬೇರ್ಪಡಿಸಿ, ಚಂದ್ರನ ಮೇಲೆ ನೆಲೆ ನಿಲ್ಲಲು ಕಳಿಸಿತ್ತು. ಆದರೆ ಸಂಪರ್ಕ ಕಡಿತವಾದ ನಂತರ ವಿಕ್ರಂ ನ ಹುಡುಕಾಟಕ್ಕೆ ತೊಡಗಿದ ಆರ್ಬಿಟರ್ ಭಾನುವಾರ ಲ್ಯಾಂಡರ್ ನ ಥರ್ನಲ್ ಚಿತ್ರವೊಂದನ್ನು ಕಳಿಸಿತ್ತು. ಇದು ಇಸ್ರೋ ವಿಜ್ಞಾನಿಗಳ ಪಾಲಿಗೆ ಮತ್ತಷ್ಟು ಭರವಸೆಯನ್ನು ಉಳಿಸಿತ್ತು.

ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?

ಇನ್ನೂ ಹನ್ನೆರಡು ದಿನ ಬಾಕಿ!

ಇನ್ನೂ ಹನ್ನೆರಡು ದಿನ ಬಾಕಿ!

ವಿಕ್ರಂ ಲ್ಯಾಂಡರ್ ಗೆ ಚಂದ್ರನ ಮೇಲೆ ಇರುವ ಆಯಸ್ಸು 14 ದಿನಗಳು ಮಾತ್ರ. ಈಗಾಗಲೇ ಎರಡು ದಿನ ಕಳೆದಿದ್ದು, ಇನ್ನು ಹನ್ನೆರಡು ದಿನ ಕಾಲಾವಕಾಶವಿದೆ. ಅಷ್ಟರಲ್ಲಿ ಲ್ಯಾಂಡರ್ ಆರ್ಬಿಟರ್ ನೊಂದಿಗೆ ಸಂಪರ್ಕ ಸಾಧಿಸಿದರೆ ಭಾರತವು ವಿಶ್ವದ ಬಾಹ್ಯಾಕಾಶ ಇತಿಹಾಸದಲ್ಲೇ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದಂತಾಗುತ್ತದೆ.

ಸಂವಹನ ಕಡಿತಕ್ಕೆ ಕಾರಣ

ಸಂವಹನ ಕಡಿತಕ್ಕೆ ಕಾರಣ

"ಸಂಪರ್ಕ ಕಡಿತದ ಬಗ್ಗೆ ಮಾತನಾಡಿದ ಚಂದ್ರಯಾನ 1 ರ ನಿರ್ದೇಶಕರಾಗಿದ್ದ ಮೈಲ್ ಸ್ವಾಮಿ ಅಣ್ಣಾದುರೈ, ಚಂದ್ರನಲ್ಲಿನ ಪ್ರತಿಕೂಲ ವಾತಾವರಣ ಮತ್ತು ಅಡೆತಡೆಗಳಿಂದ ವಿಕ್ರಂ, ಆರ್ಬಿಟರ್ ಜೊತೆ ಸಂವಹನ ಕಳೆದುಕೊಂಡಿರಬಹುದು" ಎಂದಿದ್ದಾರೆ.

English summary
Chandrayaan-2 lander Vikram Not Broken, ISRO official said, ISRO's moon mission Chandrayaan-2,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X