ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಮೊದಲ ಶ್ರೀಮನ್ಮಾಧ್ವ ಸಂಘದ ಹೊಸ ಸಭಾಂಗಣ ಲೋಕಾರ್ಪಣೆ

ಭಾರತದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪ್ರಾರಂಭವಾದ ಮಧ್ವ ಸಂಘಕ್ಕೆ ಇದೀಗ ಎಂಬತ್ತಾರು ವಸಂತದ ಸಂಭ್ರಮ. ಈ ಸಂಭ್ರಮಾಚರಣೆಯನ್ನು ಹೆಚ್ಚಿಸಲು ಮೇ5 ರಂದು ಚಾಮರಾಜಪೇಟೆಯ ಶ್ರೀಮನ್ಮಾಧ್ವ ಸಂಘದ ನೂತನ ಮಂಗಳಧಾಮ ಸಭಾಂಗಣ ಲೋಕಾರ್ಪಣೆ ಮಾಡಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 04: ನಗರದ ಪ್ರಾಚೀನ ವಸತಿ ಪ್ರದೇಶ ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಕನ್ನಡನಾಡಿನ ಹೆಮ್ಮೆಯ ಆಚಾರ್ಯರಾದ ಶ್ರೀಮಧ್ವರ ಹೆಸರಿನಲ್ಲಿರುವ ಇಡೀ ಭಾರತದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪ್ರಾರಂಭವಾದ ಸಂಘಕ್ಕೆ ಇದೀಗ ಎಂಬತ್ತಾರು ವಸಂತದ ಸಂಭ್ರಮ.

ಈ ಸಂಭ್ರಮಾಚರಣೆಯನ್ನು ಹೆಚ್ಚಿಸಲು ಮೇ 5 ರಂದು ಚಾಮರಾಜಪೇಟೆಯ ಶ್ರೀಮನ್ಮಾಧ್ವ ಸಂಘದ ನೂತನ ಮಂಗಳಧಾಮ ಸಭಾಂಗಣ ಲೋಕಾರ್ಪಣೆ ಮಾಡಲಾಗಿದೆ.

ಹಿರಿಯ ಚೇತನರಾದ ವರವಣಿ ರಾವ್ಮರಾಯರು, ಸುಭೋಧ ರಾಮರಾಯರು, ರಾವ್ ಬಹದ್ದೂರ್ ವೆಂಕಟೇಶಾಚಾರ್ , ಮುಂತಾದವರಿಂದ ಸ್ಥಾಪಿಸಲ್ಪಟ್ಟ ಈ ಸಂಘದ ಕಾರ್ಯ ಚಟುವಟಿಕೆಗಳಿಗೆ ಅಂದಿನ ಮೈಸೂರು ಮಹಾರಾಜರು ಸ್ಥಳದಾನ ಮಾಡಿದ ಐತಿಹಾಸಿಕ ಘಟನೆ ಇನ್ನು ಅನೇಕರ ನೆನಪಿಂಗಳದಲ್ಲಿ ಹಸಿರಾಗಿದೆ.

ಸೋಸಲೆ ವ್ಯಾಸರಾಜ ಮಠದ ವಿದ್ಯಾಪ್ರಸನ್ನತೀರ್ಥಶ್ರೀಪಾದರಿಂದ ಪ್ರಾರಂಭಗೊಂಡ ಈ ಸಂಘ ಅಂದಿನ ಮೈಸೂರು ಸರ್ಕಾರದ ಸಂಘ ಸಂಸ್ಥೆಗಳ ನಿಬಂಧಕರ ಅಡಿಯಲ್ಲಿ ನೋಂದಣಿ ಪಡೆದ ಮೊದಲ ಸಂಘವೆಂಬ ಹೆಗ್ಗಳಿಕೆ ಇದಕ್ಕಿದೆ.

Chamarajpet Sri Madhwa Association gets new Auditorium

ಅನೇಕ ಮಾಧ್ವ ಪೀಠಾಧಿಪತಿಗಳು ಇಲ್ಲಿಗೆ ಅಗಮಿಸಿ ಜ್ಞಾನಯಜ್ಞವನ್ನು ನಡೆಸಿ ಇದನ್ನು ಒಂದು ಪಾವನ ತಾಣವನ್ನಾಗಿ ಮಾಡಿದ ಫಲವಾಗಿ 1983 ರಲ್ಲಿ ಮಧ್ವಾಚಾರ್ಯರ ಶಿಲಾಪ್ರತಿಮೆ ಪ್ರತಿಷ್ಠಾಪಿಸಿ ವ್ಯಾಸ ದಾಸ ಸಾಹಿತ್ಯದ ಅನೇಕ ವಿದ್ವನ್ಮಣಿಗಳನ್ನು ತಯಾರು ಮಾಡುತ್ತ ಬಂದಿದೆ.

ಪೂಜ್ಯ ಪೇಜಾವರಶ್ರೀಗಳು ಇದನ್ನು ನೈಮಿಶಾರಣ್ಯ ಎಂದು ಶ್ಲಾಘಿಸಿದ್ದಾರೆ. ಮಂತ್ರಾಲಯ ಮಠದ ಶ್ರೀಸುಶಮೀಂದ್ರತೀರ್ಥರು ಮತ್ತು ಶ್ರೀ ಸುಯತೀಂದ್ರತೀರ್ಥರು ಸಂಘದ ನಿಸ್ವಾರ್ಥ ಸೇವಾ ಚಟುವಟಿಕೆಗಳನ್ನು ಗುರುತಿಸಿ ಸುಜಯಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಸಂಘದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತವಾದ ನೂತನ ಮಂಗಳಧಾಮ ಸಭಾಂಗಣವನ್ನು ಇದೇ ಮೇ 5, 2017 ಶುಕ್ರವಾರದಂದು ಕೋಲಾರ ಜಿಲ್ಲೆ ತಂಬಿಹಳ್ಳಿ ಮಾಧವ ತೀರ್ಥ ಸಂಸ್ಥಾನದ ಶ್ರೀ ವಿದ್ಯಾಸಾಗರ ಮಾಧವತೀರ್ಥರು ಮತ್ತು ಕಿರಿಯ ಪಟ್ಟ ಶ್ರೀವಿದ್ಯಾಸಿಂಧು ತೀರ್ಥರು ಲೋಕಾರ್ಪಣೆಗೊಳಿಸಿದರು.

English summary
A news auditorium inaugurated today(May 05) at Sriman Madhwa Sangha, Chamarajpet 5th cross, Bengaluru. This religious organisation is the first association in India which is opened the name of Sri Madhwacharya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X