ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಸಾಹಿತ್ಯ ಹಬ್ಬಕ್ಕೆ ಚಾಮರಾಜಪೇಟೆ ಸಜ್ಜು

|
Google Oneindia Kannada News

ಬೆಂಗಳೂರು, ಫೆ. 6: ಬೆಂಗಳೂರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ನಾಗಮಣಿ ಎಸ್ ರಾವ್ ಆಯ್ಕೆಯಾಗಿದ್ದಾರೆ.

ಸಾಹಿತ್ಯ ಸಮ್ಮೇಳನ ಮಾರ್ಚ್ 1 ರಂದು ಚಾಮರಾಜಪೇಟೆಯ ಮಕ್ಕಳಕೂಟ ಆವರಣದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸದ್ಯದ ಸಾಹಿತ್ಯ ಮತ್ತು ಬರವಣಿಗೆ ಕುರಿತಾದ ಚಿಂತನ ಮಂಥನಗಳು ನಡೆಯಲಿದೆ ಎಂದು ಕಸಾಪದ ರಾ. ಸು.ವೆಂಕಟೇಶ ತಿಳಿಸಿದ್ದಾರೆ.[ಚಿತ್ರಗಳಲ್ಲಿ: ಶ್ರವಣಬೆಳಗೊಳ ನುಡಿಹಬ್ಬದ ಹೈಲೈಟ್ಸ್]

literature

ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆ ಹಾಗು ಅನೇಕ ಗೋಷ್ಠಿಗಳು ನಡೆಯಲಿವೆ. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ನೆಲೆಸಿರುವ ನಾಗಮಣಿ ರಾವ್ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.[ಒಂದೇ ನಿರ್ಣಯದೊಂದಿಗೆ ಶ್ರವಣಬೆಳಗೊಳ ಸಮ್ಮೇಳನಕ್ಕೆ ತೆರೆ]

ಸ್ತ್ರೀ ವಾದಿ ಲೇಖಕಿ: ಸ್ತ್ರೀ ವಾದಿ ಲೇಖಕಿಯಾಗಿ ಗುರುತಿಸಿಕೊಂಡಿರುವ ನಾಗಮಣಿ ರಾವ್ 'ಸ್ತ್ರಿ ಪಥ' ಮತ್ತು 'ಧೀಮತಿಯರು' ಕೃತಿ ಮಹಿಳಾ ಶಕ್ತಿ, ಮಹಿಳೆ ನಡೆದು ಬಂದ ದಾರಿ, ಮುಂದೆ ಇಡಬೇಕಾದ ಹೆಜ್ಜೆ ಎಲ್ಲವನ್ನು ವಿವರಿಸಿದೆ. ಸಂವೇದನೆಯುಳ್ಳ ವಿಚಾರಗಳನ್ನು ಸದಾ ಹರಿಯಬಿಡುವ ಲೇಖಕಿ ಸಾಹಿತ್ಯ ಸಮ್ಮೇಳನದ ನೇತೃತ್ವ ವಹಿಸುತ್ತಿರುವುದು ಸಂತಸ ತಂದಿದೆ ಎಂದು ವೆಂಕಟೇಶ ತಿಳಿಸಿದ್ದಾರೆ.

English summary
Bengaluru: Chamarajpet constituency gears up for 2nd sahitya sammelana. The literature fest will be held on March 1, feminist Nagamani rao elected as president of sahitya sammelana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X