ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಬಲೆಗೆ ಬಿದ್ದ ಸರಗಳ್ಳ ಪಲ್ಸರ್ ಬಾಬು

ನಗರದಲ್ಲಿ ನಡೆದ ಹಲವಾರು ಸರಗಳ್ಳ ಪ್ರಕರಗಳಲ್ಲಿ ಈ ಪಲ್ಸರ್ ಬಾಬು ಬಂಧಿಸಲು ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ ಈತ ಸೋಮವಾರ ಬಂಧಿಯಾಗಿದ್ದಾನೆ.

|
Google Oneindia Kannada News

ಬೆಂಗಳೂರು, ಮೇ 22: ಕಪ್ಪು ಬಣ್ಣದ ಸ್ಕೂಟರ್ ನಲ್ಲಿ ಬಂದು ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ, ಪಲ್ಸರ್ ಬಾಬು ಎಂದೇ ಕುಖ್ಯಾತಿ ಪಡೆದಿದ್ದ ಬಾಬುವನ್ನು ಸೆರೆ ಹಿಡಿಯುವಲ್ಲಿ ಉಪ್ಪಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದಲ್ಲಿ ನಡೆದ ಹಲವಾರು ಸರಗಳ್ಳ ಪ್ರಕರಗಳಲ್ಲಿ ಈತನನ್ನು ಬಂಧಿಸಲು ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ ಈತ ಸೋಮವಾರ ಬಂಧಿಯಾಗಿದ್ದಾನೆ.

Chain Snatcher Pulser Babu arrested by Bengaluru Police

ಈತ, ಗೊಟ್ಟಿಗೆರೆಯ ಹನುಮಾನ್ ನಗರದವ ಎಂದು ಪೊಲೀಸರು ತಿಳಿಸಿದ್ದು, ಕಳೆದ ಹಲವಾರು ತಿಂಗಳುಗಳಿಂದ, ನಗರದ ನಾನಾ ಭಾಗಗಳಲ್ಲಿ ಕಳ್ಳತನ ನಡೆಸುತ್ತಿದ್ದ.

ಮೂಲತಃ ಚನ್ನಪಟ್ಟಣದವರನಾದ ಆರೋಪಿಯು ಈ ಹಿಂದೆ ರಾಜೇಶ, ಗುಂಡ ಎಂಬ ಹೆಸರುಗಳಿಂದಲೂ ತನ್ನನ್ನು ಪರಿಚಯಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಬಸವೇಶ್ವರ ನಗರ, ಕಾಟನ್ ಪೇಟೆ, ಪುಟ್ಟೇನ ಹಳ್ಳಿ, ಕಲಾಸಿಪಾಳ್ಯ, ಕೋಣನ ಕುಂಟೆ, ಗಿರಿ ನಗರ, ಚಂದ್ರಾ ಲೇಔಟ್ ಹಾಗೂ ಇನ್ನಿತರ ಕಡೆಗಳಲ್ಲಿ ತನ್ನ ಚಾಲಾಕಿ ತನ ತೋರುತ್ತಿದ್ದ.

ಸಾಮಾನ್ಯವಾಗಿ ರಸ್ತೆಯಲ್ಲಿ ಹೋಗುತ್ತಿರುವ ಒಂಟಿ ಮಹಿಳೆಯರೇ ಈತನ ಕುಕೃತ್ಯಗಳಿಗೆ ಟಾರ್ಗೆಟ್ ಆಗುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದ್ದು, ಬಂಧಿತನಿಂದ 17 ಲಕ್ಷ 70 ಸಾವಿರ ಮೌಲ್ಯದ 610 ಗ್ರಾಂ ತೂಕದ 15 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆಯಲ್ಲದೆ, ಸುಮಾರು 16 ಸರಗಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

English summary
A chain snacher named Babu alias Pulser Babu has been arrested by Bengaluru police on May 22, 2017. Police has been trying to trap him since many months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X