• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಕ್ಷಯ ತದಿಗೆ: ಚಿನ್ನ ವಜ್ರಾಭರಣ ಖರೀದಿ ರಿಯಾಯಿತಿ

By Mahesh
|

ಬೆಂಗಳೂರು, ಏ.26: ಭಾರತದ ಅಗ್ರಗಣ್ಯ ಚಿನ್ನ ಹಾಗೂ ವಜ್ರಾಭರಣ ಮಾರಾಟ ಸಂಸ್ಥೆ ತನಿಷ್ಕ್ ತನ್ನ ಗ್ರಾಹಕರಿಗೆ ಅಕ್ಷಯ ತದಿಗೆ ಅಂಗವಾಗಿ ಭಾರಿ ರಿಯಾಯಿತಿ ನೀಡುತ್ತಿದೆ. ಪ್ರತಿ 10 ಗ್ರಾಂ ಚಿನ್ನ ಖರೀದಿಗೆ ಉಚಿತ ಚಿನ್ನದ ನಾಣ್ಯ ನೀಡಿಕೆ ಸೇರಿದಂತೆ ಹಲವು ರಿಯಾಯಿತಿಗಳು ಗ್ರಾಹಕರಿಗೆ ಕಾದಿವೆ.

ಇದರ ಜತೆಗೆ ವಜ್ರಾಭರಣಗಳಲ್ಲಿ ಬಳೆ, ನೆಕ್ಲೇಸ್, ಕಿವಿಯೋಲೆ ಸೆಟ್ ಹೀಗೆ 2 ಲಕ್ಷ ರು ತನಕದ ಖರೀದಿಗೆ ಶೇ 20 ರಷ್ಟು ವಿನಾಯತಿ ಸಿಗಲಿದೆ. ಈ ಸೌಲಭ್ಯಗಳು ಏ.26ರಿಂದ ಮೇ 2 ರ ತನಕ ಜಾರಿಯಲ್ಲಿರುತ್ತದೆ.

ಅಕ್ಷಯ ತದಿಗೆ ಸಂದರ್ಭದಲ್ಲಿ ಗ್ರಾಹಕರು ಚಿನ್ನ, ವಜ್ರ ಖರೀದಿಸಲು ಉತ್ಸುಕರಾಗಿರುತ್ತಾರೆ. ಗ್ರಾಹಕರನ್ನು ಸಂತುಷ್ಟಗೊಳಿಸಲು ವಿವಿಧ ರೀತಿಯ ಆಕರ್ಷಕ ಕೊಡುಗೆ ನೀಡುವುದು ನಮ್ಮ ಗುರಿ ಎಂದು ತನಿಷ್ಕ್ ಸಂಸ್ಥೆಯ ಮಾರುಕಟ್ಟೆ ಹಾಗೂ ರೀಟೈಲ್ ವಿಭಾಗದ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ಹೇಳಿದ್ದಾರೆ.

ಗ್ರಾಹಕರಿಗೆ ಎಂದಿನಂತೆ ಕಂತಿನಲ್ಲಿ ಹಣ ಪಾವತಿ ಮಾಡುವ ಸೌಲಭ್ಯವನ್ನು ನೀಡಲಾಗುತ್ತದೆ. ಅನುತ್ತರ ಹಾಗೂ ಗೋಲ್ಡನ್ ಹಾರ್ವೆಸ್ಟ್ ಸ್ಕೀಮ್(GHS) ಗಳು ಗ್ರಾಹಕರಿಗೆ ನೀಡಿರುವ ಎರಡು ಯೋಜನೆಗಳಾಗಿದೆ. ಆನ್ ಲೈನ್ ಮೂಲಕವೂ ಚಿನ್ನ, ವಜ್ರ ಖರೀದಿ ಮಾಡುವ ಅವಕಾಶ ಲಭ್ಯವಿದೆ. www.tanishq.co.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಥವಾ 1800 258 2598 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ವೈಶಾಖ ಮಾಸದ ಮೂರನೇ ದಿನ ತೃತೀಯ ಅಥವಾ ತದಿಗೆ ವಿಶೇಷ ದಿನವಾಗಿದ್ದು ಅಂದು ಖರೀದಿಸಿದ ವಸ್ತುಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ. ಈ ಬಾರಿ ಮೇ.2 ರಂದು ಅಕ್ಷಯ ತದಿಗೆ ಆಚರಿಸಲಾಗುತ್ತದೆ. ಮಹಾವಿಷ್ಣುವಿನ ಅವತಾರ ಪರಶುರಾಮನ ಹುಟ್ಟುಹಬ್ಬದ ಜತೆಗೆ ಸುವರ್ಣ ಯುಗಕ್ಕೆ ಕೂಡಾ ಇಂದೇ ನಾಂದಿ ದಿನವಾಗಿದೆ.

ಟಾಟಾ ಸಮೂಹದ ತನಿಷ್ಕ್ ಜ್ಯುವೆಲ್ಲರಿ ಭಾರತೀಯ ಗ್ರಾಹಕರ ಆಶೋತ್ತರಕ್ಕೆ ತಕ್ಕಂತೆ ಆಭರಣಗಳನ್ನು ರೂಪಿಸುತ್ತಾ ಬಂದಿದೆ. ದೇಶದೆಲ್ಲೆಡೆ 86 ನಗರಗಳಲ್ಲಿ 164ಕ್ಕೂ ಅಧಿಕ ಆಭರಣ ಮಳಿಗೆಗಳನ್ನು ತನಿಷ್ಕ್ ಹೊಂದಿದೆ. ಚಿನ್ನ ಹಾಗೂ ಆಭರಣ ಸೆಟ್ (22 ಹಾಗೂ 18 karat ನಲ್ಲಿ) ಸುಮಾರು 5000ಕ್ಕೂ ಅಧಿಕ ವಿನ್ಯಾಸದಲ್ಲಿ ನೀಡುತ್ತಿರುವ ತನಿಷ್ಕ್ ವಿಶೇಷ ತಯಾರಿಕಾ ಘಟಕಗಳನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tanishq, India’s largest and most preferred jewellery brand announces exciting offers on the auspicious occasion of Akshaya Trithiya. Rejoicing the spirit of gold, Tanishq, is offering a free gold coin on every purchase of minimum 10 gms of gold jewellery
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more