ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂತನ ಪೊಲೀಸ್ ಆಯುಕ್ತರಾಗಿ ಸಿ.ಎಚ್ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ

|
Google Oneindia Kannada News

ಬೆಂಗಳೂರು, ಮೇ17: ಬೆಂಗಳೂರು ನಗರದ ಆಯುಕ್ತರಾಗಿ ಸಿ.ಎಚ್ ಪ್ರತಾಪ್ ರೆಡ್ಡಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಗಮಿತ ಆಯುಕ್ತರಾದ ಕಮಲ್ ಪಂಥ್ ರವರು ಸಿ.ಎಚ್ ಪ್ರತಾಪ್ ರೆಡ್ಡಿಯವರಿಗೆ ಬ್ಯಾಟನ್ ಹಸ್ತಾಂತರಿಸುವ ಮೂಲಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ನೂತನ ಪೊಲೀಸ್ ಆಯುಕ್ತ ಸಿ.ಎಚ್ ಪ್ರತಾಪ್ ರೆಡ್ಡಿಯವರಿಗೆ ಶುಭವನ್ನು ಕೋರಿದರು. ಪ್ರತಾಪ್ ರೆಡ್ಡಿಯವರಿಗೆ ಶುಭವನ್ನು ಕೋರಲು ನಗರದ ಎಲ್ಲಾ ವಲಯದ ಡಿಸಿಪಿಗಳು ಖುದ್ದು ಹಾಜರಿದ್ದರು.

ನೂತನ ಪೊಲೀಸ್ ಆಯುಕ್ತರ ಸರ್ವಿಸ್ ಹಿಸ್ಟರಿ: ಸಿ ಹೆಚ್ ಪ್ರತಾಪ್ ರೆಡ್ಡಿಯವರು 35ನೇ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. 1991ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ಸಿ. ಹೆಚ್ ಪ್ರತಾಪ್ ರೆಡ್ಡಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದಾರೆ. ಮೊದಲು ಹಾಸನ ಜಿಲ್ಲೆಯಲ್ಲಿ ಹೆಚ್ಚುವರಿ ಎಸ್ಪಿಯಾಗಿ ರಾಜ್ಯದಲ್ಲಿ ಸೇವೆಯನ್ನು ಆರಂಭಿಸಿದ್ದರು. ಬಿಜಾಪುರ, ಕಲ್ಬುರ್ಗಿ, ಮಂಗಳೂರನಲ್ಲಿ ಎಸ್ಪಿಯಾಗಿಯೂ ಕರ್ತವ್ಯವನ್ನು ನಿರ್ವಹಿಸಿದ್ದ ಪ್ರತಾಪ್ ರೆಡ್ಡಿಯವರು ಸೈಬರ್ ವಿಚಾರದಲ್ಲಿ ತಜ್ಞರೆನಿಸಿಕೊಂಡಿದ್ದರು. ಇನ್ನಷ್ಟು ವಿವರ ಮುಂದಿದೆ..

 ಸಿಬಿಐನಲ್ಲಿ ಎಸ್ಪಿಯಾಗಿಯೂ ಕೆಲಸವನ್ನು ನಿರ್ವಹಿಸಿದ್ದಾರೆ

ಸಿಬಿಐನಲ್ಲಿ ಎಸ್ಪಿಯಾಗಿಯೂ ಕೆಲಸವನ್ನು ನಿರ್ವಹಿಸಿದ್ದಾರೆ

ಆ ಬಳಿಕ ಕೇಂದ್ರ ಎರವಲು ಸೇವೆಗೆ ತೆರಳಿದ್ದ ಪ್ರತಾಪ್ ರೆಡ್ಡಿವರು ಸಿಬಿಐನಲ್ಲಿ ಎಸ್ಪಿಯಾಗಿಯೂ ಕೆಲಸವನ್ನು ನಿರ್ವಹಿಸಿದ್ದಾರೆ. ಮೂರು ವರ್ಷಗಳ ಕೇಂದ್ರ ಸೇವೆಯ ಬಳಿಕ ಬೆಂಗಳೂರು ನಗರ ಹೆಚ್ಚುವರಿ ಆಯುಕ್ತರಾಗಿ, ಪಶ್ಚಿವ ವಲಯದ ಐಜಿಪಿಯಾಗಿಯೂ ಕರ್ತವ್ಯವನ್ನು ನಿರ್ವಹಿಸಿದ್ದರು. ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ಕಾನೂನು ಸುವ್ಯವವಸ್ಥೆಯ ಎಡಿಜಿಪಿಯಾಗಿ ಸಾಕಷ್ಟು ಸಮರ್ಥವಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇದೀಗ ಬೆಂಗಳೂರು ನಗರದ ಪೊಲೀಸ್ ಕಮೀಷನರ್ ಆಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

