ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ದೂರಿಗೆ ಇಲ್ಲಿ ಸಂಪರ್ಕಿಸಿ!

|
Google Oneindia Kannada News

ಬೆಂಗಳೂರು, ಅ. 13: ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆಯೂ ಕಳೆದ ಸೆಪ್ಟಂಬರ್ 29, 2020 ರಿಂದಲೇ ಜಾರಿಯಲ್ಲಿದೆ. ಹೀಗಾಗಿ ಚುನಾವಣೆಗೆ ಸಂಬಂಧಿಸಿದ ದೂರು, ಮೇಲ್ವಿಚಾರಣೆಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಮತದಾನ ನಡೆಯುವ ಅ. 28, 2020 ವರೆಗೆ ಚುನಾವಣಾ ಅಕ್ರಮದ ಕುರಿತು ದೂರು ಸಲ್ಲಿಸಲು ಹಾಗೂ ಇತರ ವಿಚಾರಣೆಗಾಗಿ ಈ ಮುಂದಿನ ಕಂಟ್ರೋಲ್ ರೂಂಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ನೇಮಕ ಮಾಡಲಾಗಿದೆ. ನಾಮಪತ್ರ ಸಂಬಂಧಿತ ಪ್ರಕ್ರಿಯೆಗಳು ಅವರ ಕಚೇರಿಯಲ್ಲಿ ನಡೆಯುತ್ತಿದೆ. ಚುನಾವಣಾ ಸಂಬಂಧಿತ ವಿವಿಧ ದೂರು ಸಲ್ಲಿಸಲು ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳು ಬರಲಿದ್ದು, ಈ ಚುನಾವಣಾ ಸಂಬಂಧಿತ ವಿವಿಧ ದೂರುಗಳಿಗೆ ಮೇಲ್ವಿಚಾರಣೆ ಹಾಗೂ ನಿವಾರಣೆಗಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ದೂ.ಸಂ. 080-22109680 ಸಂಪರ್ಕಿಸಬಹುದಾಗಿದೆ.

ಶಿರಾ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಘೋಷಣೆಶಿರಾ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಘೋಷಣೆ

ಜೊತೆಗೆ ಇಡೀ ಕ್ಷೇತ್ರದಲ್ಲಿನ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ಕೊಡಲು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳನ್ನು ಕೇಂದ್ರ ಚುನಾವಣಾ ಆಯೋಗ ಕೊಟ್ಟಿದೆ.

ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಅವರ ಕಚೇರಿಯ ಚುನಾವಣಾ ವಿಭಾಗ, ದೂ.ಸಂ. 08194-222176, ಚಳ್ಳಕೆರೆ ತಾಲ್ಲೂಕು ಕಚೇರಿ, ದೂ.ಸಂ. 08195-250648, ಚಿತ್ರದುರ್ಗ ತಾಲ್ಲೂಕು ಕಚೇರಿ, ದೂ.ಸಂ.: 08194-222416, ಹಿರಿಯೂರು ತಾಲ್ಲೂಕು ಕಚೇರಿ, ದೂ.ಸಂ.: 08193-263226, ಹೊಳಲ್ಕೆರೆ ತಾಲ್ಲೂಕು ಕಚೇರಿ, ದೂ.ಸಂ. 08191-275062, ಹೊಸದುರ್ಗ ತಾಲ್ಲೂಕು ಕಚೇರಿ, ದೂ.ಸಂ. 08199-230224, ಮೊಳಕಾಲ್ಮೂರು ತಾಲ್ಲೂಕು ಕಚೇರಿ, ದೂ.ಸಂ. 08198-229234 ಸಂಪರ್ಕಿಸಬಹುದಾಗಿದೆ.

ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿ ಚೇರಿ, ದೂ.ಸಂ. 08192-272953, ದಾವಣಗೆರೆ ತಾಲ್ಲೂಕು ಕಚೇರಿ, ದೂ.ಸಂ. 08192-235344, ಮಹಾನಗರ ಪಾಲಿಕೆ, ದೂ.ಸಂ. 08192-234444, ಹರಿಹರ ತಾಲ್ಲೂಕು ಕಚೇರಿ, ದೂ.ಸಂ. 08192-272959, ಜಗಳೂರು ತಾಲ್ಲೂಕು ಕಚೇರಿ, ದೂ.ಸಂ. 08196-227242 ಸಂಪರ್ಕಿಸಬಹುದಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ, ದೂ.ಸಂ. 08156-277071, ಬಾಗೇಪಲ್ಲಿ ತಾಲ್ಲೂಕು ಕಚೇರಿ, ದೂ.ಸಂ. 08150-282225, ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ, ದೂ.ಸಂ. 08156-272564, ಚಿಂತಾಮಣಿ ತಾಲ್ಲೂಕು ಕಚೇರಿ, ದೂ.ಸಂ. 08154-252164, ಗೌರಿಬಿದನೂರು ತಾಲ್ಲೂಕು ಕಚೇರಿ, ಮೊ.ಸಂ. 8867575221, ಗುಡಿಬಂಡೆ ತಾಲ್ಲೂಕು ಕಚೇರಿ, ದೂ.ಸಂ. 08156-261250, ಶಿಡ್ಲಘಟ್ಟ ತಾಲ್ಲೂಕು ಕಚೇರಿ, ದೂ.ಸಂ. 08158-256763 ಸಂಪರ್ಕಿಸಬಹುದಾಗಿದೆ.

ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ, ದೂ.ಸಂ. 08152-243507, ಬಂಗಾರಪೇಟೆ ತಾಲ್ಲೂಕು ಕಚೇರಿ, ದೂ.ಸಂ. 08153-255263, ಕೆಜಿಎಫ್ ತಾಲ್ಲೂಕು ಕಚೇರಿ, ದೂ.ಸಂ. 08153-271674, ಕೋಲಾರ ತಾಲ್ಲೂಕು ಕಚೇರಿ, ದೂ.ಸಂ. 08152-222056, ಮಾಲೂರು ತಾಲ್ಲೂಕು ಕಚೇರಿ, ದೂ.ಸಂ. 08151-232699, ಮುಳಬಾಗಿಲು ತಾಲ್ಲೂಕು ಕಚೇರಿ, ದೂ.ಸಂ. 08159-242049, ಶ್ರೀನಿವಾಸಪುರ ತಾಲ್ಲೂಕು ಕಚೇರಿ, ದೂ.ಸಂ. 08157-245060 ಸಂಪರ್ಕಿಸಬಹುದಾಗಿದೆ.

Recommended Video

Corona ಬಿಕ್ಕಟ್ಟಿನ ನಡುವೆಯೂ ISRO ಮಹತ್ವದ ಹೆಜ್ಜೆ | Oneindia Kannada
ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು

ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗ, ದೂ.ಸಂ. 0816-2252359/0816-2252361, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿ, ದೂ.ಸಂ. 08133-267242, ಗುಬ್ಬಿ ತಾಲ್ಲೂಕು ಕಚೇರಿ, ದೂ.ಸಂ. 08131-222234, ಕೊರಟಗೆರೆ ತಾಲ್ಲೂಕು ಕಚೇರಿ, ದೂ.ಸಂ. 08138-232153, ಕುಣಿಗಲ್ ತಾಲ್ಲೂಕು ಕಚೇರಿ, ದೂ.ಸಂ. 08132-220122, ಮಧುಗಿರಿ ತಾಲ್ಲೂಕು ಕಚೇರಿ, ದೂ.ಸಂ. 08137-282324, ಪಾವಗಡ ತಾಲ್ಲೂಕು ಕಚೇರಿ, ದೂ.ಸಂ. 08136-244242, ಶಿರಾ ತಾಲ್ಲೂಕು ಕಚೇರಿ, ದೂ.ಸಂ. 08135-275243, ತಿಪಟೂರು ತಾಲ್ಲೂಕು ಕಚೇರಿ, ದೂ.ಸಂ. 08134-251039, ತುಮಕೂರು ತಾಲ್ಲೂಕು ಕಚೇರಿ, ದೂ.ಸಂ. 0816-2251364, ತುರುವೆಕೆರೆ ತಾಲ್ಲೂಕು ಕಚೇರಿ, ದೂ.ಸಂ. 08139-287325 ಅನ್ನು ಸಂಪರ್ಕಿಸಿ ದೂರು ದಾಖಲಿಸಬಹುದಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ನವೀನ್ ರಾಜ್ ಸಿಂಗ್ ಅವರು ತಿಳಿಸಿದ್ದಾರೆ.

English summary
The Central Election Commission has issued telephone numbers and other information to lodge complaints about election irregularities regarding Southeast Graduate constituency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X