 ಸೈಬರ್ ಸೆಕ್ಯೂರಿಟಿ ವಿಂಗ್ ಸಲಹೆಗಾರ

ಸೈಬರ್ ಸೆಕ್ಯೂರಿಟಿ ವಿಂಗ್ ಸಲಹೆಗಾರ

ಬೆಂಗಳೂರು ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ ವೇರ್ ಆ್ಯಂಡ್ ಸರ್ವೀಸಸ್ ಕಂಪನೀಸ್ (ಸೈಬರ್ ಸೆಕ್ಯೂರಿಟಿ ವಿಂಗ್) ನಲ್ಲಿ ಸಲಹೆಗಾರರಾಗಿಯು ಸೇವೆಯನ್ನು ಸಲ್ಲಿಸಿದ್ದಾರೆ. ಸೈಬರ್ ಸೆಕ್ಯೂರಿಟಿ ಸೆಲ್ ನ ನಿರ್ದೇಶಕರಾಗಿಯು ಸೇವೆಯನ್ನು ಮಾಡಿದ್ದಾರೆ.ಹೀಗಾಗಿ ಪ್ರತಾಪ್ ರೆಡ್ಡಿಯವರಿಗೆ ಸೈಬರ್ ಕುರಿತಾದ ಹೆಚ್ಚು ಜ್ಞಾನವನ್ನು ಹೊಂದಿದ್ದಾರೆ.

ನಿರ್ಗಮಿತ ಆಯುಕ್ತ ಕಮಲ್ ಪಂಥ್ ಹೇಳಿದ್ದೇನು?

ನಿರ್ಗಮಿತ ಆಯುಕ್ತ ಕಮಲ್ ಪಂಥ್ ಹೇಳಿದ್ದೇನು?

ಇನ್ನು ನಿರ್ಗಮಿತ ಪೊಲೀಸ್ ಕಮೀಷನರ್ ಕಮಲ್ ಪಂಥ್,''ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ನನಗೆ 22 ತಿಂಗಳು ಸೇವೆಯನ್ನು ಮಾಡಲು ಅವಕಾಶವನ್ನು ನೀಡಿದಾರೆ. ಡಿಜಿಪಿಯಾಗಿ ಬಡ್ತಿಯಾದ ಬಳಿಕವು ಬೆಂಗಳೂರು ನಗರ ಆಯುಕ್ತರಾಗಿ ಕೆಲಸ ಮಾಡಲು ಅವಕಾಶ ನೀಡಿದ್ದರು. ಇದೀಗ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿಯು ಉತ್ತಮ ಕಾರ್ಯವನ್ನು ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ನೂತನ ಪೊಲೀಸ್ ಆಯುಕ್ತರಾದ ಸಿ ಹೆಚ್ ಪ್ರತಾಪ್ ರೆಡ್ಡಿಯವರಿಗೆ ಶುಭವನ್ನು ಕೋರಿದರು.

ನೂತನ ಪೊಲೀಸ್ ಆಯುಕ್ತರಿಗೆ ಇರುವ ಸವಾಲುಗಳೇನು?

ನೂತನ ಪೊಲೀಸ್ ಆಯುಕ್ತರಿಗೆ ಇರುವ ಸವಾಲುಗಳೇನು?

ನೂತನವಾಗಿ ಅಧಿಕಾರವನ್ನು ವಹಿಸಿಕೊಂಡರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರಿ ಬಿಬಿಎಂಪಿ ಚುನಾವಣೆ, ಚುನಾವಣೆ ವೇಳೆ ರೌಡಿಗಳ ನಿಯಂತ್ರಣ, ಡ್ರಗ್ಸ್ ದಂಧೆಗೆ ಕಡಿವಾಣ, ಸೈಬರ್ ಕ್ರೈಂ ಕಂಟ್ರೋಲಿಂಗ್ ಸೇರಿದಂತೆ ಹಲವಾರು ಸವಾಲುಗಳು ಎದುರಾಗಿದೆ. ಆಯುಕ್ತರು ಈ ಸವಾಲನ್ನು ಎದುರಿಸಲು ಸಜ್ಜಾಗಿದ್ದು ತಮ್ಮ ಆಡಳಿತದ ಮೂಲಕವೇ ಬೆಂಗಳೂರಿಗರಿಗೆ ಸಾಮರ್ಥ್ಯ ಋಜುವಾತು ಮಾಡಬೇಕಿದೆ.

English summary
CH Pratap Reddy takes charge as Bengaluru City Police Commissioner on May 17th. Kamal Panth handover batan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X